Advertisement

ಇನ್ನು ಲಕ್ಷ್ಮಣ ಝೂಲಾ ಬಂದ್‌

12:30 AM Jul 13, 2019 | mahesh |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿರುವ ಪವಿತ್ರ ತೀರ್ಥ ಕ್ಷೇತ್ರ ಋಷಿಕೇಶಕ್ಕೆ ಹೋದರೆ ಇನ್ನು ಐತಿಹಾಸಿಕ “ಲಕ್ಷ್ಮಣ ಝೂಲಾ’ದಲ್ಲಿ ನಡೆಯಲು, ಫೋಟೋ ತೆಗೆಯಲು ಸಾಧ್ಯವಿಲ್ಲ. 1923ರಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ಯಾವುದೇ ಹಂತದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿ ಇದೆ. ಹೀಗಾಗಿ, ಅದರಲ್ಲಿ ನಡೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಓಂಪ್ರಕಾಶ್‌ ಶುಕ್ರವಾರ ತಿಳಿಸಿದ್ದಾರೆ. ಲೋಕೋ ಪಯೋಗಿ ಇಲಾಖೆಯ ಅಧಿಕಾ ರಿಗಳು ಮತ್ತು ತಜ್ಞರ ತಂಡ ಸೇತುವೆ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಶಿಫಾರಸು ಮಾಡಿದೆ.

Advertisement

ಬ್ರಿಟೀಷರು ದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ವೇಳೆ ಗಂಗಾ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿತ್ತು. ಪೌರಿ ಜಿಲ್ಲೆಯ ಜೋಂಕ್‌ ಎಂಬಲ್ಲಿಂದ ತೆಹ್ರಿ ಜಿಲ್ಲೆಯಲ್ಲಿರುವ
ತಪೋವನ ಎಂಬ ಗ್ರಾಮಕ್ಕೆ ಈ ಸೇತುವೆ ಮೂಲಕ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿತ್ತು. ಬಾಲಿವುಡ್‌ನ‌ “ಗಂಗಾ ಕಿ ಸೌಗಂಧ್‌’, “ಸನ್ಯಾಸಿ’ ಸೇರಿದಂತೆ ಹಲವು ಯಶಸ್ವಿ ಸಿನೆಮಾಗಳು ಇಲ್ಲಿ ಚಿತ್ರೀಕರಣ ಗೊಂಡಿವೆ. 284 ಅಡಿ ಉದ್ದದ ಈ ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಉಯ್ನಾಲೆಯಂತೆ ತೂಗಾಡುತ್ತಿದ್ದ ಕಾರಣ “ಝೂಲಾ’ ಎಂಬ ಹೆಸರು ಬಂದಿದೆ. ಶ್ರೀರಾಮನ ಸಹೋದರ ಲಕ್ಷ್ಮಣ ಹಗ್ಗದ ಸಹಾಯದಿಂದ ನದಿ ದಾಟಿದ್ದರಿಂದ ಈ ಸೇತುವೆಗೆ “ಲಕ್ಷ್ಮಣ ಝೂಲಾ’ ಎಂಬ ಹೆಸರು ಬಂದಿದೆ. ’90ರ ದಶಕದಲ್ಲಿ ಸಮೀಪದಲ್ಲಿಯೇ ರಾಮ ಝೂಲಾ ಎಂಬ ಹೆಸರಿನ ಸೇತುವೆ ನಿರ್ಮಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next