Advertisement

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ

01:52 PM Sep 10, 2021 | Team Udayavani |

ದೇವನಹಳ್ಳಿ: ತಾಲೂಕಿನ ವಿವಿಧ ಗ್ರಾಮಗಳಿಂದ ದಿನನಿತ್ಯ ಕಂದಾಯ ಇಲಾಖೆಗೆ ಒಂದಲ್ಲ ಒಂದು ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಒಂದು ಕೆಲಸಕ್ಕೆ ಹತ್ತಾರು ಭಾರಿ ಸುತ್ತಾಡಿದರೂ ತಾಲೂಕು ಕಚೇರಿಯಲ್ಲಿ ಕೆಲಸಕಾರ್ಯಗಳು ಆಗ್ತಿಲ್ಲ. ಸರ್ಕಾರ ಇನ್ನಾದರೂ ಸಮರ್ಪಕ ಅಧಿಕಾರಿಗಳನ್ನು ನೇಮಕ ಮಾಡಿ ರೈತರು ಮತ್ತು ಜನರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತರೆ ಸಿಬ್ಬಂದಿಗೆ ಒತ್ತಡ: ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕ ಕೆಲಸಗಳಿಗೆ ಸಾಕಷ್ಟು ತಡೆ ಬಿದ್ದಿದ್ದು ಕೆಲಸಗಳು ತ್ವರಿತಗತಿಯಲ್ಲಿ ಸಾಗುತ್ತಿಲ್ಲ ಎಂದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಿಗಳು ಆಯಾ ಇಲಾಖೆ ಚೌಕಟ್ಟಿನಲ್ಲಿ ಒತ್ತಡದ ನಡುವೆ ಸಾರ್ವಜನಿಕರಿಗೆ ವಿಳಂಬವಾದರೂ ಸಹ ದಿನನಿತ್ಯದ ಕೆಲಸ ಮಾಡಿಕೊಡಲು ಶ್ರಮಿಸುತ್ತಿದ್ದಾರೆ.

ಕಂದಾಯ ಸಚಿವರೇ ಗಮನಹರಿಸಿ: ಏನೇ ಕೆಲಸ ಕಾರ್ಯಗಳು ಆಗಬೇಕಾದರೆ ತಾಲೂಕು ಕಚೇರಿಯಿಂದಲೇ ಆಗಬೇಕಾಗಿದೆ. ತಾಲೂಕು ಆಡಳಿತಕ್ಕೆ ಅಧಿಕಾರಿಗಳು ಬರುವವರ ಸಂಖ್ಯೆ ಹೆಚ್ಚು. ಇದೀಗ ಕೆಲಸದ ಒತ್ತಡವೂ ಬೇರೆ ಕಡೆಗಳಿಂದ ಬಂದು ಕೆಲಸ ಮಾಡಲು ನಿರುತ್ಸಾಹವೋ, ವೈಯಕ್ತಿಕ ಕಾರಣಗಳ್ಳೋ, ಮೇಲಧಿಕಾರಿಗಳ ಒತ್ತಡವೋ ಎಂಬುವುದು ವರ್ಗಾವಣೆಗೆ ಸರಿಯಾದ ಕಾರಣ ತಿಳಿದುಬರುತ್ತಿಲ್ಲ.

ತಾಲೂಕು ಕಚೇರಿ ಅಲೆದಾಟ ಜನ ಸಾಮಾನ್ಯರಿಗೆ ಇನ್ನು ತಪ್ಪಿಲ್ಲ. ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ತಾಲೂಕು ಕಚೇರಿಯಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಿ ಜನಸಾಮಾನ್ಯರಿಗೆ ಉತ್ತಮ ರೀತಿಯಲ್ಲಿ ಕೆಲಸ ಆಗುವ ರೀತಿ ಮಾಡಿಕೊಡಬೇಕು.
ಕಂದಾಯ ಸಚಿವರು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಇಲ್ಲಿನ ಸಮಸ್ಯೆಗಳು ತಿಳಿದಿರುತ್ತದೆ. ಇದಕ್ಕೆ ಏನಾದರೂ ಸಮಸ್ಯೆ ಬಗೆಹರಿಸಿದರೆ ಸಹಕಾರಿಯಾಗುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ, ಉಪಖಜಾನೆ, ಉಪನೋಂದಣಾಧಿಕಾರಿಗಳ ಕಚೇರಿ, ಭೂಮಾಪನ ಇಲಾಖೆ,ಕಾರ್ಮಿಕ ಇಲಾಖೆ, ಚುನಾವಣಾ ಶಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೀಗೆ ಹಲವು ಇಲಾಖೆಗಳಿದ್ದರೂ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳ
ಕೊರತೆ ಎದ್ದುಕಾಣುತ್ತಿದೆ.

Advertisement

ಇದನ್ನೂ ಓದಿ:ಉಡುಪಿ ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂ ರದ್ದು :ನೈಟ್ ಕರ್ಫ್ಯೂ ಮುಂದುವರಿಕೆ : ಕೂರ್ಮ ರಾವ್

ಗಲೀಜಾಗಿರುವ ತಾಲೂಕು ಕಚೇರಿ: ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಖ್ಯಾತಿ ಹೊಂದಿರುವ ದೇವನಹಳ್ಳಿ ತಾಲೂಕು ಆಗಿದೆ. ಉಪನೋಂದಣಾಧಿಕಾರಿಗಳ ಕಚೇರಿಗೆ ರಾಜ್ಯದ ವಿವಿಧ ಜಿಲ್ಲೆಯ ಜನ ಹಾಗೂ ವಿವಿಧ ಭಾಗಗಳಿಂದ ಹಾಗೂ ದೇಶವಿದೇಶಗಳಿಂದ ಭೂಮಿ
ಖರೀದಿ ಮಾಡಿ ದಾಖಲೆ ಮಾಡಿಸಲು ಸಾವಿರಾರು ಜನ ತಾಲೂಕು ಕಚೇರಿಗೆ ಬಂದುಹೋಗುತ್ತಾರೆ. ಆದರೆ ಕಚೇರಿಯಲ್ಲಿ ಸ್ವತ್ಛತೆ ಕಾಪಾಡಿ ಕೊಂಡಿಲ್ಲ. ತಾಲೂಕು ಕಚೇರಿಯ ಗೋಡೆಗಳ ಮೇಲೆ ಪಾನ್‌ಬೀಡ, ಎಲೆಅಡಿಕೆ ಹಾಕಿಕೊಂಡು ಉಗಿದಿರುವುದು, ತಾಲೂಕು ಕಚೇರಿಯ ಆವರಣ ದಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದೆ ಆವರಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬರುತ್ತಿದೆ. ಸಿಬ್ಬಂದಿ ಗಳ ಕೊರತೆಯಿಂದಾಗಿ ಸರಿಯಾದ ವ್ಯವಸ್ಥೆಯಿಲ್ಲ. ತಾಲೂಕು ಕಚೇರಿಯಲ್ಲಿ ದಿನಕಳೆದಂತೆ ತನ್ನ ಮೂಲಸ್ವರೂಪವನ್ನೆ ಕಳೆದುಕೊಳ್ಳುತ್ತಿರುವುದು ಶೋಚನೀಯ ಸಂಗತಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಉಪನೋಂದಣಾಧಿಕಾರಿಗಳ ಕಚೇರಿಯೂ ತಾಲೂಕು ಕಚೇರಿಯ ಮೊದಲ ಮಹಡಿಯಲ್ಲಿದ್ದು ಲಿಪ್ಟ್ ವ್ಯವಸ್ಥೆಯಿಲ್ಲ. ಪ್ರತಿನಿತ್ಯ ವೃದ್ಧರು, ಅಂಗವಿಕಲರು ನೋಂದಣಿಗೆ ಬರುತ್ತಾರೆ. ಮೆಟ್ಟಿಲು ಹತ್ತಿಕೊಂಡು ಹೋಗಲು ಕಷ್ಟವಾಗುತ್ತಿದೆ. ಈ ಕೂಡಲೇ ಲಿಪ್ಟ್ ವ್ಯವಸ್ಥೆ ಮಾಡಬೇಕು. ಹಾಗೂ ಇನ್ನೂ ಕೆಲವರು ವೃದ್ಧರನ್ನು ಎತ್ತಿಕೊಂಡು ಹೋಗಿ ನೋಂದಣಿ ಮಾಡಿಸುತ್ತಿರುವ ದೃಶ್ಯಗಳು ಸಹ ಕಂಡುಬರುತ್ತಿದೆ. ಈ ಕೂಡಲೇ ಲಿಪ್ಟ್ ವ್ಯವಸ್ಥೆ ಮಾಡಲು ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ಗಮನಹರಿಸಿ ಲಿಪ್ಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಂಗವಿಕಲರು ಹಾಗೂ ಹಿರಿಯನಾಗರಿಕರು ಒತ್ತಾಯಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿ
ಇರುವ ಖಾಲಿ ಹುದ್ದೆಗಳು
ಚುನಾವಣಾ ಶಿರಸ್ತೇದಾರ್‌ ಹುದ್ದೆ, ವಿಜಯಪುರ ಹೋಬಳಿ ರಾಜಸ್ವ ನಿರೀಕ್ಷಕರ ಹುದ್ದೆ, ಎಫ್ಡಿಎ ಒಂದು ಹುದ್ದೆ, ಎಸ್‌ಡಿಎ 7ಹುದ್ದೆ, ಗ್ರಾಮ
ಸಹಾಯಕರು 18ಹುದ್ದೆ, ಡಾಟಾ ಎಂಟ್ರಿ(ಟೈಪಿಸ್ಟ್‌) ಆಪರೇಟರ್‌ 3ಹುದ್ದೆ, ಗ್ರೂಪ್‌ ಡಿ 7ಹುದ್ದೆ, ದೆಫೇದಾರ್‌ 1, ದಫ‌¤ರ್‌ ಬಂದ್‌1, ಹುದ್ದೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿದೆ.

ಖಾಲಿಯಿರುವ
ಹುದ್ದೆಗಳು ಎಷ್ಟು?
ತಾಲೂಕು ಕಚೇರಿಯಲ್ಲಿ ಹಾಲಿ 128 ಸಹಾಯಕರು ಬೇಕಾಗಿದ್ದು ಹಾಲಿ 87 ಹುದ್ದೆ ತುಂಬಿದ್ದು ಅದರಲ್ಲಿ41ಹುದ್ದೆಖಾಲಿಯಿದೆ.2019ರ
ನಂತರ ಬೆಳವಣಿಗೆಯಲ್ಲಿ ಕೆಲ ಅಧಿಕಾರಿಗಳ ಪದೋನ್ನತಿಯಿಂದಾಗಿ ಮಿನಿವಿಧಾನಸೌಧ ಎಂದೇ ಕರೆಸಿಕೊಳ್ಳುವ ತಾಲೂಕು ಆಡಳಿತ ಸಿಬ್ಬಂದಿ ಕೊರತೆ ಎದುರಿಸುತ್ತಿರುವುದು ಸಾರ್ವಜನಿಕರ ಕೆಲಸಕಾರ್ಯಗಳಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುವಂತಾಗಿದೆ.

ತಾಲೂಕು ಕಚೇರಿ ಸಿಬ್ಬಂದಿಗಳ ಕೊರತೆ ಸಂಬಂಧಪಟ್ಟಂತೆ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸುತ್ತೇನೆ. ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಜನರು ಅಲೆದಾಡುತ್ತಿದ್ದಾರೆ.ಕೂಡಲೇ ಸರ್ಕಾರ ಅಧಿಕಾರಿಗಳನ್ನು ನೇಮಿಸಿ ಜನಸಾಮಾನ್ಯರ ಕೆಲಸಗಳು ಆಗುವಂತೆಆಗಬೇಕು.
● ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ

ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಬಡವರು, ರೈತರು,ಕೂಲಿ ಕಾರ್ಮಿಕರು ಹತ್ತಾರು ಬಾರಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳ ಒತ್ತಡದಿಂದ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ ಎಂದು ತಿಳಿದುಬರುತ್ತಿದೆ. ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾ ಡಿನಂತರ ಆ ಹುದ್ದೆಗೆ ನೇಮಿಸಿದರೆ ಮಾತ್ರ ಜನಸಾಮಾನ್ಯರ ಕೆಲಸ ಆಗುತ್ತದೆ.
-ಬಿಜ್ಜವಾರ ನಾಗರಾಜ್‌, ಪ್ರಜಾವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ
ರಾಜ್ಯಾಧ್ಯಕ್ಷ.

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಸಂಬಂಧಪಟ್ಟಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೂ ಸಹ ಶೇ.30ರಷ್ಟು ಸಿಬ್ಬಂದಿಕೊರತೆ ಇದೆ. ಇರುವ ಸಿಬ್ಬಂದಿಗಳ ಜೊತೆಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿಸುತ್ತಿದ್ದೇವೆ. ಬೆಂಗಳೂರಿನಿಂದ ಬರುವ ಅಧಿಕಾರಿಗಳು ಕಡಿಮೆಯಿದ್ದಾರೆ. ಅಧಿಕಾರಿಗಳ ಕೊರತೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.
-ಕೆ.ಶ್ರೀನಿವಾಸ್‌, ಜಿಲ್ಲಾಧಿಕಾರಿ.

ತಾಲೂಕು ಆಡಳಿತ ಕಚೇರಿಗೆ ಖಾಲಿಯಿರುವ ಹುದ್ದೆಗಳನ್ನು ತುಂಬಿದರೆ ಸಾಕಷ್ಟು ಅನುಕೂಲವಾಗುತ್ತದೆ. ಕೋವಿಡ್‌  ಸಂದರ್ಭದಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಸಹ ಇರುವ ಸಿಬ್ಬಂದಿಗಳೊಂದಿಗೆ ಸಾಕಷ್ಟುಕಾರ್ಯಕ್ರಮಗಳನ್ನು ಮಾಡಲಾಯಿತು. ಇದ್ದ ಸಿಬ್ಬಂದಿಗಳು ಒಬ್ಬರಾದ ಒಬ್ಬರಂತೆ ಇತರೆ ತಾಲೂಕುಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಸಾಕಷ್ಟುಕೆಲಸಗಳು ನಿದಾನಗತಿಯಲ್ಲಿ ಆಗುತ್ತಿದೆ. ಸಕಾಲಕ್ಕೆ ಸಿಬ್ಬಂದಿ ಇಲ್ಲದಿರುವುದುಕೆಲಸಕಾರ್ಯಗಳಿಗೆ ತೊಂದರೆಯಾಗುತ್ತಿದೆ.
-ಅನಿಲ್‌ಕುಮಾರ್‌ ಅರೋಲಿಕರ್‌, ತಹಶೀಲ್ದಾರ್‌.

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next