Advertisement

ಟಿಬಿ ಔಷಧದ ಕೊರತೆ?

12:44 AM Dec 16, 2020 | mahesh |

ಪ್ಯಾಂಗ್ಯಾಂಗ್‌: ತನ್ನ ದೇಶದಲ್ಲಿ ಒಂದೇ ಒಂದೂ ಕೋವಿಡ್‌ ಪ್ರಕರಣಗಳಿಲ್ಲ ಎಂದು ಸರ್ವಾಧಿಕಾರಿ ಕಿಮ್‌ ಜಾಂಗ್‌ನ ಉತ್ತರ ಕೊರಿಯಾ ಹೇಳುತ್ತದೆ. ಇದೆಷ್ಟು ನಿಜವೋ ಸುಳ್ಳೋ ತಿಳಿಯದು. ಆದರೆ, ಆ ದೇಶದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಅತೀವ ಪ್ರಮಾಣದಲ್ಲಿದೆ ಎನ್ನುವುದು ತಿಳಿಯದ ವಿಷಯವೇನಲ್ಲ. ಈಗ ಉ. ಕೊರಿಯಾ ಬಳಿ ಇನ್ನೊಂದು ತಿಂಗಳಿಗಾಗುವಷ್ಟೇ ಟಿಬಿ ಔಷಧಗಳು ಉಳಿದಿವೆ ಎನ್ನುತ್ತಿವೆ ವರದಿಗಳು. ಚಿಕಿತ್ಸೆ ಸಿಗದ ಒಬ್ಬ ಟಿಬಿ ರೋಗಿ 10-15 ಜನರಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮೊದಲಿಂದಲೂ ಅತೀವ ಆಹಾರದ ಕೊರತೆ, ಸ್ವಾಸ್ಥ್ಯ ಸಂಪನ್ಮೂಲಗಳ ಅಭಾವದಿಂದ ತತ್ತರಿಸಿರುವ ಆ ರಾಷ್ಟ್ರದಲ್ಲಿ ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

Advertisement

ಕೊರೊನಾದಿಂದಾಗಿ ಉ. ಕೊರಿಯಾ ತನ್ನ ಗಡಿಗಳನ್ನು, ಸರಕು ಸಾಗಣೆಗಳ ದ್ವಾರವನ್ನು ಮುಚ್ಚಿಬಿಟ್ಟಿತು. ಇದರಿಂದಾಗಿ ಔಷಧ, ಆಹಾರ ಪದಾರ್ಥಗಳ ಪೂರೈಕೆ ನಿಂತುಹೋಗಿವೆ. ಟಿಬಿ ಔಷಧಗಳ ಕೊರತೆಯೂ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next