Advertisement

ಬಿಎಂಸಿಯ ಜಂಬೋ ಕೋವಿಡ್‌ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬಂದಿ ಕೊರತೆ

05:39 PM Jul 29, 2020 | Suhan S |

ಮುಂಬಯಿ, ಜು. 28: ಮುಂಬಯಿ ಮಹಾನಗರ ಪಾಲಿಕೆ ಸುಮಾರು 100 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಿರುವ ಜಂಬೋ ಕೋವಿಡ್‌ ಆಸ್ಪತ್ರೆಗಳಲ್ಲಿ ಶೇ. 70ರಷ್ಟು ಹಾಸಿಗೆಗಳನ್ನು ಹೊರಗುತ್ತಿಗೆ ನೀಡಲಾಗಿದ್ದು, ಹಾಸಿಗೆಗಳನ್ನು ನಿರ್ವಹಿಸಲು ವೈದ್ಯಕೀಯ ಸಿಬಂದಿ ಕೊರತೆ ಉಂಟಾಗಿದ್ದು ಬಿಎಂಸಿ ಹೆಣಗಾಡುತ್ತಿದೆ.

Advertisement

ಬಿರಂಸಿ ಸೌಲಭ್ಯಗಳಲ್ಲಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಗುತ್ತಿಗೆದಾರರಿಗೆ ಬಿಎಂಸಿ ದಿನಕ್ಕೆ 6,000 ರೂ. ಪಾವತಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಗುತ್ತಿಗೆದಾರರು ವೈದ್ಯಕೀಯ ಮತ್ತು ಇತರ ಸಿಬಂದಿಯನ್ನು ವ್ಯವಸ್ಥೆಗೊಳಿಸಬೇಕಾಗಿದೆ. ಸೌಲಭ್ಯಗಳಲ್ಲಿ ಶೇ. 80ರಷ್ಟು ಹಾಸಿಗೆಗಳು ಪ್ರಸ್ತುತ ಖಾಲಿ ಇದ್ದರೆ, ಜಂಬೋ ಕೇಂದ್ರಗಳಲ್ಲಿ ಕೋವಿಡ್‌ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಮೂಲಕ ನಾಗರಿಕ ಮತ್ತು ಸರಕಾರಿ ಆಸ್ಪತ್ರೆಗಳನ್ನು ಮುಕ್ತಗೊಳಿಸುವ ಪ್ರಕ್ರಿಯೆಯನ್ನು ಬಿಎಂಸಿ ಪ್ರಾರಂಭಿಸಿದೆ.

ಮುಲುಂಡ್‌, ದಹಿಸರ್‌, ಮಹಾಲಕ್ಷ್ಮೀ, ಬಿಕೆಸಿ ಮತ್ತು ಗೋರೆಗಾಂವ್‌ ಎಂಬ 5 ಜಂಬೋ ಕೋವಿಡ್‌-19 ಸೌಲಭ್ಯಗಳು ಒಟ್ಟು 7,285 ಹಾಸಿಗೆಗಳನ್ನು ಹೊಂದಿದ್ದು, ಅದರಲ್ಲಿ 5,245 ಅನ್ನು 3 ಖಾಸಗಿ ಆರೋಗ್ಯ ಸಂಸ್ಥೆಗಳಾದ ಆಶಾ ಕ್ಯಾನ್ಸರ್‌ ಕೇರ್‌ ಟ್ರಸ್ಟ್‌, ಲೈಫ್‌ ಲೈನ್‌ ಕೇರ್‌ ಮತ್ತು ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ನೀಡಲಾಗಿದೆ. ಈ ಮಧ್ಯೆ ಮೂವರು ಗುತ್ತಿಗೆದಾರರು ಮುಂಬಯಿ ಮತ್ತು ಇತರ ಸ್ಥಳಗಳಿಂದ ವೈದ್ಯರನ್ನು ತಮ್ಮ ಹಾಸಿಗೆಗಳ ಸೌಲಭ್ಯವನ್ನು ನಿರ್ವಹಿಸಲು ಸಜ್ಜುಗೊಳಿಸಲು ಪ್ರಾರಂಭಿಸಿದ್ದಾರೆ ಎಂದು ಬಿಎಂಸಿ ಅಧಿಕಾರಿ ಅಜಿತ್‌ ಕುಮಾರ್‌ ಅವರು ಹೇಳಿದ್ದಾರೆ.

ಸೌಲಭ್ಯಗಳಲ್ಲಿ ಅನೇಕ ಹಾಸಿಗೆಗಳು ಖಾಲಿಯಾಗಿಲ್ಲದ ಕಾರಣ ಪ್ರತಿ ಸಂಪರ್ಕಕ್ಕೆ ನಿಗದಿಪಡಿಸಿದ ಒಟ್ಟು ಸಾಮರ್ಥ್ಯದ ಶೇ. 25ಕ್ಕೆ ಮಾತ್ರ ಕೆಲಸದ ಆದೇಶಗಳನ್ನು ನೀಡಲಾಗಿದೆ. ಇದನ್ನು ಹಂತವಾರು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next