Advertisement

Lack of teachers: ಡಿಸಿಎಂ ಸ್ವಕ್ಷೇತ್ರದಲ್ಲಿ ಶಿಕ್ಷಕರ ಕೊರತೆ

03:50 PM Aug 28, 2023 | Team Udayavani |

ಕನಕಪುರ: ತಾಲೂಕಿನಲ್ಲಿ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣದ ಕೊರತೆ ಕಾಡುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

Advertisement

ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ವಕ್ಷೇತ್ರ ಕನಕಪುರ ತಾಲೂಕಿನಲ್ಲಿ ಪ್ರಾರ್ಥಮಿಕ 388 ಪ್ರೌಢ 35 ಸೇರಿ 423 ಶಾಲೆಗಳಲ್ಲಿ ಪ್ರಾಥಮಿಕ ಶಾಲೆಗಳ ಶಾಲೆಗಲಿಗೆ ಮಂಜೂರಾಗಿದ್ದ 1085 ಶಿಕ್ಷಕರ ಹುದ್ದೆಗಳಲ್ಲಿ 703 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ 382 ಶಿಕ್ಷಕರ ಹುದ್ದೆ ಖಾಲಿ ಇದೆ ಪ್ರೌಢಶಿಕ್ಷಣಕ್ಕೆ ಮಂಜೂರು ಮಾಡಿದ್ದ 274 ಹುದ್ದೆಗಳಲ್ಲಿ 213 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 61 ಹುದ್ದೆ ಖಾಲಿ ಇವೆ. ಸುಮಾರು 86 ಶಾಲೆಗಳಲ್ಲಿ ಒಬ್ಬರೂ ಕಾಯಂ ಶಿಕ್ಷಕರೆ ಇಲ್ಲ ಅತಿಥಿ ಶಿಕ್ಷಕರ ಆಧಾರದ ಮೇಲೆ ಶಾಲೆಗಳು ನಡೆಯುತ್ತಿವೆ. ಕೆಲವೊಂದು ಶಾಲೆಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ. ಅಂತಹ ಶಾಲೆಗಳಲ್ಲಿ ಎಲ್ಲ ಪಠ್ಯಗಳನ್ನು ಒಬ್ಬ ಶಿಕ್ಷಕರೆ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಕರಿಗೆ ಒತ್ತಡದ ಜೊತೆಗೆ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಮರೀಚಿಕೆಯಾದಂತಾಗಿದೆ.

ಗಡಿ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚು: ಗಡಿ ಭಾಗ ದಲ್ಲಿ ಶಿಕ್ಷಕರ ಕೊರತೆ ಹೆಚ್ಚು ಕಾಡುತ್ತಿದೆ ಗಡಿ ಭಾಗದ ಕೋಡಿಹಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಖಾಯಂ ಶಿಕ್ಷಕರ ಕೊರತೆ ಇದೆ ಕೋಡಿಹಳ್ಳಿ ಹೋಬಳಿಯ 68 ಶಾಲೆಗಳಿಗೆ 180 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಆದರೆ, 80 ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 52 ಅತಿಥಿ ಶಿಕ್ಷಕರನ್ನು ಕರ್ತವ್ಯದಲ್ಲಿದ್ದರೂ ಸುಮಾರು 50 ಶಿಕ್ಷಕರ ಕೊರತೆ ಇದೆ. ಉಯ್ಯಂಬಳ್ಳಿ ಹೋಬಳಿಯಲ್ಲಿ ಶಿಕ್ಷಕರ ಕೊರತೆ ಇತ್ತು. ಆದರೆ, ಪ್ರಾಯೋಗಿಕವಾಗಿ ಎರಡು ಪಬ್ಲಿಕ್‌ ಶಾಲೆಗಳನ್ನು ತೆರೆಯಲಾಗಿದ್ದು ಇದರಿಂದ ಶಿಕ್ಷಕರ ಸಮಸ್ಯೆ ಸದ್ಯಕ್ಕೆ ದೂರವಾಗಿದೆ.

ಶಿಕ್ಷಕರ ಕೊರತೆಯಲ್ಲೂ ಶಿಕ್ಷಕರ ವರ್ಗಾವಣೆ: ಶಿಕ್ಷಕರ ಕೊರತೆಯಲ್ಲೂ ಶಿಕ್ಷಕರನ್ನು ವರ್ಗಾವಣೆ ಮಾಡಿರುವುದು ಮತ್ತಷ್ಟು ಚರ್ಚೆಗೆ ಎಡೆಮಾಡಿ ಕೊಟ್ಟಿದೆ. 703 ಕಾಯಂ ಶಿಕ್ಷಕರಲ್ಲಿ 155 ಶಿಕ್ಷಕರನ್ನು ಸರ್ಕಾರ ವರ್ಗಾವಣೆ ಮಾಡಿತ್ತು ವಿಪರ್ಯಾಸ ಅಂದರೆ ಬೇರೇ ಕಡೆಯಿಂದ ಕನಕಪುರ ತಾಲೂಕಿಗೆ ಕೇವಲ 10 ಶಿಕ್ಷಕರು ಮಾತ್ರ ವರ್ಗಾವಣೆ ಬಯಸಿ ದ್ದಾರೆ. ಆದರೆ, ಶಿಕ್ಷಕರ ಕೊರತೆ ಹೆಚ್ಚಿರುವುದರಿಂದ ತಾತ್ಕಾಲಿಕವಾಗಿ ವರ್ಗಾವಣೆ ಆದೇಶ ತಡೆ ಹಿಡಿದಿದೆ. ವರ್ಗಾವಣೆಯಾಗಿರುವ ಶಿಕ್ಷಕರನ್ನು ಬಿಡುಗಡೆಗೊಳಿ ಸಿದರೆ ಮತ್ತಷ್ಟು ಶಿಕ್ಷಕರ ಕೊರತೆ ಹೆಚ್ಚಾ ಗಲಿದೆ. ವರ್ಗಾವಣೆಯಾಗಿರುವ ಶಿಕ್ಷಕರು ಬಿಡುಗಡೆಗೊಳಿ ಸುವಂತೆ ಇಲಾಖೆ ಅಧಿಕಾರಿಗಳಿಗೆ ಒತ್ತಡ ಏರುತ್ತಿರು ವುದು ಶಿಕ್ಷಣ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶಿಕ್ಷಕರ ಕೊರತೆ ಸರಿದೂಗಿಸಲು ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಕಕ್ಕೆ ಆದೇಶ ಮಾಡಿದೆ ಆದರೆ ಅತಿಥಿ ಶಿಕ್ಷಕರು ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ 543 ಖಾಲಿ ಇರುವ ಹುದ್ದೆಗಳಿಗೆ ಮೊದಲ ಹಂತದಲ್ಲಿ 225 ಎರಡನೇ ಹಂತದಲ್ಲಿ ಪ್ರಾರ್ಥಮಿಕ163 ಪ್ರೌಢ 30 ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಸೂಚನೆ ಕೊಟ್ಟಿದೆ. ಆದರೆ ಸ್ಥಳೀಯವಾಗಿ ಅರ್ಹ ಅತಿಥಿ ಶಿಕ್ಷಕರ ಕೊರತೆ ಇದೆ ಜೋತೆಗೆ ವೇತನ ಕಡಿಮೆ ಹಾಗಾಗಿ ಗಡಿ ಭಾಗದ ಶಾಲೆಗಳಿಗೆ ಹೋಗಲು ಅತಿಥಿ ಶಿಕ್ಷಕರು ಹಿಂದೆಟು ಹಾಕುತ್ತಿದ್ದಾರೆ ಎನ್ನಲಾಗಿದೆ .

ಸಮಸ್ಯೆಗೆ ಪಬ್ಲಿಕ್‌ ಶಾಲೆಯೇ ಪರಿಹಾರ: ಪಬ್ಲಿಕ್‌ ಶಾಲೆಗಳಿಂದ ಮಾತ್ರ ಶಿಕ್ಷಕರ ಸಮಸ್ಯೆಗೆ ಪರಿಹಾರ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಉಯ್ಯಂಬಳ್ಳಿ ಮತ್ತು ಏಳಗಳ್ಳಿ ಗ್ರಾಮದಲ್ಲಿ ಪ್ರಯೋಗಿಕವಾಗಿ ತೆರೆದಿರುವ ಪಬ್ಲಿಕ್‌ ಶಾಲೆಗಳು ಯಶಸ್ವೀಯಾಗಿ ನಡೆಯುತ್ತಿವೆ ಪಬ್ಲಿಕ್‌ ಶಾಲೆಗಳನ್ನು ವಿಸ್ತರಣೆ ಮಾಡಿ ದರೆ ಸಮಸ್ಯೆ ಬಗೆಹರಿಯಲಿದೆ ಎಂಬುದು ಕೆಲವು ಅಧಿಕಾರಿಗಳು ಮಾತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಹ ಇದೇ ಮಾದರಿಯ ಶಾಲೆ ತೆರೆಯುವ ಭರವಸೆ ಕೊಟ್ಟಿದ್ದಾರೆ. ಅದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ತಾಲೂಕಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬುದು ಜನರ ಆಶಯ.

Advertisement

ಶಿಕ್ಷಕರ ಕೊರತೆಯಿಂದ ಸರ್ಕಾರ ಅತಿಥಿ ಶಿಕ್ಷಕರನ್ನು ನಿಯೋಜನೆಗೆ ಅವಕಾಶ ಕೊಟ್ಟಿದೆ. ಆದರೆ, ಸ್ಥಳೀಯವಾಗಿ ಅರ್ಹ ಅತಿಥಿ ಶಿಕ್ಷಕರು ಇಲ್ಲ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡಿರುವ ಪಬ್ಲಿಕ್‌ ಶಾಲೆಯಂತೆ ಪ್ರತಿ ಎರಡು ಪಂಚಾ ಯತಿಗೊಂದು ಪಬ್ಲಿಕ್‌ ಶಾಲೆ ತೆರೆಯುವ ಕಾರ್ಯ ಪ್ರಗತಿಯಲ್ಲಿದ್ದು ಇದರಿಂದ ಶಿಕ್ಷಕರ ಕೊರತೆ ಸಮಸ್ಯೆ ಬಗೆ ಹರಿಯಲಿದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವೂ ಸಿಗಲಿದೆ. ● ನಾರಾಯಣ್‌, ಪ್ರಭಾರ ಬಿಇಒ

-ಬಿ.ಟಿ.ಉಮೇಶ್‌ ಬಾಣಗಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next