Advertisement

ಲಡಾಖ್‌ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ

03:30 AM Aug 07, 2019 | sudhir |

ಮುಂಬಯಿ: ಕೇಂದ್ರ ಸರಕಾರ ಜಮ್ಮು- ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ಕಾಶ್ಮೀರ ಮತ್ತು ಲಡಾಖ್‌ನ್ನು ಪ್ರತ್ಯೇಕಿಸಿರುವುದರಿಂದ ಲಡಾಖ್‌ನ ಉದಯೋನ್ಮುಖ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ.

Advertisement

ಇನ್ನು ಮುಂದೆ ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನ ಕ್ರಿಕೆಟಿಗರು ಜಮ್ಮು-ಕಾಶ್ಮೀರ ಕ್ರಿಕೆಟ್‌ ಅಸೋಸಿಯೇಶನ್‌ ಅನ್ನು ಪ್ರತಿನಿಧಿಸಬಹುದು ಎಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್‌ ರಾಯ್‌ ಹೇಳಿದ್ದಾರೆ.

ಸದ್ಯಕ್ಕೆ ಲಡಾಖ್‌ಗೆ ಪ್ರತ್ಯೇಕ ಕ್ರಿಕೆಟ್‌ ಮಂಡಳಿ ರಚಿಸುವ ಉದ್ದೇಶವಿಲ್ಲ. ಬಿಸಿಸಿಯ ಎಲ್ಲ ದೇಶೀಯ ಪಂದ್ಯಗಳಲ್ಲಿ ಲಡಾಖ್‌ನ ಕ್ರಿಕೆಟಿಗರು ಜಮ್ಮು-ಕಾಶ್ಮೀರ ತಂಡದಲ್ಲಿ ಆಡಬಹುದು ಎಂದಿದ್ದಾರೆ.

ಇಷ್ಟರ ತನಕ ಜಮ್ಮು-ಕಾಶ್ಮೀರದ ರಣಜಿ ತಂಡದಲ್ಲಿ ಲಡಾಖ್‌ನ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ. ಈ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ. ರಣಜಿ ಪಂದ್ಯಗಳು ವರ್ಷಾಂತ್ಯದಲ್ಲಿ ಆರಂಭವಾಗಲಿವೆ.

ಪುದುಚೇರಿ ಮಾದರಿಯಲ್ಲಿ ಲಡಾಖ್‌ಗೂ ಬಿಸಿಸಿಐಯಲ್ಲಿ ಮತದಾನ ಹಕ್ಕು ಸಿಗುವುದೇ ಎಂದು ಕೇಳಿದಾಗ ರಾಯ್‌ ನಾವು ಇನ್ನೂ ಈ ಕುರಿತು ಚಿಂತಿಸಿಲ್ಲ ಎಂದು ಉತ್ತರಿಸಿದ್ದಾರೆ.

Advertisement

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರದಿಂದ ಕ್ರಿಕೆಟ್‌ನ ಮೇಲೇನೂ ಪರಿಣಾಮವಾಗುವುದಿಲ್ಲ. ಕಣಿವೆಯಲ್ಲಿ ಕ್ರಿಕೆಟ್‌ ಎಂದಿನಂತೆ ಇರಲಿದೆ, ಆ ಬಗ್ಗೆ ಚಿಂತೆ ಬೇಡ ಎಂದಿದ್ದಾರೆ.

ಜಮ್ಮು-ಕಾಶ್ಮೀರ ತಂಡ ಮುಂದಿನ ದಿನಗಳಲ್ಲಿ ತವರಿನ ಪಂದ್ಯಗಳನ್ನು ಶ್ರೀನಗರದಲ್ಲಿ ಆಡುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next