ಲಕ್ನೋ: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನಿಗೆ ಜಾಮೀನು ನೀಡಲು ಕೋರ್ಟ್ ಬುಧವಾರ (ಅಕ್ಟೋಬರ್ 13) ನಿರಾಕರಿಸಿದೆ.
ಇದನ್ನೂ ಓದಿ:ವೆಂಕಯ್ಯ ನಾಯ್ಡು ಅರುಣಾಚಲಕ್ಕೆ ಭೇಟಿ ನೀಡಿದ್ರೆ ಚೀನಾ ಆಕ್ಷೇಪಿಸುವುದೇಕೆ? ಭಾರತ
ಆಶಿಶ್ ಮಿಶ್ರಾನ ಜಾಮೀನು ಅರ್ಜಿಯನ್ನು ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಚಿಂಟಾ ರಾಮ್ ತಿರಸ್ಕರಿಸಿದ್ದು, ಮತ್ತೊಬ್ಬ ಆರೋಪಿ ಆಶಿಶ್ ಪಾಂಡೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್ಪಿ ಯಾದವ್ ತಿಳಿಸಿದ್ದಾರೆ.
ಲಖೀಂಪುರ್ ಹಿಂಸಾಚಾರ ಪ್ರಕರಣದ ಕುರಿತಂತೆ ವಿಶೇಷ ತನಿಖಾ ತಂಡ ಸುಮಾರು 12ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ ನಂತರ ಆಶಿಶ್ ಮಿಶ್ರಾನನ್ನು ಅಕ್ಟೋಬರ್ 9ರಂದು ಬಂಧಿಸಲಾಗಿತ್ತು. ನಂತರ ಕೋರ್ಟ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಘಟನೆಯಲ್ಲಿ ಮಂಗಳವಾರ ಬಂಧಿಸಲ್ಪಟ್ಟ ಶೇಖರ್ ಭಾರ್ತಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು ಈವರೆಗೆ ಆಶಿಶ್ ಮಿಶ್ರಾ, ಲವ್ ಕುಶ್, ಆಶಿಶ್ ಪಾಂಡ್ ಮತ್ತು ಭಾರ್ತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.