Advertisement
ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿಯಲ್ಲಿ ಒಟ್ಟು 181 ಮಂಜೂರಾತ ಹುದ್ದೆಗಳಿದ್ದು, ಇದರಲ್ಲಿ 106 ಹುದ್ದೆಗಳುಭರ್ತಿಯಾಗಿವೆ. ಉಳಿದ 75 ಹುದ್ದೆಗಳು ಖಾಲಿಇವೆ. ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ 6,ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ13, ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ 13,ಹಿರೇಕೆರೂರು ಅಗ್ನಿಶಾಮಕ ಠಾಣೆಯಲ್ಲಿ 12,ಶಿಗ್ಗಾವಿ ಅಗ್ನಿಶಾಮಕ ಠಾಣೆಯಲ್ಲಿ 11, ಬ್ಯಾಡಗಿಅಗ್ನಿಶಾಮಕ ಠಾಣೆಯಲ್ಲಿ 10, ಸವಣೂರು ಅಗ್ನಿಶಾಮಕ ಠಾಣೆಯಲ್ಲಿ 10 ಹುದ್ದೆಗಳು ಖಾಲಿ ಇವೆ.
Related Articles
Advertisement
ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹುದ್ದೆ ಒಂದು,ಅಗ್ನಿಶಾಮಕ ಠಾಣಾಧಿಕಾರಿಗಳು 4, ಸಹಾಯಕಠಾಣಾ ಧಿಕಾರಿಗಳು 5, ಚಾಲಕ ತಂತ್ರಜ್ಞರು 3, ಪ್ರಮುಖ ಅಗ್ನಿಶಾಮಕರು 25, ಅಗ್ನಿಶಾಮಕಚಾಲಕರು 22, ಅಗ್ನಿಶಾಮಕರು 46 ಹೀಗೆ ಒಟ್ಟು106 ಹುದ್ದೆಗಳು ಮಾತ್ರ ಭರ್ತಿಯಾಗಿವೆ.ಸಿಬ್ಬಂದಿ ಕೊರತೆಯ ನಡುವೆಯೂಅಗ್ನಿಶಾಮಕ ದಳ ಇರುವಷ್ಟು ಸಿಬ್ಬಂದಿಬಳಸಿಕೊಂಡು ತುರ್ತು ಸೇವೆಯಲ್ಲಿ ನಿರತವಾಗಿದೆ. ಸರ್ಕಾರ ಕೂಡಲೇ ಖಾಲಿ ಇರುವಹುದ್ದೆಗಳನ್ನು ಭರ್ತಿ ಮಾಡಿ ಸಿಬ್ಬಂದಿ ಮೇಲಿನಕೆಲಸದ ಒತ್ತಡ ಕಡಿಮೆ ಮಾಡುವ ಮೂಲಕ ಅಗ್ನಿಶಾಮಕ ದಳಕ್ಕೆ ಇನ್ನಷ್ಟು ಬಲ ತುಂಬಬೇಕಿದೆ.
ಅಗ್ನಿಶಾಮಕ ಠಾಣೆ-ಹುದ್ದೆಗಳ ವಿವರ :
ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 25 ಮಂಜೂರಾತಿ ಹುದ್ದೆಗಳಿದ್ದು 19 ಹಾಲಿ ಹುದ್ದೆಗಳು ಭರ್ತಿಯಾಗಿವೆ. 6 ಹುದ್ದೆಗಳು ಖಾಲಿ ಇವೆ. ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳು ಖಾಲಿ ಇವೆ. ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳುಖಾಲಿ ಇವೆ. ಹಿರೇಕೆರೂರು ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 15 ಹಾಲಿ ಹುದ್ದೆಗಳು ಭರ್ತಿಯಾಗಿವೆ. 12 ಹುದ್ದೆಗಳು ಖಾಲಿ ಇವೆ. ಶಿಗ್ಗಾವಿಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 16 ಹಾಲಿ ಹುದ್ದೆಗಳುಭರ್ತಿಯಾಗಿವೆ. 11 ಹುದ್ದೆಗಳು ಖಾಲಿ ಇವೆ. ಬ್ಯಾಡಗಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು24 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳುಖಾಲಿ ಇವೆ. ಸವಣೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 24 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು ಖಾಲಿ ಇವೆ.
ಜಿಲ್ಲೆಯ ಅಗ್ನಿಶಾಮಕ ಠಾಣೆಗಳ ಕಚೇರಿಯಲ್ಲಿ ಒಟ್ಟು 181 ಮಂಜೂರಾತಿ ಹುದ್ದೆಗಳಿದ್ದು,106 ಹುದ್ದೆಗಳು ಭರ್ತಿಯಾಗಿವೆ. 75 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆ ಮಧ್ಯೆಯೂ ಸಾರ್ವಜನಿಕರಿಗೆ ತುರ್ತು ನೆರವು ನೀಡಲಾಗುತ್ತಿದೆ. ಸರ್ಕಾರ ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ನೀರಿಕ್ಷೆ ಇದೆ. –ಸೋಮಶೇಖರ ಅಗಡಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಹಾವೇರಿ
-ವೀರೇಶ ಮಡ್ಲೂರ