Advertisement

ಲಕ್ಷ್ಮೇಶ್ವರ: ಹೆಸರಿಗೆ ಕೊಂಬಿನ ಹುಳು ಕೀಟಬಾಧೆ

04:45 PM Jul 17, 2024 | Team Udayavani |

ಉದಯವಾಣಿ ಸಮಾಚಾರ
ಲಕ್ಷ್ಮೇಶ್ವರ: ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಗೆ ಹಳದಿರೋಗ, ಹಸಿರುಕೀಟ, ಸೀರು, ಬೂದುರೋಗದ ಜತೆಗೆ ಇದೀಗ ಕೊಂಬಿನ ಹುಳು ಕೀಟಬಾಧೆ ಆವರಿಸಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಒದ್ದಾಡುತ್ತಿದ್ದಾರೆ. ಮುಂಗಾರಿನಲ್ಲಿ ಮೊದಲು ರೈತರ ಕೈ ಸೇರುವ ಹೆಸರು ಆಶಾದಾಯಕ ವಾಣಿಜ್ಯ ಬೆಳೆಯಾಗಿದೆ. ಲಕ್ಷ್ಮೇಶ್ವರ ಸೇರಿ ತಾಲೂಕಿನ ಶಿಗ್ಲಿ, ದೊಡ್ಲೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ ಸೇರಿ 10 ಸಾವಿರ ಎಕರೆಯಲ್ಲಿ ಹೆಸರು ಬಿತ್ತನೆಯಾಗಿದೆ.

Advertisement

ಕಡಿಮೆ ಅವಧಿ, ಖರ್ಚು-ವೆಚ್ಚ ಲೆಕ್ಕ ಹಾಕಿ ಮುಖ್ಯವಾಗಿ ಯಂತ್ರ ಕಟಾವಿಗೆ ಬರುವ ಎತ್ತರ ತಳಿಯ ದುಬಾರಿ ಬೀಜ ಬಿತ್ತನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಹೆಸರಿಗೆ 8682 ರೂ. ಬೆಂಬಲ ಘೋಷಣೆ ಮಾಡಿದ್ದರಿಂದ ತಾಲೂಕಿನಲ್ಲಿ ಈ ವರ್ಷ ಗುರಿ ಮೀರಿ ಹೆಸರು ಬಿತ್ತನೆಯಾಗಿದೆ. ಆದರೆ ಒಂದು, ಒಂದೂವರೆ ತಿಂಗಳ ಕಾಲಾವಧಿಯ ಹೆಸರು ಬೆಳೆಗೆ ಈಗ ಸರಣೀಕ್ರಮದಲ್ಲಿ ಕೀಟಬಾಧೆ ಆವರಿಸಿರುವುದು ನೆಚ್ಚಿನ ಬೆಳೆ ಉಳಿಸಿಕೊಳ್ಳುವಲ್ಲಿ ರೈತರು ಹೈರಾಣಾಗಿದ್ದಾರೆ. ಇದರಿಂದ ರೈತರಿಗೆ “ಮೊದಲ ತುತ್ತಿಗೆ ಹಳ್ಳು’ ಎನ್ನುವ ಸ್ಥಿತಿ ಎದುರಾಗಿದೆ.

ಹೆಸರು ಬೆಳೆಗೆಗೆ ಅಲ್ಲಲ್ಲಿ ಕೊಂಬಿನಹುಳು ಬಾಧೆ ಆವರಿಸುತ್ತಿದೆ. ಈ ಹಿನ್ನೆಲೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಸಲಹೆ-ಸೂಚನೆ ನೀಡುತ್ತಿದ್ದೇವೆ. ಹಸಿರು ಬಣ್ಣದ ಮತ್ತು ದೇಹದ ಹಿಂಭಾಗಲ್ಲಿ ಚೂಪಾದ ಕೊಂಬನ್ನು ಹೊಂದಿರುತ್ತದೆ. ಎಲೆಗಳ
ಕೆಳಗಿರುವ ಕೀಟವನ್ನು ಸೂಕ್ಷ್ಮವಾಗಿ ಗಮನಿಸುತ್ತ ಪ್ರಾರಂಭದ ಹಂತದಲ್ಲೇ ಗುರುತಿಸಬೇಕು. 16 ಲೀ. ನೀರಿಗೆ 25 ಎಂಎಲ್‌ ಲ್ಯಾಂಬ್ಡಾ ಸೈಲೋಥ್ರಿನ್‌ ಸಿಂಪಡಿಸಬೇಕು. ಬೆಳೆಗಳ ವಿವರವನ್ನು ಬೆಳೆದರ್ಶಕ ಆ್ಯಪ್‌ನಲ್ಲಿ ದಾಖಲಿಸಬೇಕು.
● ಚಂದ್ರಶೇಖರ ನರಸಮ್ಮನವರ,
ಕೃಷಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next