Advertisement
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ,ಕೆರೆ ಸಂರಕ್ಷಣಾ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಸಹಯೋಗ ದಲ್ಲಿ ತಾಲೂಕಿನ ಬಾಶೆಟ್ಟಿಹಳ್ಳಿಯ ಅಜಾಕ್ಸ್ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ನಡೆದ ತಾಲೂಕುಮಟ್ಟದ ಕೆರೆ ಸಂರಕ್ಷಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲೇ ನಮ್ಮ ಕೆರೆ, ನದಿ ಹಾಗೂ ಜೀವಸಂಕುಲ ಉಳಿಸುವ ಕುರಿತಾಗಿ ನಮ್ಮ ಹೊಣೆಗಾರಿಕೆಯಿದೆ. ಆದರೆ, ಇದು ಪಾಲನೆಯಾಗುತ್ತಿಲ್ಲ. ಕೆರೆಗಳಲ್ಲಿ ಕಳೆ ಬೆಳೆಯುವುದು, ಕಲುಷಿತಗೊಳ್ಳುವುದನ್ನು ನೋಡುತ್ತಾ ಇರುವುದು ಕಂಡರೆ ಮನಸ್ಸಿಗೆ ಬೇಸರವಾಗುತ್ತದೆ ಎಂದರು.
Related Articles
Advertisement
ದೊಡ್ಡತುಮಕೂರು ಕೆರೆ ಹೋರಾಟ ಸಮಿತಿ ವಸಂತ್ ಕುಮಾರ್ ಮಾತನಾಡಿದರು. ದೊಡ್ಡತುಮಕೂರು ಕೆರೆ ಕಲುಷಿತವಾಗದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಬಾಶೆಟ್ಟಿಹಳ್ಳಿ ಪಪಂನ ಮುಖ್ಯಾಧಿಕಾರಿ ಮುನಿರಾಜ್ ಅವರಿಗೆ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಸೂಚಿಸಿದರು.
ಉಪವಲಯ ಅರಣ್ಯಾಧಿಕಾರಿ ಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥ್, ಬಾಶೆಟ್ಟಿಹಳ್ಳಿ ಪಪಂನ ಮುಖ್ಯಾಧಿಕಾರಿ ಮುನಿರಾಜ್, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್‌ನ ಟ್ರಸ್ಟೀ ಭಾರ್ಗವಿ ಎಸ್. ರಾವ್, ಪ್ರಸನ್ನ, ಅಜಾಕ್ಸ್ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ, ತಾಲೂಕು ಸೇವಾ ಸಮಿತಿ ಕೃಷ್ಣಪ್ರಸಾದ್ ಇದ್ದರು.
ಸಮಾಜಮುಖಿ ಚಿಂತನೆಯಿಂದ ಕಾರ್ಯನಿರ್ವಹಿಸಿ:
ಭೂಮಿ ಇರುವುದು ಕಟ್ಟಡಗಳನ್ನು ಕಟ್ಟಲು ಮಾತ್ರ ಎಂದು ಸ್ವಾರ್ಥದ ಆಲೋಚನೆಗಳು ದೂರವಾಗಬೇಕು. ಸ್ಥಳೀಯವಾಗಿ ನಾವು ನಮ್ಮ ಕೈಲಾದ ಸೇವೆಯನ್ನು ಪ್ರಕೃತಿಗೆ ಮಾಡಬೇಕು. ದೊಡ್ಡಬಳ್ಳಾಪುರ ತಾಲೂಕಿನಲ್ಲಿನ ಸುಮಾರು 45 ಕೆರೆಗಳನ್ನು ಉಳಿಸುವುದು ಕಷ್ಟವಲ್ಲ. ಇಲ್ಲೇ ಇರುವವರಿಗೆ ಜವಾಬ್ದಾರಿ ಹೆಚ್ಚಿದೆ. ಮಾನವೀಯತೆ, ಸಮಾಜಮುಖೀ ಚಿಂತನೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾಮಟ್ಟದ ಕೆರೆ ಸಂರಕ್ಷಣಾ ಸಮಿತಿ ಸದಸ್ಯ ಸಂದೀಪ್ ಸಾಲಿಯಾನ್ ಹೇಳಿದರು.
ಇಲಾಖೆಗಳ ಸಹಕಾರ ದೊರೆಯುತ್ತಿಲ್ಲ: ಚಿದಾನಂದ್ ದೊಡ್ಡಬಳ್ಳಾಪುರದಲ್ಲಿ ಹಲವಾರು ಪರಿಸರ ಸಂಘಟನೆ, ಪರಿಸರಾಸಕ್ತರಿಂದ ಕೆರೆಗಳ ಪುನಶ್ಚೇತನ ಮೊದಲಾದ ಕಾರ್ಯಗಳಾಗುತ್ತಿವೆ. ಆದರೆ ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಸಹಕಾರ ದೊರೆಯುತ್ತಿಲ್ಲ. ಕೆರೆ ಸಂರಕ್ಷಣೆ ಸಮಿತಿಯ ಹೆಚ್ಚಿನ ಬೆಂಬಲ ದೊರೆತರೆ ಇನ್ನಷ್ಟು ಪರಿಸರ ಉಳಿಸುವ ಕಾರ್ಯಗಳಾಗುತ್ತವೆ ಎಂದು ಯುವ ಸಂಚಲನದ ಅಧ್ಯಕ್ಷ ಚಿದಾನಂದ್ ಹೇಳಿದರು.