Advertisement
653 ಶಾಲೆಗಳಿಗೆ 50 ವರ್ಷಗಳು: ಸಾರ್ವಜನಿಕ ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಮೊದಲಿಗೆ 1869ರಲ್ಲಿ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಯಿತು. ಇದಾದ ನಂತರ 1872ರಲ್ಲಿ ಬಂಗಾರಪೇಟೆ ತಾಲೂಕಿನ ಐತಾಂಡ್ಲಹಳ್ಳಿ, ನಂತರ ಜಿಲ್ಲಾ ಕೇಂದ್ರ ಕೋಲಾರದಲ್ಲಿ 1893ರಲ್ಲಿ ಓಲ್ಡ್ ಮಿಡ್ಲ್ ಸ್ಕೂಲ್, ಜೂನಿಯರ್ ಕಾಲೇಜುಗಳು ಆರಂಭವಾಗಿ 127 ವರ್ಷ ಪೂರ್ಣಗೊಳಿಸಿವೆ. ಜಿಲ್ಲೆಯಲ್ಲಿ ಪ್ರಸ್ತುತ 1924 ಸರ್ಕಾರಿ ಹಾಗೂ 101 ಅನುದಾನಿತ ಶಾಲೆಗಳಿದ್ದು, ಒಟ್ಟು 2025 ಶಾಲೆಗಳ ಪೈಕಿ ಬಹುತೇಕ ಸರ್ಕಾರಿ ಶಾಲೆಗಳು 25 ವರ್ಷಗಳ ಹಿಂದೆಯೇ ಆರಂಭವಾಗಿವೆ. 50 ವರ್ಷಗಳ ಹಿಂದಿ ನಿಂದ 151 ವರ್ಷಗಳವರೆಗೂ 653 ಸರ್ಕಾರಿ ಶಾಲೆಗಳಿವೆ.
Related Articles
Advertisement
ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಟ್ಟು 1.08 ಲಕ್ಷ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಸಂಖ್ಯೆ 2025 ಇದ್ದರೂ ಮಕ್ಕಳ ಸಂಖ್ಯೆ 1.08 ಲಕ್ಷ ಇದ್ದರೆ, ಖಾಸಗಿ ಶಾಲೆಗಳು ಐದು ನೂರು ಆಸುಪಾಸಿನಲ್ಲಿವೆ. ಮಕ್ಕಳ ಸಂಖ್ಯೆ 1 ಲಕ್ಷಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ಪೋಷಕರು ಹಾಗೂ ಮಕ್ಕಳು ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳನ್ನು ಎಷ್ಟರ ಮಟ್ಟಿಗೆ ಅವಲಂಬಿ ಸಿದ್ದಾರೆನ್ನುವುದಕ್ಕೆ ಸಾಕ್ಷಿಯಾಗಿದೆ.
ಶಿಥಲಗೊಂಡ ಕೊಠಡಿ : ಕೋಲಾರ ಜಿಲ್ಲೆಯಲ್ಲಿ 230 ಸಂಖ್ಯೆಯ ಕೊಠಡಿಗಳು ಶಿಥಿಲಗೊಂಡಿವೆ ಎಂದು ವರದಿ ತಯಾರಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ 222 ಹಾಗೂ ಪ್ರೌಢಶಾಲಾ ಹಂತದಲ್ಲಿ 8 ಶಾಲಾ ಕೊಠಡಿಗಳು ಶಿಥಿಲಗೊಂಡಿರುವ ಶಾಲೆಗಳಾಗಿವೆ. ಸುಮಾರು 294ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶುದ್ಧ ಕುಡಿಯುವನೀರಿನ ಫಿಲ್ಟರ್‌ಗಳನ್ನು ಅಳವಡಿಸಲು ಪ್ರಸ್ತಾಪನೆ ಕಳುಹಿಸಲಾಗಿದೆ.
ಶಿಕ್ಷಕರ ಕೊರತೆ : ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆ ಗಳಲ್ಲಿ ಒಟ್ಟು 6917 ಮಂದಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 6205 ಮತ್ತು ಅನುದಾನಿತ ಶಾಲೆಗಳಲ್ಲಿ 712 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇನ್ನೂರಕ್ಕೂ ಹೆಚ್ಚು ಮಂದಿ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳ ಶಿಕ್ಷಕರ ಕೊರತೆ ಎದುರಾಗಿದೆ. ಇದನ್ನು ಸ್ಥಳೀಯವಾಗಿಯೇ ತುಂಬಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯಕ್ರಮ ತೆಗೆದುಕೊಂಡಿದೆ.
ಪ್ರತಿ ವರ್ಷವೂ ಮಕ್ಕಳ ಸಂಖ್ಯೆ ಗಣನೀಯ ಕುಸಿತ : ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ನೂರರಿಂದ ಸಾವಿರ ಸಂಖ್ಯೆಯಲ್ಲಿ ಕುಂಠಿತವಾಗುತ್ತಿದೆ. ಐದಾರು ವರ್ಷಗಳ ಹಿಂದಷ್ಟೇ 1.50 ಲಕ್ಷ ಮಂದಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಸದ್ಯಕ್ಕೆ ಈ ಸಂಖ್ಯೆ 1.08ಕ್ಕೆ ಕುಸಿದಿರುವುದೇ ಸಾಕ್ಷಿಯಾಗಿದೆ. ಪೋಷಕರು ಹಾಗೂ ಮಕ್ಕಳಲ್ಲಿ ನಂಬಿಕೆ ಹುಟ್ಟಿಸಿ ಮಕ್ಕಳ ಸಂಖ್ಯೆಯ ಹೆಚ್ಚಿಸದ ಹೊರತು, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೋಟ್ಯಂತರ ರೂಪಾಯಿ ವ್ಯಯಿಸುವುದು ವ್ಯರ್ಥವೆನಿಸುತ್ತದೆ.
ಮೈದಾನ, ಶೌಚಾಲಯ ಕೊರತೆ : ಕೋಲಾರ ಜಿಲ್ಲೆಯ ಒಟ್ಟು ಶಾಲೆಗಳ ಪೈಕಿ 272 ಪ್ರಾಥಮಿಕ ಹಾಗೂ 40 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 312 ಶಾಲೆಗಳಲ್ಲಿ ಶೌಚಾಲಯ ಗಳಿಲ್ಲ. 576 ಪ್ರಾಥಮಿಕ ಹಾಗೂ 48 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 624 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. 251 ಪ್ರಾಥಮಿಕ ಹಾಗೂ 38 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 289 ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲವಾಗಿದೆ.
ಮೈದಾನ, ಶೌಚಾಲಯ ಕೊರತೆ : ಕೋಲಾರ ಜಿಲ್ಲೆಯ ಒಟ್ಟು ಶಾಲೆಗಳ ಪೈಕಿ 272 ಪ್ರಾಥಮಿಕ ಹಾಗೂ 40 ಪ್ರೌಢಶಾಲೆಗಳು ಸೇರಿ ದಂತೆ ಒಟ್ಟು 312 ಶಾಲೆಗಳಲ್ಲಿ ಶೌಚಾಲಯ ಗಳಿಲ್ಲ. 576 ಪ್ರಾಥಮಿಕ ಹಾಗೂ 48 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 624 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. 251 ಪ್ರಾಥಮಿಕ ಹಾಗೂ 38 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 289 ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲವಾಗಿದೆ.
ಶತಮಾನ ತುಂಬಿದ ಐತಿಹಾಸಿಕ ಸರ್ಕಾರಿ ಶಾಲೆಗಳನ್ನು ಕಟ್ಟಡ ವಿನ್ಯಾಸ ಬದಲಾಯಿಸದೆ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಸಲುವಾಗಿ ಸರ್ಕಾರದ ಅನುದಾನದ ಜೊತೆಗೆ ರೋಟರಿ ಮತ್ತಿತರ ಸಂಘ ಸಂಸ್ಥೆಗಳ ನೆರವು ಕೋರಲಾಗಿದೆ. ಸ್ಥಳೀಯವಾಗಿ ಸಿಗುವ ನೆರವಿನಿಂದ ಐತಿಹಾಸಿಕ ಶಾಲೆಗಳನ್ನು ಉಳಿಸಿ ಬೆಳೆಸಲು ಯೋಜಿಸಲಾಗಿದೆ. – ಕೆ.ರತ್ನಯ್ಯ, ಡಿಡಿಪಿಐ, ಕೋಲಾರ
–ಕೆ.ಎಸ್.ಗಣೇಶ್