Advertisement

Lakshmi Kannada Movie: ನೈಜ ಘಟನೆ ಸುತ್ತ ಲಕ್ಷ್ಮೀ

11:28 AM Aug 14, 2024 | Team Udayavani |

“ಲಕ್ಷ್ಮೀ’ ಹೀಗೊಂದು ಕಿರುಚಿತ್ರ ತಯಾರಾಗಿದೆ. ಅಭಿಜಿತ್‌ ಪುರೋಹಿತ್‌ ಅವರ ನಿರ್ಮಾಣ ಈ ಕಿರುಚಿತ್ರಕ್ಕಿದ್ದು, ಒಬ್ಬ ಮಗ ತನ್ನ ತಾಯಿಯ ಕನಸನ್ನು ನನಸು ಮಾಡುವ ಹಾಗೂ ಪೂರ್ವಜರ ಸಂಸ್ಕೃತಿ, ಆಚಾರ ವಿಚಾರಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.

Advertisement

ಇದು ಅಭಿಜಿತ್‌ ಅವರ ತಾಯಿಯ ನಿಜವಾದ ಕಥೆ. ಹಿರಿಯ ನಟಿ ಪದ್ಮಜಾ ರಾವ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಅಭಿಯಿಸಿದ್ದಾರೆ. 68 ವರ್ಷದ ನಳಿನಿ ಪುರೋಹಿತ್‌ ಹಾಗೂ ಆಕೆಯ ಮನೆಯ ಲಕ್ಷ್ಮೀ ಕಂಬದ ನಡುವಿನ ಭಾವನಾತ್ಮಕ ಸಂಬಂಧ, ಅವರಿಬ್ಬರ ಮಧ್ಯೆ ಆಗುವ ಮನದ ಮಾತುಗಳು, ಆಕೆಯ ಚಿತ್ರಕಲೆಯ ಕನಸನ್ನು ನನಸು ಮಾಡುವ ಮಗ ಇದಿಷ್ಟನ್ನು ಅರ್ಧ ಗಂಟೆಯ ಈ ಕಿರುಚಿತ್ರದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಅಭಿಜಿತ್‌ ಹೇಳಿದ್ದಾರೆ.

ನಟಿ ಪದ್ಮಜಾ ರಾವ್‌ ಮಾತನಾಡಿ, ಅಭಿ ಈ ಕಥೆ ಹೇಳಿದಾಗ ನನಗೆ ಇಷ್ಟವಾದ ಮೂರು ಅಂಶಗಳೆಂದರೆ, ತಾಯಿ ಮಗನ ಪ್ರೀತಿ, ಎಮೋಷನಲ್‌ ಆದ ಕಥೆ ಜೊತೆಗೆ ನನಗೂ ಒಂದು ಚಿತ್ರ ನಿರ್ದೇಶನ ಮಾಡಲು ಪ್ರೇರೇಪಿಸಿದ್ದು. ಯಾವಾಗಲೂ ಹಣವೇ ಮುಖ್ಯವಾಗಲ್ಲ ಎನ್ನುವುದು ತಿಳಿಯಿತು  ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next