Advertisement

ನಾಯಿಮರಿಗಳಿಗೆ ಹಾಲುಣಿಸುವ ಬೆಕ್ಕು !

04:47 PM Nov 29, 2017 | Team Udayavani |

ಬೆಳ್ತಂಗಡಿ: ಬೆಕ್ಕು ಹಾಗೂ ನಾಯಿ ಬದ್ಧ ವೈರಿಗಳು. ಆದರೆ ಈ ಮನೆಯಲ್ಲಿರುವ ಬೆಕ್ಕು ಮಾತ್ರ ನಾಯಿಮರಿಗಳಿಗೆ ಹಾಲುಣಿಸಿ ತಾಯಿ ಪ್ರೀತಿ ತೋರಿದೆ. ಇದು ಮುಂಡಾಜೆ ಗ್ರಾಮದ ಪರಮುಖದ ಮೋಹನ್‌ ನಾೖಕ್‌ ಅವರ ಮನೆಯಲ್ಲಿ ನಡೆದ ಘಟನೆ. ಮನೆಯ ಬೆಕ್ಕು 8 ನಾಯಿಮರಿಗಳಿಗೆ ದಿನನಿತ್ಯ ಹಾಲುಣಿಸುತ್ತ ನಾಯಿಮರಿಗಳಿಗೆ ತಾಯಿ ಪ್ರೀತಿ ತೋರುತ್ತಿದೆ.

Advertisement

ಮನೆಯಂಗಳದಲ್ಲಿ ಬೆಕ್ಕು ಎಲ್ಲೇ ಮಲಗಿದ್ದರೂ ಈ ನಾಯಿಮರಿಗಳು ಬಳಿಗೆ ಬಂದು ಅದರೊಂದಿಗೆ ತುಂಬಾ ಅನ್ಯೋನ್ಯವಾಗಿರುತ್ತವೆ. ನಾಯಿಮರಿಗಳ ತಾಯಿ ಕೂಡ ತನ್ನ ಮರಿಗಳ ಲಾಲನೆ ಪಾಲನೆ ಮಾಡುತ್ತಿರುವ ಬೆಕ್ಕಿಗೆ ಏನೂ ಮಾಡುವುದಿಲ್ಲ ಎನ್ನುತ್ತಾರೆ ಮನೆಯವರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next