Advertisement

Delhi excise scam: 5 ತಿಂಗಳ ಬಳಿಕ ಕೆಸಿಆರ್‌ ಪುತ್ರಿಗೆ ಜಾಮೀನು

11:29 PM Aug 27, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್‌ ಪುತ್ರಿ  ಕೆ.ಕವಿತಾಗೆ ಸುಪ್ರೀಂ ಕೋರ್ಟ್‌ ಮಂಗಳ ವಾರ ಜಾಮೀನು ನೀಡಿದೆ. ಈ ಮೂಲಕ ಈ ಪ್ರಕರಣ ದಲ್ಲಿ ಮನೀಶ್‌ ಸಿಸೋಡಿಯಾ ಅವರ ಬಳಿಕ ಮತ್ತೂಬ್ಬ ಪ್ರಭಾವಿ ನಾಯಕರಿಗೆ ಜಾಮೀನು ಸಿಕ್ಕಂತಾಗಿದೆ.

Advertisement

5 ತಿಂಗಳಿನಿಂದ ಕವಿತಾ ಕಸ್ಟಡಿಯಲ್ಲಿರುವುದನ್ನು ಗಮನಿಸಿದ ನ್ಯಾ|ಬಿ.ಆರ್‌.ಗವಾಯಿ ಮತ್ತು ನ್ಯಾ|ಕೆ.ವಿ.ವಿಶ್ವನಾಥ್‌ ಅವರಿದ್ದ ನ್ಯಾಯಪೀಠ ಈ ಪ್ರಕರಣದಲ್ಲಿ ತನಿಖೆ ಮುಕ್ತಾಯಗೊಂಡಿದ್ದು, ಇನ್ನೂ ಕವಿತಾ ಅವರು ಕಸ್ಟಡಿಯಲ್ಲಿರುವ ಆವಶ್ಯಕತೆ ಇಲ್ಲ ಎಂದು ಹೇಳಿ ಜಾಮೀನು ನೀಡಿದೆ.  ಈ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ತನಿಖೆ ನಡೆಯುವ ಸಂಭವಗಳು ಕಡಿಮೆ ಎಂಬುದನ್ನು ಕೋರ್ಟ್‌ ಮನಗಂಡಿದೆ ಎಂದು ಹೇಳಿದೆ. ಈ ಮೂಲಕ ಕವಿತಾಗೆ ಜಾಮೀನು ನಿರಾಕರಿಸಿದ್ದ ದಿಲ್ಲಿ ಹೈಕೋರ್ಟ್‌ ಆದೇಶ ತಳ್ಳಿÖಾಕಿದೆ. ಕವಿತಾ ಈ ಪ್ರಕರಣ ದಲ್ಲಿ ಪ್ರಮುಖ ಆರೋಪಿ ಎಂದು ಹೇಳುವ ಮೂಲಕ ಜು.1ರಂದು ಜಾಮೀನು ನೀಡಲು ದಿಲ್ಲಿ ಹೈಕೋರ್ಟ್‌ ನಿರಾಕರಿಸಿತ್ತು. ಮಾ.23ರಂದು ಜಾರಿ ನಿರ್ದೇಶನಾಲಯ ಮತ್ತು ಎ.11ರಂದು ಸಿಬಿಐ ಅವರನ್ನು ಬಂಧಿಸಿತ್ತು.

20 ಲಕ್ಷ ರೂ. ಬಾಂಡ್‌: ಕವಿತಾ ವಿರುದ್ಧದ 2 ಪ್ರಕರಣ ಗಳಲ್ಲಿ ತಲಾ 10 ಲಕ್ಷ ರೂ. ಬಾಂಡ್‌ ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ವಿಚಾರಣ ನ್ಯಾಯಾಲ ಯದ ವಶಕ್ಕೆ ಪಾಸ್‌ಪೋರ್ಟ್‌ ನೀಡಬೇಕು. ಹೊರ ಹೋದ ಬಳಿಕ ಸಾಕ್ಷಿಗಳನ್ನು ಹೆದರಿಸುವ ಅಥವಾ ಹಾಳು ಮಾಡುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದೆ.

ಏನಿದು ಪ್ರಕರಣ?: ಕೆಲವರಿಗೆ  ಲಾಭ ಮಾಡಿಕೊಡು ವುದಕ್ಕಾಗಿ ಅಬಕಾರಿ ನೀತಿಯನ್ನು ರೂಪಿಸಲಾಗಿತ್ತು. ಇದರಲ್ಲಿ ಲಂಚ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಮನೀಷ್‌ ಸಿಸೋಡಿಯಾ, ಕೇಜ್ರಿವಾಲ್‌, ಕವಿತಾ ಅವರ ಹೆಸರು ಕೇಳಿಬಂದಿತ್ತು. ಕವಿತಾ ಪ್ರಮುಖ ಆರೋಪಿ ಎಂದು ಹೇಳಿದ್ದ ಇ.ಡಿ ಅವರನ್ನು ಬಂಧಿಸಿತ್ತು. ಬಂಧನದಲ್ಲಿರುವ ಸಮಯದಲ್ಲೇ ಸಿಬಿಐ ಅವರನ್ನು ಬಂಧಿಸಿತ್ತು.

ಕೇಜ್ರಿ ನ್ಯಾಯಾಂಗ ಬಂಧನ ಅವಧಿ ಸೆ.3ರ ವರೆಗೆ ವಿಸ್ತರಣೆ

Advertisement

ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ನ್ಯಾಯಾಂಗ ಬಂಧನವನ್ನು ದಿಲ್ಲಿ ಕೋರ್ಟ್‌ ಸೆ.3ರ ವರೆಗೆ ವಿಸ್ತರಿಸಿದೆ. ಹಿಂದೆ ನೀಡಿದ್ದ ಅವಧಿ ಅಂತ್ಯಗೊಂಡದ್ದರಿಂದ ವೀಡಿಯೋ ಕಾನ್ಫರೆನ್ಸ್‌ ವಿಚಾರಣೆ ನಡೆಸಿ,  ಅವಧಿಯನ್ನು ವಿಸ್ತರಿಸಿತು.

ಎಲ್ಲಿದೆ ನ್ಯಾಯಸಮ್ಮತತೆ? ಇ.ಡಿ. ಸಿಬಿಐಗೆ ಸುಪ್ರೀಂ

ಕೆ. ಕವಿತಾ ಅವರ ಜಾಮೀನು ಅರ್ಜಿ ವಿಚಾರಣೆ ಸಮಯದಲ್ಲಿ ಸುಪ್ರೀಂಕೋರ್ಟ್‌ ತನಿಖಾ ಸಂಸ್ಥೆಗಳ “ನ್ಯಾಯಸಮ್ಮತತೆ’ಯನ್ನು ಪ್ರಶ್ನಿಸಿದೆ. ಇದು ಮುಂಬರುವ ಹಲವು ಪ್ರಕರಣಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಕೇವಲ ಪ್ರಾಸಿಕ್ಯೂಶನ್‌ ಸಾಕ್ಷಿಗಳನ್ನಿಟ್ಟು ಕೊಂಡು ಆರೋಪಿಗಳ ಅಪರಾಧವನ್ನು ಖಚಿತ ಪಡಿಸಲು ಸಾಧ್ಯವಿಲ್ಲ. ಹೆಚ್ಚಿನ ಸಾಕ್ಷ್ಯಗಳನ್ನು ನೀಡಬೇಕಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.