Advertisement

Hard Disk: ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

08:39 PM Nov 26, 2024 | Team Udayavani |

ನವದೆಹಲಿ: ತಪ್ಪುಗಳಿಗೆ ಬೆಲೆ ತೆರಬೇಕಾಗುತ್ತದೆ ಎಂಬುದೇನೋ ಸರಿ! ಆದರೆ ವೇಲ್ಸ್‌ನ ವ್ಯಕ್ತಿಯೊಬ್ಬ ಕಣ್ತಪ್ಪಿನಿಂದಾಗಿ ಬರೋಬ್ಬರಿ 6015 ಕೋಟಿ ರೂ. ಕಳೆದುಕೊಂಡಿದ್ದಾನೆ. ಮನೆಯಲ್ಲಿರುವ ಕಸವನ್ನು ಎಸೆಯುವಂತೆ ಪ್ರೇಯಸಿಯ ಮೇಲೆ ಈತ ಜೋರು ಮಾಡಿದ್ದಕ್ಕೆ, ಕಸದ ಡಬ್ಬದ ಪಕ್ಕದಲ್ಲಿಟ್ಟಿದ್ದ ಹಾರ್ಡ್‌ಡಿಸ್ಕನ್ನು ಎಸೆದಿದ್ದಾಳೆ. ಸುಮಾರು 8000 ಬಿಟ್ಕಾಯಿನ್‌ ಇದ್ದ ಹಾರ್ಡ್‌ಡಿಸ್ಕನ್ನು ಕಸದ ಡಬ್ಬದ ಪಕ್ಕದಲ್ಲಿಟ್ಟ ತಪ್ಪಿಗೆ ಕಳೆದ 1 ದಶಕದಿಂದ ಅದನ್ನು ಹುಡುಕುವ ಕೆಲಸದಲ್ಲಿ ಆ ವ್ಯಕ್ತಿ ತೊಡಗಿಕೊಳ್ಳುವಂತಾಗಿದೆ!

Advertisement

ವೇಲ್ಸ್‌ನ ಜೇಮ್ಸ್‌ ಹಾವೆಲ್ಸ್‌ ಎಂಬ ವ್ಯಕ್ತಿ 2009ರಿಂದ ಬಿಟ್ಕಾಯಿನ್‌ ಮೈನಿಂಗ್‌ನಲ್ಲಿ ತೊಡಗಿದ್ದ. ಆತ ಸುಮಾರು 8000 ಬಿಟ್ಕಾಯಿನ್‌ (6015 ಕೋಟಿ ರೂ. ಮೌಲ್ಯ) ಸಂಪಾದಿಸಿದ್ದ. ಇ-ವೇಸ್ಟ್‌ಗಳನ್ನು ಎಸೆಯುವ ಸ್ಥಳದಲ್ಲಿ ಹಾರ್ಡ್‌ಡಿಸ್ಕ್ ಸಹ ಎಸೆಯಲಾಗಿದ್ದು, ಕೆಲ ವರ್ಷಗಳ ಈ ವಿಷಯ ತಿಳಿದ ಹಾವೆಲ್ಸ್‌ ಅದನ್ನು ಮರಳಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

ಆದರೆ ಹಳೆಯ ಇ-ತ್ಯಾಜ್ಯಗಳನ್ನು ಮತ್ತೆ ತೆಗೆಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಅತ್ಯಂತ ದುಬಾರಿ ತಪ್ಪು ಎಂದೇ ಕರೆಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next