Advertisement

‘ಲಕ್ಷ್ಯ’ಚಿತ್ರ ಗುರುವಾರ ರಾಜ್ಯಾದ್ಯಂತ ಬೆಳ್ಳಿ ತೆರೆಗೆ

09:17 PM Nov 17, 2021 | Team Udayavani |

ರಬಕವಿ-ಬನಹಟ್ಟಿ : ಸಾಮಾಜಿಕ ಕಳಕಳಿ ಹೊತ್ತು ಕೌಟುಂಬಿಕವಾಗಿ ಸಮಾಜದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಸಾಂಕೇತಿಕ ಪ್ರಯತ್ನದೊಂದಿಗೆ ಬೆಳ್ಳಿ ಪರದೆ ಮೇಲೆ ವಿಶೇಷ ಪಾತ್ರಗಳನ್ನು ಹೊತ್ತು ಬರುತ್ತಿರುವ  ‘ಲಕ್ಷ್ಯ’ ಕನ್ನಡ ಚಲನಚಿತ್ರವು ನ. 18 ಗುರುವಾರದಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕರಾದ ಆನಂದ ಶಿವಯೋಗಿ ಕೊಳಕಿ ಹೇಳಿದರು.

Advertisement

ಬುಧವಾರ ಸಂಜೆ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿನ ರಂಗ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ಈ ವೇಳೆ ನಿರ್ದೇಶಕ ರವಿ ಸಾಸನೂರ ಮಾತನಾಡಿ, ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರಾದ ಶಿವಯೋಗಿ ಕೊಳಕಿಯವರ ಪುತ್ರ ಆನಂದ ಅವರು ನಿರ್ಮಾಪಕರಾಗಿದ್ದು, ಚಿತ್ರಕಥೆ ಹಾಗು ಸಹ ನಿರ್ದೇಶನ, ಸಂಕಲನವನ್ನು ಎ. ಶಿವಕುಮಾರ ಮಾಡಿದ್ದಾರೆ. ನಿತಿನ್ ಆದ್ವಿಯವರ ಪ್ರಮುಖ ಪಾತ್ರದಲ್ಲಿ ಕನ್ನಡದ ಹೆಸರಾಂತ ನಟರಾದ ರಾಮೃಷ್ಣ, ಸಂತೋಷ ಜಾವರೆ, ಮಾಲತಿಶ್ರೀ ಮೈಸೂರ, ಶರ್ಮಿಳಾ, ಸಾಯಿ ಯಶಸ್ವಿನಿ, ಬೇಬಿ ಗಮನಾ, ಬೇಬಿ ದಿವ್ಯಾ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

ಜಾವಿನ್ ಸಿಂಗ್ ಸಂಗೀತದಲ್ಲಿ ಛಾಯಾಗ್ರಹಣವು ಆನಂದ ಚಂದ್ರಪ್ರಭು ಅವರಿಂದ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸುಮಾರು ಎರಡುವರೆ ಗಂಟೆಯ ಚಲನಚಿತ್ರದಲ್ಲಿ ೪ ಗೀತೆಗಳನ್ನು ಹೊಂದಿದ್ದು, ಪ್ರಮುಖವಾಗಿ ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ಬೆಳಗಾವಿ ಹಾಗು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿದೆ ಎಂದರು.

ಡ್ರೀಮ್ ಪಿಕ್ಟರ್ ಅವರ ಚೊಚ್ಚಲ ಸಿನಿಮಾ ಇದಾಗಿದ್ದು, ಬನಹಟ್ಟಿ ಹಾಗು ಗೋಕಾಕ ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡುವ ಸಿನಿಪ್ರಿಯರಿಗೆ ಉಚಿತವಾಗಿ ಟಿ-ಶರ್ಟ್ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

Advertisement

ಇದನ್ನೂ ಓದಿ : ಪಟಾಕಿ ಸಿಡಿಸಿ ಗಾಯಗೊಳಿಸಿದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

ನಿರ್ಮಾಪಕರಾಗಿ ಆನಂದ ಕೊಳಕಿ, ಸುಧೀರ ಹುಲ್ಲೋಳ್ಳಿ, ಎ. ಶಿವಕುಮಾರ, ರವಿ ಸಾಸನೂರ ಸಹಯೋಗದಲ್ಲಿ  ‘ಲಕ್ಷ್ಯ’ ಚಿತ್ರ ತೆರೆ ಕಾಣುತ್ತಿದೆ. ಒಟ್ಟಾರೆ ಕುಟುಂಬದವರೆಲ್ಲ ಸೇರಿ ನೋಡುವ ಚಿತ್ರವಾಗಿದ್ದು, ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತವನ್ನು ವಿಶೇಷ ಹಾಗು ವಿಭಿನ್ನ ರೀತಿಯಲ್ಲಿ ಸೆರೆ ಹಿಡಿಯುವ ಮೂಲಕ ಕ್ಯಾಮೆರಾ ಕೈಚಳಕ ತೋರಿಸುವಲ್ಲಿ ಛಾಯಾಗ್ರಾಹಕರು ಯಶಸ್ವಿಯಾಗಿದ್ದಾರೆ ಎಂದು ರವಿ ಸಾಸನೂರ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next