Advertisement

ಲಡಾಖ್ ನಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ; ವಿದೇಶಾಂಗ ಸಚಿವ ಜೈಶಂಕರ್

10:31 AM Sep 08, 2020 | Nagendra Trasi |

ನವದೆಹಲಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪೂರ್ವ ಲಡಾಖ್ ನಲ್ಲಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದು, ಈ ಸಂಘರ್ಷವನ್ನು ತಣ್ಣಗಾಗಿಸಲು ಭಾರತ ಮತ್ತು ಚೀನಾ ನಡುವೆ ತುಂಬಾ ಆಳವಾಗಿ ರಾಜಕೀಯ ಮಟ್ಟದಲ್ಲಿಯೇ ಮಾತುಕತೆ ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.

Advertisement

ಇಂಡಿಯನ್ ಎಕ್ಸ್ ಪ್ರೆಸ್ ನ್ಯೂಸ್ ಪೇಪರ್ ಜತೆಗೆ ಮಾತುಕತೆ ನಡೆಸಿದ ವೇಳೆ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ. ಉಭಯ ದೇಶಗಳ ನಡುವಿನ ಸಂಬಂಧ ಗಡಿ ವಿವಾದದಿಂದ ಹದಗೆಡಬಾರದು. ಗಾಲ್ವಾನ್ ನಲ್ಲಿ ದುರದೃಷ್ಟಕರ ಘಟನೆಯೊಂದು ನಡೆದು ಹೋಗಿದೆ ಎಂದು ನಾನು ಈ ಮೊದಲೇ ಬರೆದಿದ್ದೆ ಎಂದು(ದ ಇಂಡಿಯನ್ ವೇ ಎಂಬ ನೂತನ ಪುಸ್ತಕ ಉದಾಹರಣೆ) ಜೈಶಂಕರ್ ತಿಳಿಸಿದ್ದಾರೆ.

ಜೂನ್ 15ರಂದು ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಮಾತುಕತೆಗೆ ತೆರಳಿದ್ದ 20 ಮಂದಿ ಭಾರತೀಯ ಸೈನಿಕರನ್ನು ಚೀನಾ ಸೇನೆ ಏಕಾಏಕಿ ಹಲ್ಲೆ, ದಾಳಿ ನಡೆಸಿತ್ತು. ಇದರ ಪರಿಣಾಮ 20 ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಂತರ ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ನಡುವೆ ಘರ್ಷಣೆ ನಡೆಯುತ್ತಲೇ ಇದೆ.

ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನಾಪಡೆಯ ಪ್ರತೀಕಾರಕ್ಕೆ 40ಕ್ಕೂ ಅಧಿಕ ಚೀನಾ ಸೈನಿಕರು ಸಾವನ್ನಪ್ಪಿದ್ದರು. ಆದರೆ ಎಷ್ಟು ಮಂದಿ ಸಾವನ್ನಪ್ಪಿದ್ದರು ಎಂಬ ಬಗ್ಗೆ ಚೀನಾ ಅಧಿಕೃತ ಮಾಹಿತಿ ಬಹಿರಂಗಪಡಿಸಿರಲಿಲ್ಲವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next