Advertisement
ಓದುಗರು ಕಡಿಮೆ ಇದ್ದರೂ ನಿಯತವಾಗಿ ಗ್ರಂಥಾಲಯಕ್ಕೆ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದಾರೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ಪರಿಣಾಮ ಪುಸ್ತಗಳನ್ನು ಮನೆಗೆ ಕೊಂಡೊಯ್ದು ಓದುವ ಓದುಗನ ಸಂಖ್ಯೆ ಇಳಿಮುಖವಾಗಿದೆ. ಆದರೆ ಗ್ರಂಥಾಲಯದಲ್ಲಿ ನಿರಾಶಾದಾಯಕ ವಾತಾವರಣವೇನಿಲ್ಲ. ವಿದ್ಯುತ್, ಫ್ಯಾನ್‌ಗಳು ಕಾರ್ಯಚಾಲನೆಯಲ್ಲಿದೆ. ಕುಡಿಯುವ ನೀರಿನ ಆಧುನಿಕ ವ್ಯವಸ್ಥೆ ಇಲ್ಲ. ಎಲ್ಲ ಕಡೆಯಂತೆ ಇಲ್ಲಿನ ಗ್ರಂಥಾಲಯ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.
Related Articles
Advertisement
1993ರಲ್ಲಿ ಹೊಸ ಕಟ್ಟಡ ನಿರ್ಮಾಣ: ಜಿಲ್ಲಾ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡಕ್ಕೆ ಹೊಂದಿಕೊಂಡೇ ಅದರ ಮುಂಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣ 8.12.1993ರಲ್ಲಿ ಪ್ರಾರಂಭವಾಯಿತು. ಅದಕ್ಕೆ ಸರ್ಕಾರ 29 ಲಕ್ಷ ರೂ. ಅನುದಾನ ನೀಡಿತು. ಕಟ್ಟಡ 1997ರಲ್ಲಿ ಪೂರ್ಣಗೊಂಡಿತು.
ಜಿಲ್ಲಾ ಕೇಂದ್ರ ಗ್ರಂಥಾಲಯ 1997-98ರಲ್ಲಿ ಹೊಸ ಕಟ್ಟಡಕ್ಕೆ ವಿಸ್ತರಿಸಿಕೊಂಡಿತು. ಹಾಗೆ 1913ರಲ್ಲಿ ಕಟ್ಟಿದ ಕಟ್ಟಡವೂ ಪುಸ್ತಕಗಳ ಆಗರವೇ ಆಗಿ ಉಳಿದುಕೊಂಡಿದೆ. ಆಗ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿನ ಪುಸ್ತಕಗಳ ಸಂಖ್ಯೆ 2 ಲಕ್ಷ. 40 ಮಂಡಲ ಕೇಂದ್ರ ಗ್ರಂಥಾಲಯಗಳಿದ್ದವು. ಬಿಲ್ಟ್ ಬಳ್ಳಾಪುರ ಇಂಡಸ್ಟ್ರೀಸ್ ಕಂಪನಿ ಸಂಚಾರಿ ಗ್ರಂಥಾಲಯಕ್ಕೆ ಜ್ಞಾನ ವಾಹಿನಿ ಎಂಬ ವಾಹನವನ್ನು ದೇಣಿಗೆ ಸಹ ನೀಡಿತ್ತು. ಸಂಚಾರಿ ಗ್ರಂಥಾಲಯ ವಿವಿಧ ಹಳ್ಳಿಗಳಿಗೆ ತೆರಳಿ ಜನರಿಗೆ ಪುಸ್ತಕಗಳನ್ನು ಓದಲು ನೀಡುವ ಪದ್ಧತಿ ಪ್ರಾರಂಭವಾದುದು ಆಗ. ಅಂದರೆ 1993ರಲ್ಲಿ.
ಈಗಿನ ಸ್ಥಿತಿ: ಲಕ್ಷದ ಮೇಲೆ ಹತ್ತಿಪ್ಪತ್ತು ಸಾವಿರ ಪುಸ್ತಕಗಳಿವೆ. ದಿನಕ್ಕೆ 40 ರಿಂದ 50 ಜನ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಓದುವವರೂ ಇದ್ದಾರೆ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ಪುಸ್ತಕ ಪಡೆದು ಓದುವ ವಿಭಾಗವೂ ಸಹ ತುಂಬಿರುತ್ತದೆ. ದಿನ ಪತ್ರಿಕೆ, ವಾರ ಪತ್ರಿಕೆ, ನಿಯತಕಾಲಿಕಗಳ ವಿಭಾಗದಲ್ಲಿ 30ಕ್ಕೂ ಹೆಚ್ಚು ಪತ್ರಿಕೆಗಳು ಬರುತ್ತಿದ್ದು, ಇಲ್ಲಿ ಓದುಗರ ಸಂಖ್ಯೆ ದಿನವೂ 300 ದಾಟುತ್ತದೆ.
ಆದರೆ ಕಟ್ಟಡ ಈಚೆಗೆ ಸುಣ್ಣಬಣ್ಣ ಕಂಡಿಲ್ಲ ಹಾಗೂ ಶೇ. 50ಕ್ಕೂ ಮಿಕ್ಕಿ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಗ್ರಂಥಾಲಯ ವಿಭಾಗ ಆಧುನಿಕತೆಗೆ ತೆರೆದುಕೊಳ್ಳಲು ಕಾದಿದೆ. ಮುಖ್ಯಗ್ರಂಥಪಾಲಕರ ಹೇಳಿಕೆಯ ಪ್ರಕಾರ ತಿಂಗಳೊಪ್ಪತ್ತಿನಲ್ಲಿ ಡಿಜಿಟಲೀಕರಣಕ್ಕೆ ಒಳಪಡಲಿದೆ. 2 ಕಂಪ್ಯೂಟರ್, 4 ಟ್ಯಾಬ್‌ಗಳು ಬರಲಿವೆ ಎಂದು ಗ್ರಂಥಾಲಯ ಮುಖ್ಯಸ್ಥರು ಹೇಳುತ್ತಿದ್ದಾರೆ.
-ನಾಗರಾಜ ಹರಪನಹಳ್ಳಿ