Advertisement

ನಿರ್ವಹಣೆ ಕೊರತೆ: ತಹಶೀಲ್ದಾರ್‌ಕಚೇರಿ ಶೌಚಗೃಹ ಅಸ್ತವ್ಯಸ್ತ

12:58 PM Aug 06, 2018 | |

ಯಾದಗಿರಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಸ್ವತ್ಛ ಭಾರತ ಮಿಷನ್‌ ಯೋಜನೆಯಡಿ
ಪ್ರತಿಯೊಂದು ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಅರಿವು ಮೂಡಿಸುವ ಅಧಿಕಾರಿಗಳು ತಾಪಂ ಕಾರ್ಯಾಲಯದಲ್ಲಿ ಶೌಚಾಲಯ ನಿರ್ಮಿಸದಿರುವುದು ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸುವಂತಾಗಿದೆ.

Advertisement

ಕೇಂದ್ರ ಸರ್ಕಾರ ಅಕ್ಟೋಬರ್‌ 2, ಗಾಂಧಿ ಜಯಂತಿಯಂದು ಬಯಲು ಶೌಚಮುಕ್ತ ಭಾರತ ನಿರ್ಮಾಣದ ಸಂಕಲ್ಪ ತೊಟ್ಟಿರುವುದು ಎಲ್ಲೆಡೆ ಯೋಜನೆಯನ್ನು ಚುರುಕುಗತಿಯಲ್ಲಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ
ಪಡುತ್ತಿದ್ದಾರೆ. ಮೇಲಾಗಿ ಯಾದಗಿರಿ ತಾಲೂಕನ್ನು ಆ.15ರೊಳಗೆ ಬಯಲು ಶೌಚಮುಕ್ತ ತಾಲೂಕು ಮಾಡಲು
ಅಧಿಕಾರಿಗಳು ಗುರಿ ಹೊಂದಿರುವುದು ಸರಿ, ಆದರೆ, ಯೋಜನೆ ಅನುಷ್ಠಾನಗೊಳಿಸುವ ತಾಪಂ ಕಾರ್ಯಾಲಯದ
ಸಿಬ್ಬಂದಿಗಳಿಗಾಗಿಯೇ ಇನ್ನೂ ಶೌಚಾಲಯ ನಿರ್ಮಿಸದಿರುವುದು ತಾಪಂ ಅಧಿಕಾರಿಗಳಲ್ಲಿ ಮೂಜುಗರ ಉಂಟು ಮಾಡಿದೆ. 

ಇನ್ನೊಂದೆಡೆ ನಗರದ ತಹಶೀಲ್ದಾರ್‌ ಕಚೇರಿಗೆ ನಿತ್ಯ ನೂರಾರು ಜನರು ತಮ್ಮ ಕೆಲಸಗಳಿಗಾಗಿ ಆಗಮಿಸುವುದು
ಸಾಮಾನ್ಯ. ಇಲ್ಲಿನ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುವ ವೇಳೆ ವ್ಯವಸ್ಥಿತ ಶೌಚಗೃಹವನ್ನು ನಿರ್ಮಿಸಲಾಗಿತ್ತು. ವಿಪರ್ಯಾಸವೆಂದರೆ, ಜಿಲ್ಲಾಧಿಕಾರಿಗಳ ಕಚೇರಿ ಇರುವಷ್ಟು ದಿನ ಸರಿಯಾಗಿ ನಿರ್ವಹಣೆಗೊಳ್ಳುತ್ತಿದ್ದ ಶೌಚಾಲಯ ಜಿಲ್ಲಾಧಿಕಾರಿ ಕಚೇರಿ ಮಿನಿವಿಧಾನಸೌಧಕ್ಕೆ ಶಿಫ್ಟ್‌ ಆಗುತ್ತಿದ್ದಂತೆ ಸಂಪೂರ್ಣ ನಿರುಪಯುಕ್ತವಾಗಿದೆ. 

ಸುಮಾರು ತಿಂಗಳಿಂದ ಸೂಕ್ತ ನಿರ್ವಹಣೆಯಿಲ್ಲದೇ ಗಬ್ಬುನಾರುತ್ತಿದ್ದು, ಮೂತ್ರಕ್ಕೆ ತೆರಳಬೇಕಾದರೂ ಮೂಗು
ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ನೀರಿನ ಮೂಲವಿದ್ದರೂ ಸರಿಯಾಗಿ ನಿರ್ವಹಣೆ
ಗೊಳ್ಳದಿರುವುದರಿಂದ ಶೌಚಾಲಯ ಉಪಯೋಗಕ್ಕೆ ಬಾರದಂತಾಗಿದೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು
ಮಾಡಿ ಸಾರ್ವಜನಿಕರು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆದರೆ ತಾಲೂಕು ಆಡಳಿತ ಕಚೇರಿ ಆವರಣದಲ್ಲಿಯೇ ಶೌಚಾಲಯ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದರೂ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ಇರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿ¨

ತಾಪಂ ಕಾರ್ಯಾಲಯ ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಉದ್ದೇಶಿಸಿದ್ದರಿಂದ ಶೌಚಾಲಯ ನಿರ್ಮಾಣ ವಿಳಂಬವಾಗಿದೆ. ನಾಳೆಯಿಂದಲೇ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು.
ಬಿ.ಎಸ್‌. ರಾಠೊಡ, ತಾಪಂ ಇಒ

Advertisement

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next