Advertisement

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್ಐ

10:20 PM May 22, 2024 | Team Udayavani |

ಧಾರವಾಡ: ಬೈಕ್ ನಲ್ಲಿ ಹೊರಟಿದ್ದ ವ್ಯಕ್ತಿಯನ್ನು ದೋಚಿ ಪರಾರಿಯಾದ ಇಬ್ಬರು ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ‌ ಹಿಡಿದ ಘಟನೆ ನಡೆದಿದೆ.

Advertisement

ಧಾರವಾಡ ಗ್ರಾಮೀಣ ಠಾಣೆಯ ಪಿಎಸ್ಐ ರೇಣುಕಾ ಐರಾಣಿ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ‌.

ಅಳ್ನಾವರ ರಸ್ತೆಯ ಮಂಡಿಹಾಳ ಗ್ರಾಮದ ಹತ್ತಿರ 4 ಜನ ದರೋಡೆಕೋರರು ಬೈಕ್ ನಲ್ಲಿ ಹೋಗುತ್ತಿದ್ದವನನ್ನ ನಿಲ್ಲಿಸಿ, ಅವನಿಂದ ಮೊಬೈಲ್, ಹಣದ ಪರ್ಸ್ ದೋಚಿಕೊಂಡು ಹೊರಟಿದ್ದಾರೆ‌‌. ಈ ಬಗ್ಗೆ ಸ್ಥಳೀಯರು ಕೂಡಲೇ ಮಹಿಳಾ ಪಿಎಸ್ಐ ರೇಣುಕಾ ಐರಾಣಿ ಅವರಿಗೆ ಕರೆ ಮಾಡಿ, ಘಟನೆ ಕುರಿತು ಹೇಳಿದಾಗ, ತಕ್ಷಣವೇ ಪಿಎಸ್ಐ ರೇಣುಕಾ ಐರಾಣಿಯವರು ತಮ್ಮ ಸ್ವಂತ ಕಾರಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ದರೋಡೆಕೋರರನ್ನು ಹಿಂಬಾಲಿಸಿ 2 ಜನ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್ಐ ರೇಣುಕಾ ಐರಾಣಿಯವರ ಕರ್ತವ್ಯ ನಿಷ್ಠೆ ಮತ್ತು ದೈರ್ಯ ಪ್ರದರ್ಶಿಸಿ, ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿಯಾಗದ್ದರಿಂದ ಅವರ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಅವರು ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.

ಇದನ್ನೂ ಓದಿ: Mallikarjun Kharge: ಅಧಿಕಾರಕ್ಕೆ ಬಂದರೆ ರಾಮಮಂದಿರ ಧ್ವಂಸ ಹೇಳಿಕೆ ಸುಳ್ಳು: ಖರ್ಗೆ ಆಕ್ರೋಶ

Advertisement
Advertisement

Udayavani is now on Telegram. Click here to join our channel and stay updated with the latest news.

Next