Advertisement
ಸುವರ್ಣಸೌಧದಲ್ಲಿ ಶನಿವಾರ ಜರುಗಿದ ತಾಪಂ ಕೆಡಿಪಿ ಸಭೆಯಲ್ಲಿ ರಸಗೊಬ್ಬರ ಕುರಿತು ನಡೆಸಿದ ಚರ್ಚೆಯಲ್ಲಿ ಮಾತನಾಡಿದ ಅವರು, ಇದೇ ಯೂರಿಯಾ ಗದ್ದಲದಲ್ಲಿ ಜಿಲ್ಲೆಯಲ್ಲಿ ಪ್ರಾಣ ಕಳೆದುಕೊಂಡ ಉದಾಹರಣೆಯಿದೆ. ಮತ್ತೂಮ್ಮೆ ಅಂತಹ ಯಾವುದೇ ಘಟನೆಗಳು ಜರುಗುವುದು ಬೇಡ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಯೂರಿಯಾ ಕೊರತೆಯಾಗದಂತೆ ನೋಡಿಕೊಳ್ಳಿ. ಅಗತ್ಯವಿದ್ದರೇ ಮತ್ತೂಮ್ಮೆ ಡೀಲರ್‌ಗಳ ಸಭೆ ಕರೆದು ಅವರಿಗೆ ತಿಳಿಹೇಳುವ ಕೆಲಸವಾಗಲಿ ಎಂದರು.
Related Articles
Advertisement
ಮಾಸಣಗಿ ಗ್ರಾಮದಲ್ಲಿ ರೈತರಿಗೆ ವಾರದ ಸಂತೆ ಪ್ರಾರಂಭಿಸುವಂತೆ ಕಳೆದ ಸಭೆಯಲ್ಲಿ ಎಪಿಎಂಸಿ ಅಧಿಕಾರಿಗಳಿಗೆ ತಿಳಿಸಿದರೂ ಈ ವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ ಎಂದು ತಾಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ತೀವ್ರ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ, ಮಾಸಣಗಿ ಗ್ರಾಮದಲ್ಲಿ ವಾರದ ಸಂತೆ ನಡೆಸಲು ಸ್ಥಳ ಗುರುತಿಸಿ ಕೊಡುವಂತೆ ಪಿಡಿಒ ಅವರಿಗೆ ಪತ್ರ ಬರೆದು ಕೇಳಲಾಗಿತ್ತು, ಸ್ಥಳದ ಲಭ್ಯತೆ ಇಲ್ಲವೆಂದು ಪಿಡಿಒ ಉತ್ತರ ನೀಡಿದ್ದರಿಂದ ಸದರಿ ಕಾಮಗಾರಿಯನ್ನು ಕೈಬಿಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎನ್. ಕರೇಗೌಡ್ರ ಮಾತನಾಡಿ, ತಾಲೂಕಿನಲ್ಲಿ ಸುರಿದ ಅತಿಯಾದ ಮಳೆಗೆ ರೈತರ ತೋಟಗಳಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಾನಿಗೊಳಗಾದ ರೈತರಿಗೆ ಪಾರದರ್ಶಕವಾದ ಪರಿಹಾರ ನೀಡಲು ಮುಂದಾಗಬೇಕು. ಸಮೀಕ್ಷೆ ಮಾಡುವುದರಲ್ಲಿ ಎಡವಟ್ಟಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯನ್ನಾಗಿಸುವುದಾಗಿ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ವಿಜಯಲಕ್ಷಿ ್ಮೕ , ಕಳೆದ ತಿಂಗಳು ತಾಲೂಕಿನಲ್ಲಿ ಸುರಿದ ಮಳೆಗೆ 955 ಹೆಕ್ಟರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಪ್ರತಿಯೊಬ್ಬರ ತೋಟಗಳನ್ನು ಪರಿಶೀಲಿಸಿ ಸರಿಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದರು.
ತಾಲೂಕಿನಾದ್ಯಂತ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಫಾಗಿಂಗ್ ವ್ಯವಸ್ಥೆಯನ್ನು ಪ್ರತಿ ಗ್ರಾಮದಲ್ಲಿಯೂ ಕಲ್ಪಿಸುವಂತೆ ತಾಪಂ ಇಒ ಅಬಿದ್ ಗದ್ಯಾಳ ಆರೋಗ್ಯಾಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ಡಾ| ಬಿ.ಆರ್.ಲಮಾಣಿ, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಈಗಾಗಲೇ ಒಂದು ಹಂತದ ಫಾಗಿಂಗ್ ಮಾಡಲಾಗಿದೆ. ಲಾರ್ವಾ ಸರ್ವೇ ಕಾರ್ಯ ಕೂಡ ಮುಕ್ತಾಯವಾಗಿದ್ದು, ಮಳೆ ನಿರಂತವಾಗಿ ಬರುತ್ತಿರುವುದರಿಂದ ಎರಡನೇ ಹಂತದ ಫಾಗಿಂಗ್ ಕಾರ್ಯಕ್ಕೆ ಅಡ್ಡಿಯಾಗಿದೆ. ತಾಲೂಕಿನಲ್ಲಿ ಈಗಾಗಲೇ 16 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಿಗೂ ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ತಹಬಂದಿಗೆ ತರಲಾಗಿದೆ ಎಂದರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ಸಭೆಗೆ ವಿವರಿಸಿದರು. ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.