Advertisement

ಅಮೆರಿಕದಲ್ಲೂ ವೆಂಟಿಲೇಟರ್‌ಗಳ ಕೊರತೆಯೇ ದೊಡ್ಡ ಸಮಸ್ಯೆ

03:55 PM Mar 31, 2020 | Suhan S |

ವಾಷಿಂಗ್ಟನ್‌: ಕೋವಿಡ್ 19 ಇಂದು ಜಗತ್ತಿನಾದ್ಯಂತ ಮರಣಮೃದಂಗವನ್ನು ಬಾರಿಸುತ್ತಿದೆ. ಚೀನಕ್ಕಿಂತ ಹೆಚ್ಚಿನ ಹಾನಿಯನ್ನು ಅಮೆರಿಕದಲ್ಲಿ ಮಾಡುತ್ತಿದೆ. ಅಮೆರಿಕದಲ್ಲಿ ಇದೀಗ ವೆಂಟಿಲೇಟರ್‌ ಕೊರತೆಯೇ ಸಮಸ್ಯೆಯಾಗಿ ಕಾಡುತ್ತಿದೆ. ಅಷ್ಟೇ ಅಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ 13 ವರ್ಷದ ಹಿಂದೆ ಯೋಚಿಸಿದಂತೆ ಕ್ರಿಯಾಶೀಲವಾಗಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ನ್ಯೂಯಾರ್ಕ್‌ ಟೈಮ್ಸ್‌ನ ಲೇಖನವೊಂದು ಅಭಿಪ್ರಾಯಪಟ್ಟಿದೆ.

Advertisement

ಬರೀ ಹದಿಮೂರು ವರ್ಷ ಹದಿಮೂರು ವರ್ಷಗಳ ಹಿಂದಿನ ಕಥೆ ಇದು. ಆರೋಗ್ಯ ಅಧಿಕಾರಿಗಳ ತಂಡವೊಂದು ವೈದ್ಯಕೀಯ ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ಶ್ವೇತಭವನದ ಗಮನಸೆಳೆದಿತ್ತು. ವೆಂಟಿಲೇಟರ್‌ಗಳ ಕೊರತೆ ರಾಷ್ಟ್ರದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಪ್ರಸ್ತುತ ಸೀಮಿತ ಸಂಖ್ಯೆಯಲ್ಲಷ್ಟೇ ವೆಂಟಿಲೇಟರ್‌ಗಳು ಇದ್ದು, ದುಬಾರಿಯೂ ಆಗಿದೆ. ಜ್ವರ, ಸಾಂಕ್ರಾಮಿಕ ರೋಗಗಳು ಎದುರಾದ ಸಂರ್ಭದಲ್ಲಿ ನಾವು ಕೈಕಟ್ಟಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಇದನ್ನು ಅರಿತ ಸರಕಾರ ಬಜೆಟ್‌ ನಲ್ಲಿ ಹಣ ಮೀಸಲಿಟ್ಟಿತು. ಅಗ್ಗದಲ್ಲಿ ವೆಂಟಿಲೇಟರ್‌ಗಳನ್ನು ನಿರ್ಮಿಸಲು ಗುತ್ತಿಗೆಯನ್ನು ನೀಡಿತ್ತು. ಅಂತಿಮವಾಗಿ ಕಂಪೆನಿ ನಡುವೆ ಒಪ್ಪಂದವೂ ಆಯಿತು. ಕೆಲಸವೂ ಆರಂಭವಾಯಿತು. ವಿಪರ್ಯಾಸ ಎಂದರೆ ಅಮೆರಿಕ ಸರಕಾರ ಈ ಬಹುಕೋಟಿ ಡಾಲರ್‌ ಮೌಲ್ಯದ ವೈದ್ಯಕೀಯ ಸಾಧನಗಳ ತಯಾರಿಸಲು ಕ್ಯಾಲಿಫೋರ್ನಿಯಾದ ಸಣ್ಣ ಕಂಪನಿಗೆ ವಹಿಸಲಾಗಿತ್ತು. ಸಂಸ್ಥೆ ಇದರಲ್ಲಿ ವಿಫಲವಾಗಿ, ಉತ್ಪಾದಿಸಲಾದ ವೆಂಟಿಲೇಟರ್‌ಗಳು ಶೂನ್ಯ.

ಮತ್ತೆ ಟೆಂಡರ್‌ ಇದರಿಂದ 5 ವರ್ಷ ವ್ಯರ್ಥವಾಯಿತು. ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಸಮಸ್ಯೆ ಕಾಡಲಾರಂಭಿಸಿದವು. 2014ರಲ್ಲಿ ಸರಕಾರ ಮತ್ತೂಂದು ಕಂಪನಿಯೊಂದಿಗೆ ಒಪ್ಪಂದ ಪ್ರಾರಂಭಿಸಿತು. ಆದರೆ ಅವರು ಉತ್ಪಾದಿಸಿದ ವೆಂಟಿಲೇಟರ್‌ಗಳು ಇನ್ನೂ ತಲುಪಬೇಕಿದೆ ಅಷ್ಟೇ. ಇಂದು ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ವೆಂಟಿಲೇಟರ್‌ ಗಳ ಕೊರತೆಯು ತುರ್ತು ಪರಿಸ್ಥಿತಿಯ ನಿಯಂತ್ರಣದಲ್ಲಿ ಸೋಲುವಂತೆ ಮಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾರಿಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಅವರಿಗೆ ವೆಂಟಿಲೇಟರ್‌ತುಂಬಾ ಅಗತ್ಯ ಇದೆ. ಈಗ ಅಮೆರಿಕ ಕೊನೆಗೂ ಎಚ್ಚೆತ್ತಿದ್ದು, ಆಗ್ಗ ಮತ್ತು ಬಳಸಲು ಸುಲಭವಾದ ವೆಂಟಿಲೇಟರ್‌ಗಳನ್ನು ತಯಾರಿಸಲು ಮುಂದಾಗಿದೆ.

2006 ರಲ್ಲಿ, ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ಬಯೋಮೆಡಿಕಲ್‌ ಅಡ್ವಾನ್ಸ್ಡ್ ರಿಸರ್ಚ್‌ ಅಂಡ್‌ ಡೆವಲಪ್ಮೆಂಟ್‌ ಅಥಾರಿಟಿ ಎಂಬ ಹೊಸ ವಿಭಾಗವನ್ನು ಸ್ಥಾಪಿಸಿತ್ತು. ರಾಸಾಯನಿಕ, ಜೈವಿಕ ಮತ್ತು ಪರಮಾಣು ದಾಳಿಗಳಿಗೆ ಮತ್ತು ಸಾಂಕ್ರಾಮಿಕ ಕಾಯಿಲೆಗಳಿಗೆ ವೈದ್ಯಕೀಯ ಉಪಕರಣ ಗಳನ್ನು ಸಿದ್ಧಪಡಿಸುವ ಆದೇಶವನ್ನು ಹೊಂದಿತ್ತು. ಕಾರ್ಯಾ ಚರಣೆಯ ಮೊದಲ ವರ್ಷದಲ್ಲಿ, ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೇಗೆ ಹೆಚ್ಚಿಸಬೇಕೆಂದು ಅಧ್ಯಯನ ನಡೆಸಲಾಯಿತು. ಆ ಕಾರ್ಯ ಪ್ರಗತಿಯಲ್ಲಿದೆ.

Advertisement

ಅಮೆರಿಕ ಅಂದೇ ಎಚ್ಚೆತ್ತುಕೊಂಡಿದ್ದರೆ, ಇಂದು ವೆಂಟಿಲೇಟರ್‌ ಸಮಸ್ಯೆಯಿಂದ ಜನರು ಸಾವೀಗೀಡಾಗುತ್ತಿರಲ್ಲ. ಕೋವಿಡ್ 19 ಸಂದರ್ಭ ದಲ್ಲಿ ಅಸಹಾಯಕ ಸ್ಥಿತಿ ಉದ್ಬವಿಸುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯ ಪರಿಣಿತರು. ಬಹುತೇಕ ರಾಷ್ಟ್ರಗಳಲ್ಲಿ ಇಂದು ವೆಂಟಿಲೇಟರ್‌ಗಳ ಅಭಾವ ಬಹುವಾಗಿ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next