Advertisement
ಬೀಜಾಡಿ, ಗೋಪಾಡಿ, ಕಟ್ಕೇರೆ, ಕಾಳಾವರ, ಕುಂಭಾಶಿ, ಪರಿಸರದ ಗ್ರಾಮಸ್ಥರಿಗೆ ಕೋಟೇಶ್ವರ ಎಲ್ಲ ವ್ಯವಹಾರಗಳಿಗೆ ಕೇಂದ್ರ ಸ್ಥಾನವಾಗಿದೆ. ವಿವಿಧ ಕಾರಣಗಳಿಗೆ ಇಲ್ಲಿಗೆ ಆಗಮಿಸುವ ಇತರ ಜಿಲ್ಲೆಗಳ ಮಂದಿ ಇಲ್ಲಿ ಪರಿಪೂರ್ಣ ಬಸ್ ನಿಲ್ದಾಣದ ಕೊರತೆಯಿಂದ ಇತರೆಡೆ ಬಸ್‌ಗಾಗಿ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ.
ಇಲ್ಲಿ ಸಾರ್ವಜನಿಕ ಶೌಚಾಲಯವೂ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯ ಕೊರತೆ ಈಗ ಇರುವ ಬಸ್ ತಂಗುದಾಣದಲ್ಲಿ ಕಂಡು ಬಂದಿದ್ದು ನಿಲ್ದಾಣದ ಒಂದು ಪಾರ್ಶ್ವದಲ್ಲಿ ಬೇಸಗೆ ಹಾಗೂ ಮಳೆಗಾಲದಲ್ಲಿ ಬಸ್ ಕಾಯಲು ಸೂಕ್ತ ವ್ಯವಸ್ಥೆಯಿಲ್ಲದೇ ಬ್ಯಾಂಕ್ ಬಳಿ ಕಾದು ನಿಲ್ಲಬೇಕಾದ ಅನಿವಾರ್ಯತೆ ಇದೆ. ಸೂಕ್ತ ನಿಲ್ದಾಣ ಅಗತ್ಯ
ಸುಮಾರು ಇಪ್ಪತ್ತು ಸಾವಿರ ಜನಸಂಖ್ಯೆ ಹೊಂದಿರುವ ಕೋಟೇಶ್ವರದಲ್ಲಿ ಸಮರ್ಪಕ ಬಸ್ ನಿಲ್ದಾಣ ಇಲ್ಲದಿರುವುದು ಪ್ರಯಾಣಿಕರ ಪಾಲಿಗೆ ಕಿರಿಕಿರಿ ಉಂಟುಮಾಡಿದೆ. ಬಹೋಪಯೋಗಿ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
Related Articles
ಕೋಟೇಶ್ವರದಲ್ಲಿ ಪ್ರತ್ಯೇಕ ಬಸ್ ತಂಗುದಾಣ ನಿರ್ಮಿಸಲು ಸ್ಥಳಾವಕಾಶವಿಲ್ಲ . ಇರುವ ವ್ಯವಸ್ಥೆ ಬಳಸಿ ವಿಸ್ತರಿಸಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಗ್ರಾ. ಪಂ. ಬಳಿ ಬಸ್ ತಂಗುದಾಣ ನಿರ್ಮಿಸುವ ಬಗ್ಗೆ ತೀರ್ಮಾನವಾಗಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಅದು ಕಷ್ಟಸಾಧ್ಯವಾಗಿದ್ದು ಇರುವ ವ್ಯವಸ್ಥೆಯಲ್ಲೇ ಅಚ್ಚುಕಟ್ಟಾಗಿ ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ಸೌಕರ್ಯ ಒದಗಿಸುವ ಪ್ರಯತ್ನ ಮಾಡಲಾಗುವುದು.
-ತೇಜಪ್ಪ ಕುಲಾಲ್, ಪಿಡಿಒ, ಕೋಟೇಶ್ವರ ಗ್ರಾ.ಪಂ.
Advertisement