Advertisement

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

10:54 PM Apr 22, 2024 | Team Udayavani |

ಉಪ್ಪಳ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮಂಗಲ್ಪಾಡಿ ಪ್ರತಾಪನಗರ ನಿವಾಸಿ, ಕೊಲ್ಲಿ ಉದ್ಯೋಗಿ ಬದ್ರುಲ್‌ ಮುನೀರ್‌ ಅವರ ಮನೆಯಿಂದ 4 ಪವನ್‌ ಚಿನ್ನಾಭರಣ ಮತ್ತು 35 ಸಾವಿರ ರೂ. ಕಳವು ಮಾಡಲಾಗಿದೆ. ಮನೆಗೆ ಕಳ್ಳರು ನುಗ್ಗಿದ ವಿಷಯ ತಿಳಿದು ಅಲ್ಲಿಗೆ ಬಂದ ಯುವಕನಿಗೆ ಕೋವಿ ತೋರಿಸಿ ಹಲ್ಲೆ ಮಾಡಿ ಬೆದರಿಕೆಯೊಡ್ಡಲಾಗಿದೆ.

Advertisement

ಮನೆಯ ಮುಂದೆ 2 ಬೈಕ್‌ಗಳು ನಿಂತಿರುವುದನ್ನು ಕಂಡ ಮೊಹಮ್ಮದ್‌ ರಮೀಸ್‌ ಗೇಟ್‌ ಬಳಿ ಬಂದು ಬೊಬ್ಬೆ ಹಾಕಿದ್ದರು. ಅಷ್ಟರಲ್ಲಿ ಮನೆಯೊಳಗಿದ್ದ ಇಬ್ಬರು ಹೊರಗಡೆ ಬಂದು ರಮೀಸ್‌ಗೆ ಹಲ್ಲೆ ಮಾಡಿ ಕೋವಿ ತೋರಿಸಿ ಬೆದರಿಕೆಯೊಡ್ಡಿದ್ದರು.

ಅನಂತರ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಅವರು ಸೋಂಕಾಲು ದಾರಿಯಾಗಿ ಕೈಕಂಬ ಭಾಗಕ್ಕೆ ಪರಾರಿಯಾಗಿದ್ದಾರೆ.

ಮನೆಯ ಸಿಸಿ ಟಿವಿಯ ಹಾರ್ಡ್‌ ಡಿಸ್ಕ್ ಅನ್ನು ಕಳ್ಳರು ಕೊಂಡೊಯ್ದಿದ್ದಾರೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next