Advertisement

ನಿರ್ವಹಣೆಯಿಲ್ಲದ ಜಿಲ್ಲಾ ಬಾಲಭವನ!

11:21 PM Jan 25, 2021 | Team Udayavani |

ಉಡುಪಿ: ಬನ್ನಂಜೆ- ಬ್ರಹ್ಮಗಿರಿ ರಸ್ತೆಯಲ್ಲಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಲಾದ ಜಿಲ್ಲಾ ಬಾಲ ಭವನ ರಂಗಮಂದಿರ ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಮಕ್ಕಳ ಆಟದ ಪಾರ್ಕ್‌ ಸ್ಥಿತಿಯೂ ಇದೇ ರೀತಿಯಾಗಿದೆ. ಸೂಕ್ತ ನಿರ್ವಹಣೆ ಮಾಡಿದರೆ ಸುಸಜ್ಜಿತವಾಗಿ ಕಂಗೊಳಿಸಿ ಹಲವಾರು ಮಂದಿ ಮಕ್ಕಳಿಗೆ ಉಪಯೋಗವಾಗ

Advertisement

ಬಹುದಾದ ಈ ಪ್ರದೇಶಕ್ಕೆ ಕಾಲಿಡಲೂ ಸಂಕೋಚ ಪಡುವಂತಹ ಸ್ಥಿತಿಯಿದೆ.ವಿಶೇಷ ಅಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬಾಲ ಭವನ ಇದೇ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದೆ. ಹಲವು ವರ್ಷಗಳಿಂದ ಪಾಳುಬಿದ್ದಿದ್ದ ಈ ಜಾಗದಲ್ಲಿ ಮೂರು ವರ್ಷಗಳ

ಹಿಂದೆ ಸುಸಜ್ಜಿತ ರಂಗ ಮಂದಿರ ನಿರ್ಮಿಸಿ, ಮಕ್ಕಳ ಪರಿಕರಗಳನ್ನು ಅಳವಡಿಸಿ ಸುಂದರವಾಗಿರಿಸಲಾಗಿತ್ತು. ಆದರೆ ಸರಕಾರದ ಬೇಜವಾಬ್ದಾರಿತನದಿಂದ ಒಂದೊಳ್ಳೆಯ ಪ್ರದೇಶ ಬಳಕೆ ಮತ್ತು ನಿರ್ವಹಣೆ ಇಲ್ಲದೆ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು.

ಉಪಯೋಗ ಶೂನ್ಯ ರಂಗಮಂದಿರ! :

ಮೂರು ವರ್ಷದ ಹಿಂದೆ ಜಿಲ್ಲಾ ಬಾಲ ಭವನದ ರಂಗಮಂದಿರವನ್ನು 14 ಲ.ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಆದರೆ ರಂಗಮಂದಿರ ಉದ್ಘಾಟನೆಯಾಗಿ ಇದುವರೆಗೆ ಒಂದೇ ಒಂದು ಕಾರ್ಯಕ್ರಮ ನಡೆದಿಲ್ಲ. ಕಟ್ಟಡ ನಿರ್ಮಾಣದ ಸಾಮಗ್ರಿಗಳು, ಕಸ, ಕಡ್ಡಿಗಳಿಂದ ನೂತನ ರಂಗ ಮಂದಿರ ಅವ್ಯವಸ್ಥೆ ಆಗರವಾಗಿದೆ ಎಂದು ನಾಗರಿಕರು ಬೇಸರ

Advertisement

ವ್ಯಕ್ತಪಡಿಸಿದ್ದಾರೆ. ಬಯಲು ಮಂದಿರದಲ್ಲಿ ಅಳವಡಿಸಲಾದ ಸಿಟ್‌ಬೆಂಚ್‌ಗಳು ಸುತ್ತಮುತ್ತ ಕಸಕಡ್ಡಿಗಳಿಂದ ಆವೃತವಾಗಿದ್ದು, ಸ್ವತ್ಛತೆ ಮಾಯವಾಗಿದೆ.

ತುಕ್ಕು ಹಿಡಿದಿವೆ ಪರಿಕರಗಳು :  

ಮಕ್ಕಳಿಗೆ ಮನೋರಂಜನೆ ಮತ್ತು ಕ್ರೀಡಾ ಆಸಕ್ತಿ ಬೆಳೆಸಲೆಂದು ನಿರ್ಮಾಣವಾದ ನಾನಾ ಬಗೆಯ ಆಟದ ಪರಿಕರಗಳು ಇಲ್ಲಿದೆ. ನಿರ್ವಹಣೆ ಇಲ್ಲದೆ ಎಲ್ಲವು ತುಕ್ಕು ಹಿಡಿದು ಮಣ್ಣು ಹಿಡಿದಿದ್ದು, ಮಕ್ಕಳಿಗೆ ಅಪಾಯ ಆಹ್ವಾನಿಸುತ್ತಿದೆ. ಮಕ್ಕಳ ಆಟದ ಪರಿಕರಗಳು ತುಕ್ಕು ಹಿಡಿದು ತುಂಡಾಗಿ ಬೀಳುತ್ತಿವೆ. ಕೆಲವು ಪರಿಕರಗಳು ಶಿಥಿಲಾವಸ್ಥೆಗೆ ತಲುಪಿದೆ. ಜೋಕಾಲಿ, ಜಾರು ಬಂಡಿ ಮೊದಲಾದ ಪರಿಕರಗಳದ್ದೂ ಇದೇ ಸ್ಥಿತಿಯಾಗಿದೆ.

ವಿಷಜಂತುಗಳ ಅಪಾಯ: ಮಕ್ಕಳ ಆಟದ ಪರಿಕರಗಳಿರುವ ಜಾಗದಲ್ಲಿ ಗಿಡಗಳು ಬೆಳೆದು ದೊಡ್ಡ ಪೊದೆಗಳು ಸೃಷ್ಟಿಯಾಗಿದೆ. ಇಲ್ಲಿ ವಿಷ ಜಂತುಗಳು ಇರುವ ಸಾಧ್ಯತೆಗಳಿದ್ದು, ಮಕ್ಕಳಿಗೆ ಅಪಾಯವೂ ಎದುರಾಗಬಹುದು. ಕೆಲವು ಸ್ಥಳೀಯ ಮಕ್ಕಳು ಸಾಯಂಕಾಲ ಮತ್ತು ರಜೆ ದಿನಗಳಲ್ಲಿ ಇಲ್ಲಿಗೆ ಆಟವಾಡಲು ಬರುತ್ತಾರೆ. ಮಕ್ಕಳ ಹಿತದೃಷ್ಟಿಯಿಂದ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ನಿರ್ವಹಣೆಗೆ ಕ್ರಮಕೈಗೊಂಡರೆ ಉತ್ತಮ.

ಶೀಘ್ರದಲ್ಲಿ ಬಾಲಭವನ ಸಮಿತಿ ಸಭೆ ಕರೆದು ಜಿಲ್ಲಾ ಬಾಲಭವನ ರಂಗಮಂದಿರ ಮತ್ತು ಪಾರ್ಕ್‌ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಸ್ವತ್ಛತೆ ಮತ್ತು ನಿರ್ವಹಣೆಯನ್ನು ಸದ್ಯದಲ್ಲೇ ನಡೆಸಲಾಗುವುದು. – ಶೇಷಪ್ಪ  ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

 

Advertisement

Udayavani is now on Telegram. Click here to join our channel and stay updated with the latest news.

Next