Advertisement

ಲಾಲ್‌ಬಾಗ್‌ ಫ‌ಲಪುಷ್ಪ ಪ್ರವೇಶ ದರ ದುಬಾರಿ

12:28 PM Aug 02, 2018 | |

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ ಸಸ್ಯತೋಟದಲ್ಲಿ ಪ್ರತಿವರ್ಷ ನಡೆಯುವ ಫ‌ಲಪುಷ್ಪ ಪ್ರದರ್ಶನ ಈ ಬಾರಿ ಆ.4 ರಿಂದ ಆರಂಭವಾಗಲಿದ್ದು, ಪ್ರವೇಶ ಶುಲ್ಕ ಕಳೆದ ಬಾರಿಗಿಂತ 10 ರೂ. ಹೆಚ್ಚಳವಾಗಿದೆ.

Advertisement

ಆ.4ರಿಂದ 15ರವರೆಗೆ ನಡೆಯಲಿರುವ ಫ‌ಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ವಯಸ್ಕರಿಗೆ 70 ರೂ ಹಾಗೂ ಮಕ್ಕಳಿಗೆ 20 ರೂ ನಿಗದಿಪಡಿಸಲಾಗಿದೆ. ಕಳೆದ ಬಾರಿಯಂತೆ ವಾರದ ಕೊನೆಯ ದಿನಗಳಲ್ಲಿ ಪ್ರವೇಶ ಶುಲ್ಕ ವಿನಾಯ್ತಿ ನೀಡಿಲ್ಲ. ಎಲ್ಲಾ ದಿನಗಳು ಒಂದೇ ಶುಲ್ಕ ಜಾರಿಯಲ್ಲಿರಲಿದೆ.

ಕಳೆದ ಎರಡು ಫ‌ಲಪುಷ ಪ್ರದರ್ಶನಗಳಲ್ಲಿ ಜಿಎಸ್‌ಟಿ ಶುಲ್ಕ ಸೇರ್ಪಡೆ ಮಾಡದ ಪರಿಣಾಮದಿಂದಾಗಿ ವಾಣಿಜ್ಯ ತೆರಿಗೆ ಇಲಾಖೆ ಸುಮಾರು ಒಂದು ಕೋಟಿ.ರೂ. ವರೆಗೂ ದಂಡ ವಿಧಿಸಿದೆ. ಹಾಗಾಗಿ ಈ ಬಾರಿ ಆ ತಪ್ಪು ಆಗದಂತೆ ಹೆಚ್ಚರ ವಹಿಸಿ ಜಿಎಸ್‌ಟಿ ತೆರಿಗೆಯನ್ನು ಪ್ರವೇಶ ಶುಲ್ಕದಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್‌ಟಿಯಿಂದ ಶೂಲ್ಕ ಹೆಚ್ಚಳವಾಗುತ್ತಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಫ‌ಲಪುಷ್ಪ ಪ್ರದರ್ಶನ ಲಾಭದ ಉದ್ದೇಶವಲ್ಲ. ಇದನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ತೋಟಗಾರಿಕೆ ಇಲಾಖೆಯು ಆದಾಯ ತೆರಿಗೆ ಇಲಾಖೆಗೆ ಮನವಿ ಮಾಡಿದೆ. ಆದರೆ, ಮನವಿ ತಿರಸ್ಕರಿಸಿರುವ ಆದಾಯ ಇಲಾಖೆ ಮನೋರಂಜನಾ ಶುಲ್ಕ ಅನ್ವಯ ಮಾಡಲು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next