Advertisement
ಆನಗೊಡು ಹೋಬಳಿಯ ಸುಲ್ತಾನಪುರ, ಈಚಘಟ್ಟ ಕೆರೆಗಳಿಗೆ ಬಾಗಿನ, ಗಂಗಾಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಕೆರೆಗಳು ಮನುಷ್ಯನ ಜೀವನಾಡಿಗಳು. ಕಳೆದ ವರ್ಷದಲ್ಲಿ ಲಕ್ಷಾಂತರ ಖರ್ಚು ಮಾಡಿ ತೋಟಗಳನ್ನು ರಕ್ಷಣೆ ಮಾಡಿದ ಹಾಗೆ ನೀರನ್ನು ಸಹ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರಕೃತಿಯೊಂದಿಗೆ ಮನುಷ್ಯನ ಸಂಬಂಧ ಸರಿಯಾಗಿ ಇಲ್ಲದ ಕಾರಣ ನಮಗೆ ಕಷ್ಟಗಳು ಎದುರಾಗಿವೆ ಎಂದು ಹೇಳಿದರು.
ಕೋಡಿಯನ್ನು ಇನೂ ಒಂದು ಅಡಿ ಎತ್ತರಿಸಬೇಕು. ಇದರಿಂದ ನೀರಿನ ಪ್ರಮಾಣ ಹೆಚ್ಚಾಗುತ್ತದೆ ಎಂದು ಈಚಘಟ್ಟ ಗ್ರಾಮಸ್ಥರು ಶ್ರೀಗಳಲ್ಲಿ ಮನವಿ ಮಾಡಿದರು. ಕೆರೆ ಉಸ್ತುವರಿ ಸಮಿತಿ ರಚನೆ ಮಾಡಿಕೊಂಡು ನನ್ನ ಬಳಿ ಬನ್ನಿ ಎಂದು ಶ್ರೀಗಳು ತಿಳಿಸಿದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಕೆರೆಯ ಕೆಲಸವನ್ನು ಶೀಘ್ರವಾಗಿ ಮಾಡಿಸಲಾಗುವುದು. ಕೆರೆ ತುಂಬಿರುವುದರಿಂದ ಈ ಭಾಗದ ರೈತರಿಗೆ ಕುಡಿಯುವ ನೀರು, ನೀರಾವರಿ ಕೊಳವೆಬಾವಿಗಳಿಗೆ ವರದಾನವಾಗಿ ಪರಿಣಮಿಸಿದೆ. ಗ್ರಾಮಸ್ಥರು ಸಮಿತಿ ಮಾಡಿಕೊಂಡು ನೀರನ್ನು ನಿರ್ವಹಣೆ ಮಾಡಿ ಎಂದು ಸೂಚಿಸಿದರು.
Related Articles
ಸರ್ಕಾರವಿದ್ದ ಸಂದರ್ಭದಲ್ಲಿ 2006ರಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ತುಪ್ಪದಹಳ್ಳಿ, ಅಣಜಿ, ಕಂದನಕೋವಿ ಮೂರು ಕೆರೆಗಳನ್ನು ತುಂಬಿಸುವಂತೆ ಮಂಜುನಾಥ ಗೌಡರು ಇನ್ನೂ ಹಲವು ಮುಖಂಡರುಗಳು ಹೋರಾಟ ಮಾಡಿದ ಪ್ರತಿಫಲ ಹಾಗೂ ಶ್ರೀಗಳ ಇಚ್ಛಾಶಕ್ತಿಯಿಂದ 22 ಕೆರೆಗಳಿಗೆ ನೀರು ತುಂಬುವಂತಾಗಿದೆ ಎಂದರು.
Advertisement
ಮಾಜಿ ಶಾಸಕ ಬಸವರಾಜ ನಾಯ್ಕ, ಆನಗೊಡು ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಗ್ರಾಪಂ ಅಧ್ಯಕ್ಷೆ ಅಕ್ಕಮಹಾದೇವಿ, ಬಿಜೆಪಿ ಮುಖಂಡರಾದ ಎಚ್. ಆನಂದಪ್ಪ, ವಿ.ವೆಂಕಟಪ್ಪ, ಎಚ್.ಕೆ. ಬಸವರಾಜ್, 22 ಕೆರೆ ಏತ ನೀರವಾರಿ ಹೋರಟ ಸಮಿತಿ ಅಧ್ಯಕ್ಷ ಡಾ| ಮಂಜುನಾಥ ಗೌಡ, ಗಂಗನಕಟ್ಟೆ ಸಂಗಣ್ಣ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.