Advertisement

ಕೆರೆ ದುರಸ್ತಿ ಕಾಮಗಾರಿ ಕಳಪೆ; ಕ್ರಮಕ್ಕೆ ಆಗ್ರಹ

04:16 PM Aug 04, 2022 | Team Udayavani |

ಚಿಂಚೋಳಿ: ಕಳೆದ ವರ್ಷ ವ್ಯಾಪಕ ಮಳೆಯಿಂದ ಒಡ್ಡು ಒಡೆದು ಹೋಗಿದ್ದ ಕೆರೆಗಳ ದುರಸ್ತಿ ಕಾರ್ಯ ಕಳಪೆಮಟ್ಟದಿಂದ ನಡೆದಿದೆ ಎಂದು ಜೆಡಿಎಸ್‌ ಮುಖಂಡರು ಆರೋಪಿಸಿ ನಾಗಾಇದಲಾಯಿ ಗ್ರಾಮದ ಹತ್ತಿರ ಬೀದರ-ಮಹೆಬೂಬ್‌ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್‌ ಮುಖಂಡ ಸಂಜೀವನ ಯಾಕಾಪುರ, ತಾಲೂಕಿನ ಹೂಡದಳ್ಳಿ, ದೋಟಿಕೋಳ, ನಾಗಾಇದಲಾಯಿ ಗ್ರಾಮಗಳಲ್ಲಿರುವ ಸಣ್ಣ ನೀರಾವರಿ ಕೆರೆಗಳ ಒಡ್ಡುಗಳು ಮಳೆ ನೀರಿನಿಂದ ಭರ್ತಿಯಾಗಿ ರಾತೋರಾತ್ರಿ ಒಡೆದು ಹೋಗಿದ್ದವು. ಇದರಿಂದ ಅನೇಕ ಹೊಲಗಳಲ್ಲಿನ ಬೆಳೆ ನಾಶವಾಗಿದ್ದವು. ಕೆಲವರ ಮನೆಗಳಲ್ಲಿನ ಆಹಾರಧಾನ್ಯ, ಬೆಲೆಬಾಳುವ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಆದರೂ ಇವರಿಗೆ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಗಾಇದಲಾಯಿ ಗ್ರಾಮದಲ್ಲಿ ಒಡೆದು ಹೋಗಿದ್ದ ಕೆರೆ ದುರಸ್ತಿಗೆ ಸರಕಾರ 4.30ಕೋಟಿ ರೂ.ಅನುದಾನ ನೀಡಿದೆ. ಆದರೆ ಕಾಮಗಾರಿ ಕಳಪೆಯಾಗಿದ್ದರಿಂದ ಕೆರೆ ಒಡ್ಡಿನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡು, ಮಣ್ಣು ಕುಸಿತವಾಗುತ್ತಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಹಣಮಂತರೆಡ್ಡಿ ಬುಕ್ಕಾ ದೋಟಿಕೊಳ ಮಾತನಾಡಿ, ಹೂಡದಳ್ಳಿ,ನಾಗಾಇದಲಾಯಿ ಕೆರೆಗಳ ದುರಸ್ತಿ ಕಾರ್ಯದಲ್ಲಿ ಗುತ್ತಿಗೆದಾರರು, ಎಂಜಿನಿಯರುಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಪಟಪಳ್ಳಿ, ದೇಗಲಮಡಿ, ನಾಗಾಇದಲಾಯಿ, ಚಿಂಚೋಳಿ ಜನರು ಆತಂಕದಲ್ಲಿದ್ದಾರೆ ಎಂದರು.

ಜೆಡಿಎಸ್‌ ಮುಖಂಡರಾದ ಯಶವಂತ ಕಲ್ಲೂರ, ನಿಯಾಜ ಅಲಿ, ಹಣಮಂತ ಗಡ್ಡಿಮನಿ ಐನೋಳಿ, ನೀಲಕಂಠ ಹುಡುಗಿ, ವೀರಾರೆಡ್ಡಿ ನಾಗಾಇದಲಾಯಿ, ಸುಶೀಲ ಮೇತ್ರಿ ಮಾತನಾಡಿದರು.

Advertisement

ಕಾರ್ಯಕರ್ತರಾದ ರಘು ದೇಸಾಯಿ, ಶೇರಖಾನ್‌, ಧನರಾಜ ಪಾಟೀಲ, ಪಾಂಡುರಂಗ ಭಕ್ತಂಪಳ್ಳಿ, ಕೈಲಾಶ ಮೇಲಿನಕೇರಿ, ಸೂರ್ಯಕಾಂತ ಪೂಜಾರಿ, ಗೌಸ್‌ ಪಟೇಲ, ಆಕಾಶ ಬೇಡರ, ಮಹೆತಾಬ್‌, ಶಿವರಾಜ, ವೀರಶೆಟ್ಟಿ ಸೂಗುರ, ಅಜರ ಪಟೇಲ, ಶ್ರೀನಿವಾಸ ಇನ್ನಿತರರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಅಂಜುಮ ತಬಸುಮ ಅವರಿಗೆ ಸಲ್ಲಿಸಲಾಯಿತು. ಕೆರೆ ಬಗ್ಗೆ ನುರಿತ ತಜ್ಞರಿಂದ ಪರಿಶೀಲಿಸಲಾಗುವುದು. ಮನೆ ಹಾನಿಗೊಳಗಾದವರಿಗೆ ಪರಿಹಾರ ನೀಡಲಾಗುವುದು ಎಂದು ತಹಶೀಲ್ದಾರರು ಭರವಸೆ ನೀಡಿದರು.

ಚಿಂಚೋಳಿ-ಮನ್ನಾಎಕ್ಕೆಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದರಿಂದ ಕೆಲಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು. ಪಿಎಸ್‌ಐ ಉದ್ದಂಡಪ್ಪ ಮತ್ತು ನಿಂಗಪ್ಪ ಪಾಟೀಲ ಸೂಕ್ತ ಪೊಲೀಸ್‌ ಬಂದೋಬಸ್ತ್ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next