Advertisement

640 ಕೃಷಿ ಕೂಲಿಕಾರರಿಗೆ ಕೆಲಸ

05:34 PM May 30, 2019 | Team Udayavani |

ಲಕ್ಷ್ಮೇಶ್ವರ: ಬರಗಾಲದ ಸಂದರ್ಭದಲ್ಲಿ ಕೃಷಿ ಕೂಲಿಕಾರರಿಗೆ ಎನ್‌ಆರ್‌ಇಜಿ ಯೋಜನೆಯಡಿ ಉದ್ಯೋಗ ಕಲ್ಪಿಸುವ ಜತೆಗೆ ಅವರದ್ದೇ ಜಮೀನುಗಳಲ್ಲಿನ ಮಣ್ಣಿನ ಸವಕಳಿ, ಅಂತರ್ಜಲಮಟ್ಟ ಹೆಚ್ಚಳ, ಮಣ್ಣಿನ ಫಲವತ್ತತೆ ಕಾಪಾಡುವ ಕಾರ್ಯಗಳನ್ನು ಮಾಡಲಾಗುತ್ತಿದೆ.

Advertisement

ಈ ಕಾರ್ಯದಲ್ಲಿ ನಿತ್ಯ 640 ಕೃಷಿ ಕೂಲಿಕಾರರು ಕೆಲಸ ಮಾಡುತ್ತಿದ್ದು ಶನಿವಾರ ಸ್ಥಳಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ, ಜಿಪಂ ಯೋಜನಾ ನಿರ್ದೇಶಕ ಟಿ.ದಿನೇಶ, ತಾಪಂ ಇಓ ಆರ್‌.ವೈ. ಗುರಿಕಾರ , ತಾಪಂ ಎನ್‌ಆರ್‌ಇಜಿ ಎಡಿ ಕೃಷ್ಣಪ್ಪ ಧರ್ಮರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪಗ್ರಹ ಆಧಾರಿತ ಸರ್ವೇ ಮಾಡಿದ ರೈತರ ಜಮೀನುಗಳ ಮೇಲ್ಭಾಗದಿಂದ ಕೆಳಕ್ಕೆ ಹರಿದು ಬರುವ ನೀರನ್ನು ಹೊಲಗಳಲ್ಲಿಯೇ ಇಂಗಿಸುವ ಸಲುವಾಗಿ ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಇಳಿಜಾರು ಬದುವು ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಅಂದಾಜು 631.16 ಹೆಕ್ಟೇರ್‌ ಪ್ರದೇಶದಲ್ಲಿ 1.65 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪರಿಶೀಲಿಸಲು ಆಗಮಿಸಿದ್ದ ಅಕಾರಿಗಳಿಗೆ ಕೂಲಿಕಾರರು ನಮಗೆ ಮಳೆಗಾಲ ಪ್ರಾರಂಭವಾಗುವರೆಗೂ ಕೆಲಸ ಕೊಡಬೇಕು ಮತ್ತು ಆದಷ್ಟು ಬೇಗ ಕೂಲಿ ಹಣ ಜಮೆ ಆಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಇಓ ಅವರು ದಿಬ್ಬದ ಕಣಿವೆ ಮಾದರಿಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಯೋಜನೆಯಡಿ ಒಂದು ಕಿರು ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರ ಹೊಲಗಳಲ್ಲಿ ಬದುವು ನಿರ್ಮಾಣ ಮಾಡಬಹುದು. ಇದರಿಂದ ಎಲ್ಲ ರೈತರಿಗೆ ಹಾಗೂ ಕೂಲಿಕಾರರಿಗೆ ಅನುಕೂಲ ಆಗುತ್ತದೆ. ಅಲ್ಲದೆ ಈ ಯೋಜನೆಯಡಿ ಕೇವಲ ಬದುವು ನಿರ್ಮಾಣ, ಕೆರೆ ಹೂಳೆತ್ತುವುದು, ರೈತ ರಸ್ತೆ ಅಭಿವೃದ್ಧಿಅಷ್ಟೆ ಅಲ್ಲದೆ ರೈತರಿಗೆ ಅನುಕೂಲ ಆಗುವಂಥ ಮರಗಳನ್ನು ನೆಡುವುದು, ತರಕಾರಿ ಬೆಳೆಗಳನ್ನು ಬದುವಿಗೆ ಅಡ್ಡಲಾಗಿ ಬೆಳೆಯಲು ಅವಕಾಶವಿದೆ. ಈ ಕುರಿತು ನಿಗದಿತ ಅರ್ಜಿ ನಮೂನೆ ಸಲ್ಲಿಸಬೇಕು ಎಂದುಹೇಳಿದರಲ್ಲದೇ ಈ ಸಂದರ್ಭದಲ್ಲಿ ಹಾಜರಿದ್ದ ಅರಣ್ಯ ತ್ತು ತೋಟಗಾರಿಕೆ ಇಲಾಖೆ ಅಕಾರಿಗಳಿಗೆ ಸೂಚನೆ ನೀಡಿದರು.

ಯಳವತ್ತಿ ಮತ್ತು ಗೊಜನೂರ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎನ್‌ಆರ್‌ಇಜಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬೆಳಗ್ಗೆಯೇ ಆಗಮಿಸಿದ ಅಧಿಕಾರಿಗಳು ಅಲ್ಲಿಯೇ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ, ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಪಿ.ಕೆ. ಹೊನ್ನಪ್ಪನವರ, ಪಿಡಿಓ ಪ್ರವೀಣ ಗೋಣೆಮ್ಮನವರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next