ಬಂಗಾರಪೇಟೆ: ಜಾನುವಾರುಗಳಿಗೆ ಬಾಧಿಸುತ್ತಿರುವ ಮಾರಕ ಕಾಯಿಲೆಗಳಿಂದ ತಾಲೂಕಿನ ಜನರ ಜೀವನಾಡಿ ಯಾಗಿರುವಹೈನೋದ್ಯಮಕ್ಕೆಹಿನ್ನಡೆಯಾಗುತ್ತಿರುವುದರಿಂದ ಗುಣಮಟ್ಟದ ಚಿಕಿತ್ಸೆ ನೀಡಿ ಹೈನೋದ್ಯಮ ಉಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಪಶು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಲಕ್ಷಾಂತರಕುಟುಂಬಗಳುಹೈನೋದ್ಯಮ ನಂಬಿಜೀನವ ನಡೆಸುತ್ತಿವೆ. ಆದರೆ ಇತ್ತೀಚಿಗೆ ಜಾನುವಾರುಗಳಿಗೆ ಬಾಧಿಸು ತ್ತಿರುವ ಚರ್ಮಗಂಟು ರೋಗ, ಕಾಲುಬಾಯಿ ಜ್ವರ ಮತ್ತು ಕಾಲುಗಳಲ್ಲಿ ಹುಳು ಬೀಳುತ್ತಿದ್ದರೂ ಪಶು ಇಲಾಖೆ ಮೌನಕ್ಕೆ ಶರಣಾಗಿದೆ. ಅದನ್ನೇ ನಂಬಿ ಜೀವನ ಮಾಡುತ್ತಿರುವ ಬಡವರಿಗೆ ನುಂಗಲಾರದ ತುತ್ತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಗಡಿಭಾಗಗಳಲ್ಲಿ ಸೂಕ್ತ ಪಶು ವೈದ್ಯರ ಸೇವೆಗಳಿಲ್ಲದೆ ಪುಂಗನೂರು ಪಲಮನೇರು, ವಿ.ಕೋಟ, ಕೃಷ್ಣಗಿರಿ ಪಶು ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಗಡಿಭಾಗಗಳಲ್ಲಿದೆ. ಸರ್ಕಾರದಿಂದ ನೂರಾರು ಕೋಟಿ ಅನುದಾನ ಮಾರಕ ಕಾಯಿಲೆಗಳಿಗೆ ಅವಶ್ಯ ಔಷಧಿಗಳಿಗೆ ಹಣ ಬಿಡು ಗಡೆಯಾಗುತ್ತಿದ್ದರೂ ಸಮರ್ಪಕ ಸೇವೆ ಇಲ್ಲದೆ ಖಾಸಗಿ ವೈದ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಶುಸಂಗೋಪನಾ ಇಲಾಖೆಗೆ ಅನುದಾನ ಬಂದರೂ ಜಾನುವಾರುಗಳ ಸಂಕಷ್ಟಕ್ಕೆ ಮಾತ್ರ ಯಾವುದೇ ಪ್ರಯೋ ಜನವಾಗುತ್ತಿಲ್ಲ. ಹಸುಗಳು ತೊಂದರೆಗೆ ಸಿಲುಕಿದಾಗ ರೈತರು ಎಂಪಿಸಿಎಸ್‌ಗಳ ಮುಖಾಂತರ ಕೋಪನ್ ಹಾಕಿದಾಗ ವೈದ್ಯರು ಬರುವುದು 24 ಗಂಟೆಯಾಗುತ್ತಿದೆ.ಹೀಗಾಗಿ ಅನೇಕ ಹಸುಗಳು ಚಿಕಿತ್ಸೆ ವಿಳಂಬದಿಂದಾಗಿ ಮೃತ ಪಟ್ಟಿವೆ ಎಂದು ದೂರಿದರು.
ಗುಣಮಟ್ಟದ ಚಿಕಿತ್ಸೆಯನ್ನು ಜಾನುವಾರುಗಳಿಗೆ ನೀಡಿ ರಕ್ಷಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜು ನಾಥ್, ಮುನ್ನಾ, ವೆಂಕಟೇಶ್, ಜಗದೀಶ್, ಅಭಿಲಾಷ್, ಮಂಜುನಾಥ್, ಚಲ ಮತ್ತಿತರರು ಇದ್ದರು.