ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಅವರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿ ಖಂಡಿತ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ವಕ್ತಾರರಾದ ಲಕ್ಷ್ಮಿ ಹೆಬ್ಬಾಳಕರ್ ನೇರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ದಾಳಿ ರಾಜಕೀಯ ದುರುದ್ದೇಶದಿಂದ ಮಾಡಿದ್ದು ಎಂದು ಹೇಳಿದರು.
ಈಗ ಉಪಚುನಾವಣೆ ನಡೆಯುತ್ತಿದೆ. ಈ ವೇಳೆ ದಾಳಿ ಮಾಡಿದ್ದಾರೆ, ಸಾರ್ವಜನಿಕವಾಗಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಹತ್ತು ಸಾರಿ ಹೇಳಿದ್ದಾರೆ. ಪ್ರತಿಯೊಂದು ರಾಜ್ಯದಲ್ಲಿ ಯಾರು ಕಾಂಗ್ರೆಸ್ ಪರವಾಗಿದ್ದಾರೆ ಅವರ ವಿರುದ್ಧ ಈ ರೀತಿ ದಾಳಿ ಮಾಡುತ್ತಿದ್ದಾರೆ. ಯಾರನ್ನೂ ಯಾರೂ ಕಟ್ಟಿ ಹಾಕಕ್ಕಾಗಲ್ಲ, ದೇಶದಲ್ಲಿ ಕಾನೂನು ಇದೆ. ಕಾನೂನು ಹೋರಾಟ ಮಾಡುತ್ತಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳರ್ ಹೇಳಿದರು.
ಇದನ್ನೂ ಓದಿ:ಡಿಕೆ ಶಿವಕುಮಾರ್ ದೊಡ್ಡಾಲಹಳ್ಳಿಯ ಮನೆ ಲಾಕರ್ ಒಡೆದಾಗ ಸಿಕ್ಕಿದ್ದು ಚಿಲ್ಲರೆ ಮಾತ್ರ!
ಪೂರಕ ದಾಖಲೆ ಇಟ್ಟುಕೊಂಡು ದಾಳಿ ಮಾಡಲು ಯಾರು ಬೇಡ ಎನ್ನುವದಿಲ್ಲ. ಆದರೆ ಒಂದು ವರ್ಷದಿಂದ ದಾಳಿ ಮಾಡಿಲ್ಲ, ಈಗ ಉಪಚುನಾವಣೆ ವೇಳೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದು ರಾಜಕೀಯ ಪಿತೂರಿ. ನಮ್ಮ ನಾಯಕರು ಇದಕ್ಕೆ ಉತ್ತರ ನೀಡಲು ಸಮರ್ಥರಿದ್ದಾರೆ ಎಂದರು.
ಇದನ್ನೂ ಓದಿ:ಡಿಕೆ ಶಿವಕುಮಾರ್,ಡಿಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿ: ಟ್ರಬಲ್ ಶೂಟರ್ ಗೆ ಮತ್ತೊಂದು ಟ್ರಬಲ್