Advertisement
ಸಚಿವರ ಪುತ್ರ, ಪ್ರಮುಖ ಆರೋಪಿಯಾಗಿರುವ ಆಶಿಷ್ ಮಿಶ್ರಾ ಅವರನ್ನು ಅಕ್ಟೋಬರ್ 9 ರಂದು 11 ಗಂಟೆಯ ಒಳಗೆ ಪೋಲೀಸರ ಎದುರು ಹಾಜರಾಗಲು ಸೂಚಿಸಿ ನೋಟಿಸ್ ಅಂಟಿಸಲಾಗಿದೆ. ಹಾಜರಾಗದಿದ್ದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ಬರೆಯಲಾಗಿದೆ.
ಆಶಿಷ್ ಮಿಶ್ರ ನೇಪಾಳಕ್ಕೆ ತೆರಳಿಲ್ಲ. ಲಖೀಂಪುರದಲ್ಲೇ ಇದ್ದು, ಪೊಲೀಸರ ಎದುರು ಹಾಜರಾಗಲಿದ್ದಾರೆ ಎಂದು ಅವರ ಸಂಬಂಧಿ ಅಭಿಜಾತ್ ಮಿಶ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಶುಕ್ರವಾರ ಸುಪ್ರೀಂ ಕೋರ್ಟ್ ಮತ್ತೆ ಉತ್ತರಪ್ರದೇಶ ಸರಕಾರ ಹಿಂಸಾಚಾರ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆ ನಡೆಸಬಹುದಾದ ಪರ್ಯಾಯ ಏಜೆನ್ಸಿಯ ಕುರಿತಾಗಿ ನ್ಯಾಯಾಲಯಕ್ಕೆ ತಿಳಿಸಿ ಎಂದು ಸರಕಾರವನ್ನು ಪ್ರಶ್ನಿಸಿದೆ.
Related Articles
Advertisement