Advertisement

ಅತ್ಯಾಚಾರವೆಸಗಿ ಲಕ್ಷ್ಮೀ ವಿಠ್ಠಲ್ ಕಳ್ಳಿಮನಿ ಕೊಲೆ : ಲಕ್ಷ್ಮೀ ಬಿ ಆರೋಪ

06:24 PM Mar 21, 2022 | Team Udayavani |

ಕುಷ್ಟಗಿ : ಧಾರವಾಡ ಜಿಲ್ಲೆ ಕುಂದಗೋಳ ಗ್ರಾಮದ ಯರಗುಪ್ಪಿ ಗ್ರಾಮದಲ್ಲಿ ಲಕ್ಷ್ಮೀ ವಿಠ್ಠಲ್ ಕಳ್ಳಿಮನಿ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರೂ ಅದನ್ನು ಸಹಜ ಸಾವು ಎಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರಬ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಬಿ. ಪೋಲೀಸ್ಪಾಟೀಲ ಆರೋಪಿಸಿದ್ದಾರೆ.

Advertisement

ಈ ಕುರಿತು ಮಾತನಾಡಿದ ಅವರು ಈ ಪ್ರಕರಣದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕೊಲೆಗಡುಕರನ್ನು ರಕ್ಷಿಸುತ್ತಿದ್ದು, ಅಮಾಯಕಿ ಕುರಿಗಾಹಿ ಲಕ್ಷ್ಮೀ ಕಳ್ಳಿಮನಿ ಮೇಲೆ ನಡೆದ ದುಷ್ಕೃತ್ಯ ಹೃದಯಾಘಾತವೆಂದು ಬಿಂಬಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.

ಈ ಪ್ರಕರಣ ಸೇರಿದಂತೆ ರಾಜ್ಯಾದ್ಯಾಂತ ಸಂಚಾರಿ ಕುರಿಗಾಯಿಗಳ ಮೇಲೆ ನಿರಂತರ ದೌರ್ಜನ್ಯಗಳಾಗುತ್ತಿದ್ದು, ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರಬೇಕು. ಕುರಿಗಾಯಿಗಳ ಆತ್ಮರಕ್ಷಣೆಗಾಗಿ ಕುರಿಗಾಯಿಗಳಿಗೆ ಬಂದೂಕು ಪರವಾನಿಗೆ ಹಾಗೂ ಸರಕಾರದಿಂದ ಉಚಿತ ಬಂದೂಕು, ಕುರಿಗಾಯಿ ಮಕ್ಕಳ ಶಿಕ್ಷಣ, ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಮಾರ್ಚ್ 22 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ, ಹಾಲುಮತ ಸಮಾಜದವರು, ಕುರಿಗಾಯಿಗಳು ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಂದು ಲಕ್ಷ್ಮೀ ಪೊಲೀಸ್ ಪಾಟೀಲ ಹೇಳಿದ್ದಾರೆ.

ಇದನ್ನೂ ಓದಿ : ಕುಷ್ಟಗಿ: ಮೃತಪಟ್ಟು ಪುಣ್ಯ ತಿಥಿ ಸಮೀಪಿಸುತ್ತಿದ್ದರೂ, ಇನ್ನೂ ದೊರೆಯದ ಕೋವಿಡ್ ಪರಿಹಾರ ಮೊತ್ತ

Advertisement

Udayavani is now on Telegram. Click here to join our channel and stay updated with the latest news.

Next