ತಿರುವನಂತಪುರಂ: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಲಕ್ಷದ್ವೀಪದ ಸಿನಿಮಾ ನಟಿ, ರೂಪದರ್ಶಿ ಆಯಿಷಾ ಸುಲ್ತಾನಾ ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿರುವುದಾಗಿ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಮುಖ್ಯಸ್ಥರ ದೂರಿನ ಆಧಾರದ ಮೇಲೆ ದೇಶದ್ರೋಹ ಮತ್ತು ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿವುದಾಗಿ ತಿಳಿಸಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಭೂ ಹಗರಣ : ಪ್ರಾದೇಶಿಕ ಆಯುಕ್ತರಿಂದ ತನಿಖೆಯಾಗಬೇಕು ಎಂದ ಹೆಚ್. ವಿಶ್ವನಾಥ್
ಪ್ರಾದೇಶಿಕ ಚಾನೆಲ್ ವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಆಯಿಷಾ ಸುಲ್ತಾನಾ, ಪ್ರಫುಲ್ ಪಟೇಲ್ ನೇತೃತ್ವದ ಸರ್ಕಾರ ದ್ವೀಪ ರಾಷ್ಟ್ರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಟೀಕಿಸಿದ್ದರು. ಕೇಂದ್ರ ಸರ್ಕಾರ ಲಕ್ಷದ್ವೀಪದ ವಿರುದ್ಧ ಜೈವಿಕ ಶಸ್ತ್ರಾಸ್ತ್ರ ಬಳಿಸಿದೆ ಎಂದು ಆರೋಪಿಸಿದ್ದರು.
ಲಕ್ಷದ್ವೀಪ ಪ್ರವೇಶಿಸಿದ ವ್ಯಕ್ತಿಗಳಿಗೆ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಗೆ ಗುರಿಸಪಡಿಸಲಾಗುವುದು ಎಂದು ವರದಿ ಹೇಳಿದೆ.ಲಕ್ಷದ್ವೀಪದಲ್ಲಿ ಕೋವಿಡ್ 19 ಪ್ರಕರಣ ಶೂನ್ಯವಾಗಿದ್ದವು. ಈಗ ದಿನಂಪ್ರತಿ ನೂರು ಪ್ರಕರಣಗಳು ವರದಿಯಾಗುತ್ತಿದೆ. ಇದು ಕೇಂದ್ರ ಸರ್ಕಾರ ಹರಡಿಸಿರುವ ಜೈವಿಕ ಅಸ್ತ್ರವಾಗಿದೆ. ಈ ಜೈವಿಕ ಅಸ್ತ್ರವನ್ನು ಕೇಂದ್ರ ಸರ್ಕಾರವೇ ಕಳುಹಿಸಿರುವುದಾಗಿ ಕಳೆದ ವಾರ ಮಲಯಾಳಂ ಟಿವಿ ಚರ್ಚೆಯಲ್ಲಿ ಆರೋಪಿಸಿರುವುದಾಗಿ ವರದಿ ತಿಳಿಸಿದೆ.