Advertisement

Ladyhill ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನಲ್ಲಿ ಅದೃಷ್ಟ ಕೂಪನ್‌ ಡ್ರಾ

11:11 PM Jan 30, 2024 | Team Udayavani |

ಮಂಗಳೂರು: ಚಿನ್ನಾಭರಣ ವ್ಯವಹಾರದಲ್ಲಿ 75 ವರ್ಷಗಳನ್ನು ಪೂರೈಸಿ ಗ್ರಾಹಕರ ಸಂತೃಪ್ತಿಗೆ ಪಾತ್ರವಾದ ಲೇಡಿಹಿಲ್‌ನಲ್ಲಿರುವ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ 2 ಮಳಿಗೆಗಳಲ್ಲಿ ನವರಾತ್ರಿ, ದೀಪಾವಳಿ ಹಾಗೂ ಕ್ರಿಸ್ಮಸ್‌ ಪ್ರಯುಕ್ತ ಆಯೋಜಿಸಲಾದ ಲಕ್ಕಿ ಕೂಪನ್‌ ಡ್ರಾ ಸಮಾರಂಭ ಲೇಡಿಹಿಲ್‌ ಮಳಿಗೆಯಲ್ಲಿ ನಡೆಯಿತು.

Advertisement

ಡ್ರಾವನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ನೆರವೇರಿಸಿದರು. ಪ್ರಥಮ ಬಹುಮಾನ ಚಿನ್ನದ ನಾಣ್ಯವನ್ನು ಶೈಲಜಾ, ದ್ವಿತೀಯ ಚಿನ್ನದ ನಾಣ್ಯವನ್ನು ಸುಪ್ರೀತಾ, ತೃತೀಯ ಚಿನ್ನದ ನಾಣ್ಯವನ್ನು ಮಧುರಾಜ್‌, 4ನೇ ಬಹುಮಾನ ಚಿನ್ನದ ನಾಣ್ಯವನ್ನು ದೇವಕಿ, ಸಂಧ್ಯಾ ಕೋಟ್ಯಾನ್‌, ಜೆಸಿಂತಾ ಡಿ’ಸೋಜಾ ಗಳಿಸಿದ್ದಾರೆ. 5ನೇ ಬಹುಮಾನ ಚಿನ್ನದ ನಾಣ್ಯವನ್ನು 10 ಗ್ರಾಹಕರು, ಸಮಾಧಾನಕರ ಬಹುಮಾನ 60 ಗ್ರಾಹಕರು ವಿಜೇತರಾದರು.

ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಮಾಲಕ ರವೀಂದ್ರ ಶೇಟ್‌, ಪಾಲುದಾರರಾದ ಶರತ್‌ ಶೇಟ್‌, ಪ್ರಸಾದ್‌ ಶೇಟ್‌, ಪ್ರಸನ್ನ ಶೇಟ್‌, ಸಂಸ್ಥೆಯ ದೀಪ್ತಿ ಶೇಟ್‌, ಶನಾಯಾ ಶೇಟ್‌, ಶಿವಾನಿ ಶರತ್‌ ಶೇಟ್‌ ಉಪಸ್ಥಿತರಿದ್ದರು.

ಫಲಿತಾಂಶವು ಫೆ. 1ರ ಉದಯವಾಣಿಯಲ್ಲಿ ಪ್ರಕಟಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next