Advertisement
ಗುರುವಾರದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ ವಿಶ್ವದ ನಂ.3 ಆಟಗಾರ ಆ್ಯಂಟನ್ ಆ್ಯಂಡರ್ಸನ್ ಅವರನ್ನು 21-16, 21-18 ನೇರ ಗೇಮ್‌ಗಳಿಂದ ಮಣಿಸಿ ಆಚ್ಚರಿಯ ಫಲಿತಾಂಶ ದಾಖಲಿಸಿದರು. ಇವರಿಬ್ಬರು ಮುಖಾಮುಖಿ ಆದದ್ದು ಇದೇ ಮೊದಲು. ಸೇನ್ ಆವರಿನ್ನು ಚೀನದ ಲು ಗುವಾಂಗ್ ಜು ಅವರನ್ನು ಎದುರಿಸಲಿದ್ದಾರೆ.
Related Articles
Advertisement
ಮೊದಲ ಸುತ್ತಿನಲ್ಲಿ ಸಿಂಧು ಚೀನದ ಝೀ ಯಿ ವಾಂಗ್ ಅವರನ್ನು 21-18, 21-13 ಅಂತರದಿಂದ ಮಣಿಸಿದ್ದರು. ಸೈನಾ ನೆಹ್ವಾಲ್ ಸ್ಪೇನ್‌ನ ಬೀಟ್ರಿಝ್ ಕೊರಾಲೆಸ್ ವಿರುದ್ಧ 21-17, 21-19 ಅಂತರದ ಮೇಲುಗೈ ಸಾಧಿಸಿದ್ದರು.
ವನಿತಾ ಡಬಲ್ಸ್‌ನಲ್ಲಿ ತಿೃಷಾ ಜಾಲಿ- ಗಾಯತ್ರಿ ಗೋಪಿಚಂದ್ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ.
ಸಾಲು ಸಾಲು ಸೋಲು :
ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್ ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 20-22, 11-21ರಿಂದ ಪರಾಭವಗೊಂಡರು. ಎಚ್.ಎಸ್. ಪ್ರಣಯ್ ಅವರನ್ನು ಥಾಯ್ಲೆಂಡ್‌ನ ಕುನ್ಲವುತ್ ವಿತಿದ್ಸರಣ್ 21-15, 24-22ರಿಂದ ಹಿಮ್ಮೆಟ್ಟಿಸಿದರು. ಸಮೀರ್ ವರ್ಮ ಕೂಡ ಸೋಲಿನ ಸುಳಿಗೆ ಸಿಲುಕಿದರು. ಅವರನ್ನು ನೆದರ್ಲೆಂಡ್ಸ್‌ನ ಮಾರ್ಕ್ ಕಾಲ್ಜೂ 21-18, 21-11ರಿಂದ ಕೆಡವಿದರು.
ಪುರುಷರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಅವರು ಸ್ಕಾಟ್ಲೆಂಡ್‌ನ ಅಲೆಕ್ಸಾಂಡರ್ ಡುನ್-ಆ್ಯಡಂ ಹಾಲ್ ಕೈಯಲ್ಲಿ 21-17, 21-19 ಅಂತರದ ಸೋಲನುಭವಿಸಿದರು. ಎಂ.ಆರ್. ಅರ್ಜುನ್-ಧ್ರುವ ಕಪಿಲ, ಕೃಷ್ಣ ಪ್ರಸಾದ್ ಗರಗ್-ವಿಷ್ಣುವರ್ಧನ್ ಕೂಡ ಗೆಲುವು ಕಾಣುವಲ್ಲಿ ವಿಫಲರಾದರು.