Advertisement

ಕನ್ನಡದಲ್ಲಿ ಮಾತನಾಡಿದ ಲಡಾಕ್‌ ಸಂಸದ

11:19 PM Mar 03, 2020 | Lakshmi GovindaRaj |

ನವದೆಹಲಿ: ಲಡಾಕ್‌ ಸಂಸದ, ಲಡಾಕ್‌ ಬಿಜೆಪಿ ಜಿಲ್ಲಾಧ್ಯಕ್ಷ ಜಾಮ್ಯಾಂಗ್‌ ತ್ಸೆರಿಂಗ್‌ ನ್ಮಗ್ಯಾಲ್‌ ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ. ಬಿಜೆಪಿ ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಜೊತೆ ಸೆಲ್ಫಿ ತೆಗೆದು ಕೊಂಡು ಪೋಸ್ಟ್‌ ಮಾಡಿದ್ದಾರೆ.

Advertisement

ಜೊತೆಗೆ, ತಾವು ಕನ್ನಡದಲ್ಲಿ ಮಾತನಾಡಿದ್ದನ್ನೂ ಹಂಚಿಕೊಂಡಿದ್ದಾರೆ. ಬಿಜೆಪಿ ಸಂಸದ ರಾದ ಅವರು, ನನಗೆ ಈ ಮೂವರು ಕನ್ನಡಿಗರು ಕನ್ನಡ ಕಲಿಸಲು ಪ್ರಯತ್ನಿಸುತ್ತಿದ್ದರು. ನಾನು ಡಿ.ಕೆ.ಸುರೇಶ್‌ಗೆ “ಬಿಜೆಪಿ ಸೇರ್ಕೊಳಿ’ ಎಂದು ಹೇಳಿದೆ. ಪ್ರತಾಪ್‌ ಸಿಂಹ ಮತ್ತು ತೇಜಸ್ವಿ ಸೂರ್ಯ ಜೊತೆ ಉತ್ತಮ ಸಮಯ ಕಳೆದೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next