Advertisement

ಮೋದಿ-ಬಿಎಸ್‌ವೈ ನಡುವೆ ವಿಶ್ವಾಸದ ಕೊರತೆ

11:00 PM Oct 04, 2019 | Lakshmi GovindaRaju |

ಮೈಸೂರು: ನೆರೆ ಪರಿಹಾರ ಸಂಬಂಧ ರಾಜ್ಯದ ವರದಿಯನ್ನು ಕೇಂದ್ರ ತಿರಸ್ಕರಿಸಲು ರಾಜ್ಯ ಸರ್ಕಾರದ ಬೇಜವಾಬ್ದಾರಿತನವೇ ಕಾರಣ ಎಂದು ಮಾಜಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಹಾಗೂ ಯಡಿಯೂರಪ್ಪ ನಡುವೆ ವಿಶ್ವಾಸದ ಕೊರತೆಯಿದೆ. ಇವರಿಬ್ಬರ ನಡುವಿನ ವಿಶ್ವಾಸದ ಕೊರತೆಯಿಂದಾಗಿ ರಾಜ್ಯದ ಜನರು ತೊಂದರೆ ಅನುಭವಿಸಬೇಕಾಗಿ ಬಂದಿದೆ ಎಂದರು.

Advertisement

“ನಾನು ಮುಖ್ಯಮಂತ್ರಿ ಆಗಿದ್ದಾಗ ಕೊಡಗಿನಲ್ಲಿ ಪ್ರವಾಹ ಉಂಟಾಗಿತ್ತು. ಈ ವೇಳೆ, ಮೋದಿ ಅವರೇ ನನಗೆ ದೂರವಾಣಿ ಕರೆ ಮಾಡಿ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಸಿದ್ದರು. ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಆದರೆ, ಈಗ ಅವರ ಪಕ್ಷದ ಮುಖ್ಯಮಂತ್ರಿಗೇ ಚರ್ಚೆ ಮಾಡಲು ಅವಕಾಶ ಕೊಡ್ತಿಲ್ಲ, ಸಹಕಾರ ಕೊಡ್ತಿಲ್ಲ ಎನ್ನುವುದು ಯಾಕೆಂದು ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

ಯಾರಪ್ಪ ಅವನು ವಿಜಯೇಂದ್ರ?: ಯಾರಪ್ಪ ಅವನು? ದುಡ್ಡು ಲಪಟಾಯಿ ಸೋದು ಬಿಟ್ಟು, ಬೊಕ್ಕಸದ ಬಗ್ಗೆ ನಿನ್ನೆ-ಮೊನ್ನೆ ಬಂದ ಅವನಿಗೇನು ಗೊತ್ತು ಎಂದು ಕುಮಾರಸ್ವಾಮಿ ಕಿಡಿಕಾರಿದರು. ದೋಸ್ತಿ ಸರ್ಕಾರ ಇದ್ದಾಗ ರಾಜ್ಯದ ಬೊಕ್ಕಸ ಬರಿದಾ ಗಿದೆ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಕಿಡಿ ಕಾರಿದ ಅವರು, ದೊಡ್ಡ ನಾಯಕನೆಂದು ಬಿಂಬಿಸಿಕೊಂಡಾಕ್ಷಣ ಎಲ್ಲವೂ ಗೊತ್ತಾಗುತ್ತ ದೆಯೇ? ರಾಜ್ಯದ ಬೊಕ್ಕಸ ಖಾಲಿಯಾಗಿಲ್ಲ. ಅವನ ಬೊಕ್ಕಸ ಖಾಲಿಯಾಗಿದೆ. ಅದನ್ನು ತುಂಬಿಸಿಕೊಳ್ಳಲು ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next