Advertisement
ಇಂದಿನ ದಿನಗಳಲ್ಲಿ ನಾವುಗಳು ಒಂದು ಗೀತೆಯನ್ನು ಬೆಳೆಸಲು ಯೂಟ್ಯೂಬ್, ಫೇಸ್‌ಬು ಕ್, ಟ್ವಿಟರ್, ವಾಟ್ಸ್ ಆ್ಯಪ್ ಹೀಗೆ ಸಿಕ್ಕ ಸಿಕ್ಕ ಕಡೆ ಹಾಡನ್ನು ಹಾಕಿ ತಿಣುಕಾಡುತ್ತಿದ್ದೇವೆ. ಬರೀ ಕ್ಯಾಸೆಟ್ ಹಾಗೂ ರೇಡಿಯೋ ಇದ್ದ ಕಾಲದಲ್ಲಿ ಭಟ್ಟರು ಜನಗಳಿಗೆ ಹಾಡುಗಳನ್ನು ತಲುಪಿಸುತ್ತಿದ್ದ ರೀತಿಗೆ ಹಾಗೂ ಅವರ ಸರಳತನಕ್ಕೆ ಬೆರಗಾಗಿದ್ದೆ! ಅಂದು ಬಹು ಬೇಡಿಕೆಯ ಕವಿಯಾಗಿ ಹೆಸರಾಗಿದ್ದರೂ ಸಹ ತಾವೇ ಒಂದು ಸೂಟ್‌ಕೇ ಸ್ ನಲ್ಲಿ ಕ್ಯಾಸೆಟ್‌ಗಳನ್ನು ತುಂಬಿಕೊಂಡು ತಮ್ಮ ಭಾಷಣ ಮುಗಿಸಿ ಕೆಳಗಿಳಿದು ಬಂದು ಸೂ ಟ್ ಕೇಸ್ ತೆರೆದು ಕ್ಯಾಸೆಟ್ ಮಾರುತ್ತಿದ್ದರು. ಭಾವಗೀತೆಗಳ ಮಹತ್ವ ನಾಡಿಗೆ ತಿಳಿಯಬೇಕು ಎಂಬುದಷ್ಟೇ ಅವರ ಕಾಳಜಿಯಾಗಿತ್ತು.
Related Articles
Advertisement
ಮಕ್ಕಳ ಮನಸ್ಸಿನಲ್ಲೂ ಜಾಗ ಹಿಡಿದ ಜಾಣ…
ಮನೆಯಲ್ಲಿ ಬಡತನವಿದ್ದ ಕಾರಣದಿಂದ ಹಿರಿಯರಾದ ತ.ಸು. ಶಾಮರಾಯರ ಮನೆಯಲ್ಲಿ ವಾರಾನ್ನದ ವಿದ್ಯಾರ್ಥಿಯಾಗಿದ್ದುಕೊಂಡು ಎಂ.ಎ. ಓದಿದವರು ಲಕ್ಷ್ಮೀ ನಾರಾಯಣ ಭಟ್ಟ. ಮುಂದೆ ಅವರು ಶ್ರೇಷ್ಠ ಅಧ್ಯಾಪಕ, ವಾಗ್ಮಿ, ವಿಮರ್ಶಕ, ಹೆಸರಾಂತ ಕವಿ ಎಂದೆ ಹೆಸರು ಮಾಡಿದರು. ಭಟ್ಟರಿಗೆ 60 ವರ್ಷಗಳು ತುಂಬಿದಾಗ ಅವರ ಶಿಷ್ಯರು, ಅಭಿಮಾನಿಗಳು ಸೇರಿ “ನೀಲಾಂಜನ’ ಹೆಸರಿನ ಅಭಿನಂದನಾ ಗ್ರಂಥವನ್ನು ಅರ್ಪಿಸಿದರು. ಅದರಲ್ಲಿ ತಮ್ಮ ಶಿಷ್ಯನ ಬೆಳವಣಿಗೆಯನ್ನು ಕಂಡು ಶಾಮರಾಯರು ಅಭಿಮಾನದಿಂದ ಬರೆದಿದ್ದ ಮಾತುಗಳಿವು: “..ಭಟ್ಟ ತನ್ನ ಯೋಗ್ಯತೆಗೆ ಅರ್ಹವಾದ ಪದವಿಯನ್ನೆಲ್ಲ ಪಡೆದ. ಅಧ್ಯಾಪಕನಾದ, ಪ್ರಾಧ್ಯಾಪಕನಾದ, ಕನ್ನಡ ವಿಭಾಗದ ನಿರ್ದೆಶಕನಾದ, ಹುಡುಗರಿಗೆಲ್ಲ ಮೆಚ್ಚಿನ ಗುರುವಾದ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಒಳಗಿನ ಶಕ್ತಿಯನ್ನು ಬರೆಹದಲ್ಲಿ ಎಲ್ಲರೂ ಮೆಚ್ಚುವ ಹಾಗೆ ಹೊರಹಾಕಿದ. ಅವನ ಕೆಲಸದ ಸಾಮರ್ಥ್ಯ, ಅವನಿಗೆ ದೊರೆತಿರುವ ಜನಪ್ರೀತಿ ನೋಡಿದಾಗ ಈ ಹುಡುಗ ನೋಡನೋಡುತ್ತಲೇ ಎಲ್ಲಿಂದೆಲ್ಲಿಗೆ ಏರಿಬಿಟ್ಟ ಅನ್ನಿಸಿ ಸಂತೋಷ ಆಶ್ಚರ್ಯ ಎರಡೂ ಆಗುತ್ತದೆ. ಮೊನ್ನೆ ನನ್ನ ಮೊಮ್ಮಗುವೊಂದು “ಅಜ್ಜ ಒಂದು ಹಾಡು ಹೇಳ್ತಿನಿ ಕೇಳು’ ಅಂತ ಹೇಳಿ “ಭಾಳ ಒಳ್ಳೆಯೋರು ನಮ್ಮ ಮಿಸ್ಸು’ ಅನ್ನೋ ಹಾಡನ್ನು ಬಹಳ ಹಿಗ್ಗಿನಿಂದ ಹೇಳಿತು. ಅದನ್ನ ಬರೆದವನು ಭಟ್ಟ! ದೊಡ್ಡವರು ಸರಿಯೇ, ಮಕ್ಕಳ ಮನಸ್ಸಿನಲ್ಲೂ ಇವನು ಹೇಗೆ ಜಾಗ ಗಿಟ್ಟಿಸಿಕೊಂಡಿದ್ದಾನಲ್ಲ, ಗಟ್ಟಿಗೆ ಅನ್ನಿಸಿತು.
ಉಪಾಸನಾ ಮೋಹನ್