Advertisement
ಇದಕ್ಕೂ ಮುನ್ನ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ಸಲ್ಲಿಸಿದರು ಮತ್ತು ಪುರೋಹಿತರಾದ ವೇ| ಮೂ| ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮ ನಡೆಸಿದರು. ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಸ್ವತಃ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ನಡೆಸಿದರು. ಅ ಬಳಿಕ ಭಕ್ತರಿಗೆ ಮುದ್ರಾಧಾರಣೆ ನಡೆಸಲಾಯಿತು.
Related Articles
Advertisement
ರಥಬೀದಿ ಸುತ್ತ ಸುಮಾರು 400 ಗೂಡುದೀಪಗಳನ್ನು ಅಳವಡಿಸಲಾಗುತ್ತಿದೆ. ನಾಲ್ಕೂ ದಿನಗಳಲ್ಲದೆ ವರ್ಷಪೂರ್ತಿ ಶುದ್ಧ ಎಳ್ಳೆಣ್ಣೆಯಿಂದ ದೀಪಗಳನ್ನು ಉರಿಸಲಾಗುತ್ತಿದೆ. ಲಕ್ಷದೀಪೋತ್ಸವಕ್ಕಾಗಿ ಸುಮಾರು 600 ಲೀಟರ್ ಶುದ್ಧ ಎಳ್ಳೆಣ್ಣೆಯನ್ನು ಸಂಗ್ರಹಿಸಲಾಗಿದೆ.
ಮಂಗಳವಾರ ಅಪರಾಹ್ನ 2.50ಕ್ಕೆ ರಥಬೀದಿಯಲ್ಲಿ ಸ್ವಾಮೀಜಿಯವರು ಹಣತೆಗಳನ್ನಿಟ್ಟು ಮುಹೂರ್ತ ನಡೆಸಲಿದ್ದು ಭಕ್ತರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಪರಾಹ್ನ 4ಕ್ಕೆ ತುಳಸೀಪೂಜೆ ಮುಕ್ತಾಯಗೊಳ್ಳಲಿದ್ದು ಕ್ಷೀರಾಬ್ದಿ ಪೂಜೆ ಮಧ್ವಸರೋವರದಲ್ಲಿ ನಡೆಯಲಿದೆ. ಚಾತುರ್ಮಾಸ್ಯವ್ರತದ ಕಾಲ ಮುಗಿದು ಉತ್ಸವ ಆರಂಭವಾಗುವುದು ಇದೇ ದಿನ. ಕ್ಷೀರಾಬ್ದಿ ಪೂಜೆ ಬಳಿಕ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರನ ಉತ್ಸವ ಮೂರ್ತಿಗಳು ಎರಡು ರಥಗಳಲ್ಲಿ ಪಾಲ್ಗೊಳ್ಳುತ್ತವೆ.
ರಥೋತ್ಸವವು ಸಂಜೆ 6.45ಕ್ಕೆ ಆರಂಭವಾಗಲಿದ್ದು ಆ ಬಳಿಕವೇ ರಥಬೀದಿಯಲ್ಲಿ ಭಕ್ತರು ದೀಪವನ್ನು ಬೆಳಗಿಸಬೇಕು ಎಂದು ಮಠದ ಪ್ರಕಟನೆ ತಿಳಿಸಿದೆ.