Advertisement
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಪಿಯು ಕಾಲೇಜು ತನ್ನದೇ ಅದ ಇತಿಹಾಸವನ್ನು ಹೊಂದಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಕಾಲೇಜು ಅಭಿವೃದ್ಧಿ ಯಿಂದ ವಂಚಿತವಾಗುತ್ತಿದೆ. ಕಾಲೇಜು ಆಡಳಿತ ವರ್ಗದ ಬೇಜವಾಬ್ದಾರಿತನದಿಂದಾಗಿ ನೂರಾರು ಹೆಣ್ಣುಮಕ್ಕಳು ಶೌಚಾಲಯವಿದ್ದರೂ ಶೌಚಾಲಯಗಳಿಗೆ ಬೀಗ ಹಾಕಿರುವ ಕಾರಣ ಪರದಾಡುವ ಪರಿಸ್ಥಿತಿ ಉಂಟಾಗಿದೆ.
Related Articles
Advertisement
ನೀರು ಕುಡಿಯಲೂ ಹಿಂದೇಟು: ಇನ್ನೊಂದು ಶೌಚಾಲಯ ನಿರ್ಮಾಣವಾಗಿದೆ. ಆದರೆ ಇದರ ಕೀಯನ್ನು ಕೆಲವು ಮಹಿಳಾ ಉಪನ್ಯಾಸಕಿಯರೇ ಬೀಗ ಹಾಕಿ ಅದರ ಕೀ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಕಾಲೇಜಿನಲ್ಲಿ ಇರುವ ಎರಡು ಶೌಚಾಲಯದಲ್ಲಿ ಒಂದನ್ನು ಪುರುಷ ಉಪನ್ಯಾಸಕರು ಹಾಗೂ ಇನ್ನೊಂದನ್ನು ಮಹಿಳಾ ಉಪನ್ಯಾಸಕಿಯರು ಬಳ ಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಶೌಚಕ್ಕೆ ಹೋಗ ಬೇಕೆಂಬ ಭಯದಿಂದ ನೀರು ಕುಡಿಯಲೂ ಸಹ ಹಿಂದೇಟು ಹಾಕುವಂತಾಗಿದೆ. ಈ ಬಗ್ಗೆ ಬಹಿರಂಗವಾಗಿ ಯಾರಿಗಾದರೂ ಹೇಳಿದರೆ ಅಂತಹ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತದೆ. ಇನ್ನು ಕಿಡಿಗೇಡಿ ವಿದ್ಯಾರ್ಥಿಗಳು ಶೌಚಾಲಯವನ್ನು ಗಲೀಜು ಮಾಡುವುದರಿಂದ ಉಪನ್ಯಾಸಕರೇ ಶೌಚಾಲಯದ ಕೀ ಇಟ್ಟುಕೊಳ್ಳಲು ಕಾರಣವಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
ಗುರುತಿನ ಚೀಟಿ ಕೊಟ್ಟಿಲ್ಲ: ಕಾಲೇಜು ಜೂನ್ ತಿಂಗಳಲ್ಲೇ ಶುರುವಾಗಿದೆ. ಎರಡು ತಿಂಗಳಾದರೂ ಪ್ರಥಮ ಪಿಯುಸಿಯ ಯಾವೊಬ್ಬ ವಿದ್ಯಾರ್ಥಿಗೂ ಇದುವರೆಗೂ ಗುರುತಿನ ಚೀಟಿ ಕೊಟ್ಟಿಲ್ಲ. ಪರೀಕ್ಷೆಗಳು ಶುರುವಾಗಿವೆ. ಐಡಿ ಕಾರ್ಡ್ ಇಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಬಸ್‌ಗಳಲ್ಲಿ, ಹಾಸ್ಟೆಲ್ಗಳಲ್ಲಿ ಕೇಳಿದರೆ ತೋರಿಸಲು ಗುರುತಿನ ಚೀಟಿ ಇಲ್ಲದೇ ವಿದ್ಯಾರ್ಥಿಗಳು ಪರಿಪರಿ ಯಾಗಿ ಓಲೈಸಬೇಕಾಗಿದೆ.
ಕುಡಿಯುವ ನೀರು ಇಲ್ಲ: ಈ ಕಾಲೇಜಿಗೆ ಹಲವು ದಶಕಗಳ ಇತಿಹಾಸವಿದ್ದರೂ ಕುಡಿವ ನೀರಿಲ್ಲ. ನೀರಿ ಗಾಗಿ ಪ್ರೌಢಶಾಲೆ ನಲ್ಲಿಗಳನ್ನು ಆಶ್ರಯಿಸ ಬೇಕಾಗಿದೆ. ಬೈಸಿಕೊಂಡು ನೀರು ಕುಡಿಯಬೇಕಿದ್ದು ತುರ್ತು ನೀರು ಬೇಕೆಂದರೂ ಗುಟುಕು ನೀರು ಸಿಗುವುದಿಲ್ಲ.
ಸ್ಯಾನಿಟರಿ ಪ್ಯಾಡ್ ವಿತರಿಸಿಲ್ಲ: ಕಾಲೇಜು ವಿದ್ಯಾರ್ಥಿ ನಿಯರಿಗೆಂದು ಸರ್ಕಾರವು ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುತ್ತಿದೆ. ಆದರೆ ಕಾಲೇಜಿನಲ್ಲಿ ಮಹಿಳಾ ಉಪ ನ್ಯಾಸಕಿಯರು ಇದ್ದರೂ ಸಹ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಿಲ್ಲ ಹಾಗೂ ಈ ಬಗ್ಗೆ ಜಾಗೃತಿಯನ್ನೂ ಮೂಡಿಸಿಲ್ಲ ಎಂಬ ಆರೋಪಗಳಿದೆ.
ಹೆಚ್ಚುವರಿ ಕೊಠಡಿಗಳು ಉಪಯೋಗಕ್ಕಿಲ್ಲ: ಕಾಲೇಜು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಹೆಚ್ಚು ವರಿಯಾಗಿ ಎರಡು ಕೊಠಡಿಗಳು ನಿರ್ಮಾಣವಾಗಿ ಸುಮಾರು ಒಂದು ವರ್ಷವಾಗುತ್ತ ಬಂದಿದ್ದರೂ ಇದನ್ನು ಉಪಯೋಗಿಸಲು ಮುಂದಾಗಿರುವುದಿಲ್ಲ.
ಯಾರು ಹೊಣೆ?: ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿ ಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಲ್ಲಿ ದಾಖಲಾಗಲು ಯಾರೂ ಬಯಸುತ್ತಿಲ್ಲ. ಫಲಿತಾಂಶವೂ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬರುತ್ತಿದೆ. ಈ ಕಾಲೇಜಿನ ಆವರಣದಲ್ಲೇ ಪ್ರೌಢಶಾಲೆಯೂ ಇದೆ. ಅಲ್ಲಿ ವ್ಯಾಸಂಗ ಮಾಡಿದವರೂ ಕೂಡ ಈ ಕಾಲೇಜಿಗೆ ದಾಖಲಾಗಲು ಮುಂದಾ ಗುತ್ತಿಲ್ಲ. ಎಲ್ಲಾ ವಿದ್ಯಾರ್ಥಿನಿಯರು ಪಕ್ಕದಲ್ಲೇ ಇರುವ ಬಾಲಕಿಯರ ಕಾಲೇಜಿಗೆ ದಾಖಲಾಗುತ್ತಿದ್ದಾರೆ.
ಕಾಲೇಜಿನಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇದನ್ನು ಬಹಿರಂಗಪಡಿಸಲು ವಿದ್ಯಾರ್ಥಿಗಳು ಅಂಜುತ್ತಿದ್ದಾರೆ. ಇಷ್ಟೆಲ್ಲಾ ದುರವಸ್ಥೆಯಿಂದ ಒದ್ದಾಡುತ್ತಿರುವ ಈ ಕಾಲೇಜಿಗೆ ಮುಕ್ತಿ ದೊರಕಿಸಬೇಕಿದೆ. ಸೌಕರ್ಯಗಳ ಕೊರತೆ ಎನ್ನುವುದಕ್ಕಿಂತ ಸೌಕರ್ಯಗಳ ಕೃತಕ ಅಭಾವ ಸೃಷ್ಟಿಸಿರುವ ಕಾಲೇಜಿನ ಪ್ರಾಂಶುಪಾಲರು ಇನ್ನಾದರೂ ಎಚ್ಚೆತ್ತು ಕಾಲೇಜಿನ ಅಭಿವೃದ್ಧಿ ಮಾಡಲು ಮುಂದಾಗಬೇಕಾಗಿದೆ.
● ಸುಧೀರ್ ಎಸ್.ಎಲ್