ಬೆಂಗಳೂರು: ಕೆರೆಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದ್ದು, 100 ಕೋಟಿ ರೂ.ಗೂ ಅಧಿಕ ಆರ್ಥಿಕವ್ಯವಹಾರ ಹೊಂದಿರುವ ಕಂಪನಿಗಳಿಗೆ “ಕೆರೆಗಳದತ್ತು’ ನೀಡುವ ಯೋಜನೆಯನ್ನು ಈ ಸಾಲಿನಪಾಲಿಕೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ನೀರಿನ ಚಕ್ರದ ಅವಿಭಾಜ್ಯ ಅಂಗವಾದ ಕೆರೆಗಳಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.2019-20ರಲ್ಲಿ ಕೆರೆಗಳ ನಿರ್ವಹಣೆಗಾಗಿ 7.40ಕೋಟಿ ರೂ.ಭರಿಸಲಾಗಿತ್ತು.ಈ ಸಾಲಿನಲ್ಲಿ 31ಕೋಟಿ ರೂ.ಕೆರೆಗಳ ನಿರ್ವಹಣೆಗೆ ಒದಗಿಸಲಾಗಿದೆ.ಕೆರೆಗಳ ಸರಹದ್ದು ಸಂರಕ್ಷಿಸಲು ಮನ್ನಣೆ ನೀಡಿದ್ದು ಈಕಾರ್ಯಕ್ಕಾಗಿ 10 ಕೋಟಿ ರೂ.ಮೀಸಲಿರಿಸಲಾಗಿದೆ.ವಿಶಿಷ್ಟವಾದ ನಾಗರಿಕ ಜಲಮಾರ್ಗ ಯೋಜನೆನಡೆಯುತ್ತಿದ್ದು ಅನುಷ್ಠಾನ ಕಾರ್ಯ ಈ ಸಾಲಿನಲ್ಲಿಪ್ರಾರಂಭವಾಗಲಿದೆ.
ಈ ಕಾರ್ಯಕ್ಕಾಗಿ 175 ಕೋಟಿರೂ.ಅನುದಾನವನ್ನು ಸರ್ಕಾರ ಒದಗಿಸುತ್ತಿದ್ದುಇದರ ಅನುಷ್ಠಾನಕ್ಕಾಗಿ ಪಾಲಿಕೆಯೂ ಇತರಸಂಪನ್ಮೂಲಗಳನ್ನು ಒದಗಿಸಲಿದೆ.
ಶೂನ್ಯ ಪ್ರವಾಹದ ಗುರಿ: ಬದಲಾಗುತ್ತಿರುವ ಮಳೆಮಾದರಿಗಳು ಹೊಸ ಪ್ರದೇಶಗಳನ್ನು ಪ್ರವಾಹಗಳಿಗೆಗುರಿಯಾಗಿಸಿವೆ. ಆ ಹಿನ್ನೆಲೆಯಲ್ಲಿ ಈ ವರ್ಷ”ಶೂನ್ಯ ಪ್ರವಾಹದ ಗುರಿ’ ಹೊಂದಲಾಗಿದ್ದು ಬೃಹತ್‌ಮಳೆ ನೀರುಗಾಲುವೆಗಳ ಹೊಳೆತ್ತುವ ಮತ್ತುನಿರ್ವಹಣೆಗಾಗಿ 60 ಕೋಟಿ ರೂ.ಅನುದಾನಮೀಸಲಿಡಲಾಗಿದೆ. ದುರ್ಬಲ ಪ್ರದೇಶಗಳನ್ನುಪೂರ್ವಭಾವಿಯಾಗಿ ಗುರುತಿಸಿ ಬೃಹತ್ ಮಳೆನೀರುಗಾಲುವೆಗಳಿಗೆ ಪೂರೈಸುವ ಚರಂಡಿಗಳಅಗತ್ಯ ರಿಪೇರಿಗೆ ಆದ್ಯತೆ ನೀಡಲಾಗುವುದು.
110ಹಳ್ಳಿಗಳಲ್ಲಿ ಒಳಚರಂಡಿ ಮಂಡಳಿಯು ನೀರುಮತ್ತು ಒಳಚರಂಡಿ ಪೈಪ್‌ಗ್ಳ ಅಳವಡಿಕೆಕಾಮಗಾರಿಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಮತ್ತು ಪುನಶ್ಚೇತನಗೊಳಿಸಲು 291 ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ 1000 ಕೋಟಿ ರೂ.ಕಾಮಗಾರಿಗೆ ಅನುಮೋದನೆ ನೀಡಿದ್ದು ಈಸಾಲಿನಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ.
ಹೊಸ ಕಾಮಗಾರಿಗಳಿಗಿಲ್ಲ ಮಣೆ: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಶಿಕ್ಷಣ, ಆರೋಗ್ಯ, ಕಲ್ಯಾಣಮತ್ತು ಕರೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಇಲಾಖೆಯಲ್ಲಿ ಹೊಸ ಕಾಮಗಾರಿ ಕೈಗೊಳ್ಳದಿರಲು ನಿರ್ಧರಿಸಲಾಗಿದೆ. ಭೂ ಪರಿಹಾರಕ್ಕಾಗಿ 80ಕೋಟಿ ರೂ.ಅನುದಾನ ಮೀಸಲಿರಿಸಲಾಗಿದೆ.