Advertisement

ಪುತ್ತೂರು ತಾಲೂಕು ಪಂಚಾಯತ್‌ ಉಪಾಧ್ಯಕ್ಷರಾಗಿ ಲಲಿತಾ ಈಶ್ವರ್‌

11:33 PM Jul 16, 2019 | mahesh |

ಪುತ್ತೂರು: ಪುತ್ತೂರು ತಾ.ಪಂ. ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಬಿಜೆಪಿಯ ಲಲಿತಾ ಈಶ್ವರ್‌ ಅವಿರೋಧವಾಗಿ ಆಯ್ಕೆಯಾದರು.

Advertisement

ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಚುನಾವಣ ಪ್ರಕ್ರಿಯೆ ನಡೆಸಿಕೊಟ್ಟರು. ನಾಮಪತ್ರ ಸಲ್ಲಿಕೆಯ ಅವಧಿ ಯಲ್ಲಿ ಲಲಿತಾ ಈಶ್ವರ್‌ ಒಬ್ಬರೇ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ನಾಮಪತ್ರ ಪರಿ ಶೀಲನೆ ನಡೆಸಿ ಲಲಿತಾ ಈಶ್ವರ್‌ ಅವರು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಘೋಷಿಸಲಾಯಿತು.

2016ರಲ್ಲಿ ನಡೆದ ತಾ.ಪಂ. ಚುನಾವಣೆ ಯಲ್ಲಿ 24 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಗೆದ್ದ ಬಿಜೆಪಿಯಿಂದ ಅಧ್ಯಕ್ಷರಾಗಿ ಭವಾನಿ ಚಿದಾನಂದ್‌ ಮತ್ತು ಉಪಾಧ್ಯಕ್ಷರಾಗಿ ರಾಜೇಶ್ವರಿ ಆಯ್ಕೆಯಾಗಿದ್ದರು. ಎರಡೂವರೆ ವರ್ಷ ಕಳೆದ ಬೆನ್ನಲ್ಲೆ ಅಧ್ಯಕ್ಷೆ ಭವಾನಿ ಚಿದಾನಂದ್‌ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಬಿಜೆಪಿಯ ರಾಧಾಕೃಷ್ಣ ಬೋರ್ಕರ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2018ರ ಡಿ. 28ರಂದು ಉಪಾಧ್ಯಕ್ಷೆ ರಾಜೇಶ್ವರಿ ಅವರೂ ರಾಜೀನಾಮೆ ನೀಡಿದ್ದರು.

ಲಲಿತಾ ಈಶ್ವರ್‌ ಆಯ್ಕೆ ಘೋಷಿಸಿದ ಸಹಾಯಕ ಆಯುಕ್ತರು ನೂತನ ಉಪಾಧ್ಯಕ್ಷರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಇಒ ಜಗದೀಶ್‌ ಎಸ್‌., ಸಾಮಾಜಿಕ ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ ಉಪಸ್ಥಿತರಿದ್ದರು. ತಾ.ಪಂ. ಸದಸ್ಯರಾದ ಭವಾನಿ ಚಿದಾನಂದ್‌, ಸಾಜ ರಾಧಾಕೃಷ್ಣ ಆಳ್ವ, ಶಿವರಂಜನ್‌, ರಾಜೇಶ್ವರಿ, ತೇಜಸ್ವಿನಿ ಗೌಡ ಕಟ್ಟಪುಣಿ, ತಾರಾ ತಿಮ್ಮಪ್ಪ ಪೂಜಾರಿ, ಪಿ.ವೈ. ಕುಸುಮಾ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮುಕುಂದ ಗೌಡ, ಮೀನಾಕ್ಷಿ ಮಂಜುನಾಥ್‌, ಜಯಂತಿ ಆರ್‌. ಗೌಡ, ದಿವ್ಯಾ ಪುರುಷೋತ್ತಮ, ಸುಜಾತಾ ಆಚಾರ್ಯ ಪಾಲ್ಗೊಂಡರು.

ಅಭಿನಂದನ ಸಮಾರಂಭ
ತಾ.ಪಂ. ಸಭಾಂಗಣದಲ್ಲಿ ಉಪಾಧ್ಯಕ್ಷರಿಗೆ ಸಾರ್ವಜನಿಕ ಅಭಿನಂದನ ಸಮಾರಂಭ ನಡೆಯಿತು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಪುತ್ತೂರು ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ತಾ.ಪಂ. ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ್‌, ಮಾಜಿ ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಕುಸುಮಾ ಪಿ.ವೈ., ಸಾಜ ರಾಧಾಕೃಷ್ಣ ಆಳ್ವ, ಮುಕುಂದ ಗೌಡ, ತೇಜಸ್ವಿನಿ ಗೌಡ, ಹರೀಶ್‌ ಬಿಜತ್ರೆ ಅಭಿನಂದನ ಮಾತುಗಳನ್ನಾಡಿದರು.

Advertisement

ಲಲಿತಾ ಮಾತನಾಡಿ, ಸಾಮಾನ್ಯ ಕಾರ್ಯ ಕರ್ತೆಯಾಗಿದ್ದ ನನಗೆ ಪಕ್ಷ ಅವಕಾಶ ನೀಡಿದೆ. ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷೆ, ತಾ.ಪಂ. ಸದಸ್ಯೆ ಹಾಗೂ ಉಪಾಧ್ಯಕ್ಷೆ ಸ್ಥಾನಗಳನ್ನು ಅಲಂಕರಿಸುವಂತಾಯಿತು.ಅಭಿವೃಧ್ಧಿಯ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಅವಕಾಶ ಹಂಚುವ ನಿರ್ಧಾರದಂತೆ ದ್ವಿತೀಯ ಅವಧಿಗೆ ಅಧಕ್ಷ -ಉಪಾಧ್ಯಕ್ಷ ಅವಕಾಶ ಬದಲಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದರು.

ಅನುಭವಿ
ನೂತನ ಉಪಾಧ್ಯಕ್ಷೆ ಲಲಿತಾ ಈಶ್ವರ್‌ ಅವರು ಬಜತ್ತೂರು ಗ್ರಾ.ಪಂ. ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2016ರಲ್ಲಿ ನಡೆದ ತಾ.ಪಂ. ಚುನಾವಣೆಯಲ್ಲಿ ಚಾರ್ವಾಕ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಇದೀಗ ತಾ.ಪಂ. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next