Advertisement

ಲಕ್ಷ್ಮಣ ಸವದಿ ಪರಿಷತ್‌ ಅಭ್ಯರ್ಥಿ

10:04 AM Feb 03, 2020 | mahesh |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಅವರಿಂದ ತೆರವಾಗಿದ್ದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಮಾಜಿ ಸಚಿವ ಆರ್‌. ಶಂಕರ್‌ ಸಹ ಆಕಾಂಕ್ಷಿಯಾಗಿದ್ದರೂ ಅಂತಿಮವಾಗಿ ಪಕ್ಷದ ಕೇಂದ್ರೀಯ ಚುನಾವಣ ಸಮಿತಿಯು ಲಕ್ಷ್ಮಣ ಸವದಿ ಅವರ ಹೆಸರು ಘೋಷಿಸಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಫೆ.20 ರೊಳಗೆ ವಿಧಾನಪರಿಷತ್‌ಗೆ ಆಯ್ಕೆಯಾಗಬೇಕು. ಫೆ.17ರಂದು ಪರಿಷತ್‌ನ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಮೂಲಕ ಸಂಪುಟದಲ್ಲಿ ಲಕ್ಷ್ಮಣ ಸವದಿ ಅವರ ಸ್ಥಾನವೂ ಭದ್ರವಾದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next