Advertisement

ಕ್ರಾಫ‌ರ್ಡ್‌ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರತೆ

09:02 PM May 15, 2021 | Team Udayavani |

ಸಕಲೇಶಪುರ: ಕ್ರಾಫ‌ರ್ಡ್‌ ಜನರಲ್‌ ಆಸ್ಪತ್ರೆಯಲ್ಲಿ ಫಿಜಿಶಿಯನ್‌ ಇಲ್ಲದಿರುವ ಬಗ್ಗೆ ನನಗೆಮಾಹಿತಿ ಇರ ಲಿಲ್ಲ ಅಗತ್ಯ ವೈದ್ಯರ ಕೊರತೆಇದೆ ಎಂಬುದು ತಿಳಿ ದಿತ್ತು. ಇಂಥ ಭೀಕರಹಾಗೂ ಭಯಾನಕ ಕಷ್ಟ ಕರ ಪರಿಸ್ಥಿತಿಯಲ್ಲಿವೈದ್ಯರ ಸೇವೆ ನಿಜಕ್ಕೂ ಶ್ಲಾಘ ನೀಯ ಎಂದುಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

Advertisement

ಕೋವಿಡ್‌ ನಿರ್ವಹಣೆ ಹಿನ್ನೆಲೆ ತಾಪಂಸಭಾಂ ಗಣದಲ್ಲಿ ತಾಲೂಕು ಆಡಳಿತದೊಂದಿಗೆಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಥಹ ಕಷ್ಟಕರ ವೇಳೆಯಲ್ಲಿ ವೈದ್ಯರುಇಲ್ಲದಿರುವುದು ವಿಷಾ ದನೀಯ, ರಾಜ್ಯವೈದ್ಯಕೀಯ ಮಂತ್ರಿ ಡಾ. ಸುಧಾಕರ್‌ ರವರುಮೇ 15ರ ಒಳಗೆ ಅಗತ್ಯ ವೈದ್ಯ ರನ್ನು ನೇಮಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿಖಾಲಿ ಇರುವ ವೈದ್ಯರು ಭರ್ತಿಯಾಗುವ ನಿರೀಕ್ಷೆ ಯಿದೆ ಎಂದರು.

ಈ ಕೊರತೆಗಳನಡುವೆ ಹಾಲಿ ವೈದ್ಯರ ಶ್ರಮ ನಿಜಕ್ಕೂ ಶ್ಲಾಘನೀಯ ಭಾರೀ ಒತ್ತ ಡದ ಒಳಗೆ ಇಲ್ಲಿಯವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಕ್ರಾಫ‌ರ್ಡ್‌ ಆಸ್ಪತ್ರೆಯಲ್ಲಿ 11ಜನರ ವೈದ್ಯರಅಗತ್ಯ ವಿದ್ದು ಹಾಲಿ 6 ಜನ ವೈದ್ಯರು ಸೇವೆಸಲ್ಲಿಸುತ್ತಿದ್ದಾರೆ. ಹಾಗೂ ಡಿ ಗ್ರೂಪ್‌ ನೌಕರರು,ನರ್ಸ್‌ ಗಳ ಅಗತ್ಯವಿದೆ ಎಂದು ವೈದ್ಯಾಧಿಕಾರಿಡಾ.ಮಧುಸೂದನ್‌ ವಿವರಿಸಿದರು.ಸಕಲೇಶಪುರದ ಮೂಲದವರಾಗಿದ್ದು ಹಿಮ್ಸ… ಸೇರಿದಂತೆ ಇತರೆ ಪ್ರದೇಶಗಳಲ್ಲಿಕೊನೆಯ ವರ್ಷದ ಅಭ್ಯಾಸ ನಡೆಸುತ್ತಿರುವವೈದ್ಯರ ವಿವರ ಪಡೆದು ಅವರನ್ನು ತಾಲ್ಲೂಕಿನಲ್ಲಿ ಸೇವೆಗೆ ಉಪಯೋಗ ಪಡೆದು ಕೊಳ್ಳುವಂತೆ ಸಂಸದರು ಸಲಹೆ ನೀಡಿದರು.

ಕೋವಿಂಡ್‌ ಆಸ್ಪತ್ರೆಗೆ ಅಗತ್ಯವಿರುವ ವೆಂಟಿಲೇಟರ್‌ ಗಳನ್ನು ಶಾಸಕರ ನಿಧಿಯಿಂದ ಖರೀದಿಸು ವಂತೆ ಸೂಚಿಸಿದರು. ಆಸ್ಪತ್ರೆಗಳಿಗೆ ಆಕ್ಸಿಜನ್‌ಸಿಲಿಂ ಡರ್‌ ಗಳ ಅಗತ್ಯ ಇದೆ. ಖಾಸಗಿ ವ್ಯಕ್ತಿಗಳುಸಿಲಿಂ ಡರ್‌ಗಳನ್ನು ಅಕ್ರಮವಾಗಿ ಶೇಖರಿಸಿದ್ದರೆಈ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆಮನವಿ ಮಾಡಿ ದರು. ಉಪವಿಭಾಗಾಧಿಕಾರಿಗಿರೀಶ ನಂದನ್‌, ತಹಶೀಲ್ದಾರ್‌ ಜಯಕುಮಾರ್‌, ತಾಪಂ ಇಒ ಹರೀಶ್‌, ಡಿವೈಎಸ್‌ಪಿಗೋಪಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next