Advertisement

ಲಾಡವಂತಿ ಗ್ರಾಮದಲ್ಲಿ ಕಾಯಕೋತ್ಸವ ಚಾಲನೆ

03:58 PM Jan 16, 2021 | Team Udayavani |

ಬಸವಕಲ್ಯಾಣ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸದಲ್ಲಿ ಭಾಗವಹಿಸಬೇಕೆಂಬ ನಿಟ್ಟಿನಲ್ಲಿ ಹಮ್ಮಿಕೊಂಡ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಲಾಡವಂತಿ ಗ್ರಾಮದಲ್ಲಿ ತಾಪಂ ಇಒ ಬೀರೇಂದ್ರಸಿಂಗ್‌ ಠಾಕೂರ್‌ ಚಾಲನೆ ನೀಡಿದರು. ಮಿರಖಲ್‌, ರಾಜೇಶ್ವರ, ಬಟಗೇರಾ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯ ಮನೆ-ಮನೆಗೆ ತೆರಳಿ ಅಭಿಯಾನದ ಉದ್ದೇಶ ಮತ್ತು ಮಹತ್ವದ ಬಗ್ಗೆ ತಿಳಿಸಿದರು.

Advertisement

ನಂತರ ಮಾತನಾಡಿದ ಅವರು, ಯೋಜನೆಯಡಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಕೂಲಿ ಇದ್ದರೂ, ರಾಜ್ಯದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಸುಮಾರು ಶೇ .49 ಮಾತ್ರ ಇದೆ. ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದಾಗ ಇದು ತೀರ ಕಡಿಮೆಯಾಗಿದೆ. ಹೀಗಾಗಿ ಮಹಿಳೆ ಗವಹಿಸುವಿಕೆ ಹೆಚ್ಚಿಸಲು ಜ.15ರಿಂದ ಮಾ.15ರವರೆಗೆ ಮಹಿಳಾ ಕಾಯಕೋತ್ಸ ಹಮ್ಮಿಕೊಳ್ಳಲಾಗಿದೆ ಎಂದರು.

ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕನಿಷ್ಟ ಶೇ.5 ಹೆಚ್ಚಿಸುವುದು ಹಾಗೂ ಮಹಿಳಾ ಪ್ರಧಾನ ಕುಟುಂಬ ಗುರುತಿಸುವುದು, ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯನ್ನಾಗಿ ಮಾಡುವುದೇ ಅಭಿಯಾನದ ಉದ್ದೇಶವಾಗಿದೆ ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ತಾಪಂ ಎಡಿ ಸಂತೋಷ ಚವ್ಹಾಣ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಟಿ.ಸಿ. ಶಿವರಾಜ ಪಾಟೀಲ, ಬಿಎಫ್‌ಟಿ, ಅಂಗನವಾಡಿ ಕಾರ್ಯಕರ್ತೆಯರು  ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next