Advertisement

ಒಂದು ವರ್ಷದಲ್ಲಿ ತಂಗಿದವರು ಕೇವಲ 24 ಮಂದಿ!

09:55 AM Feb 12, 2020 | mahesh |

ಮಂಗಳೂರು: ಉದ್ಯೋಗ ಸಂದರ್ಶನ, ವೃತ್ತಿಪರ ಕೋರ್ಸ್‌ ಪ್ರವೇಶ ಪರೀಕ್ಷೆ ಇತ್ಯಾದಿಗಳಿಗಾಗಿ ರಾಜಧಾನಿ ಬೆಂಗಳೂರಿಗೆ ತೆರಳುವ ಮಹಿಳೆಯರಿಗಾಗಿ ರಾಜ್ಯ ಸರಕಾರ ಆರಂಭಿಸಿದ ಟ್ರಾನ್ಸಿಟ್‌ ಹಾಸ್ಟೆಲ್‌ ಮಾಹಿತಿ ಕೊರತೆಯಿಂದ ಮಹಿಳೆಯರಿಂದ ದೂರವೇ ಉಳಿದಿದೆ. ಒಂದು ವರ್ಷದಿಂದ 13 ಹಾಸ್ಟೆಲ್‌ಗ‌ಳ ಪೈಕಿ 4ರಲ್ಲಿ ಕೇವಲ 24 ಮಂದಿಯಷ್ಟೇ ತಂಗಿದ್ದಾರೆ. ಉಳಿದ 9ರಲ್ಲಿ ಈವರೆಗೆ ಯಾರೂ ಪ್ರವೇಶ ಪಡೆದಿಲ್ಲ.

Advertisement

ವಿವಿಧ ಜಿಲ್ಲೆಗಳ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ನಗರದ 13 ಕಡೆಗಳಲ್ಲಿ 2018-19ನೇ ಸಾಲಿನಲ್ಲಿ ಟ್ರಾನ್ಸಿಟ್‌ ಹಾಸ್ಟೆಲನ್ನು ಸ್ಥಾಪಿಸಲಾಗಿತ್ತು. ಆದರೆ ಪ್ರಚಾರದ ಕೊರತೆಯಿಂದಾಗಿ ಬಹುತೇಕರಿಗೆ ಇಂತಹ ಒಂದು ಸೌಲಭ್ಯ ಇದೆ ಎಂದೇ ಗೊತ್ತಿಲ್ಲ. ಆದ್ದರಿಂದ ಬೆಂಗಳೂರಿಗೆ ತೆರಳುವ ಮಹಿಳೆಯರು ಸಾವಿರಾರು ರೂ. ಪಾವತಿಸಿ ಪೇಯಿಂಗ್‌ ಗೆಸ್ಟ್‌ಗಳನ್ನೇ ಅವಲಂಬಿಸುತ್ತಿದ್ದಾರೆ.

ಸೌಲಭ್ಯಗಳೇನು?
ಉಚಿತ ಊಟೋಪಹಾರ, ಚಹಾ, ಕಾಫಿ, ಸ್ನಾನಕ್ಕೆ ಬಿಸಿನೀರು, ವೈಯಕ್ತಿಕ ದಾಖಲಾತಿ ಇರಿಸಿಕೊ ಳ್ಳಲು ಕಪಾಟು ಸೌಲಭ್ಯ ಮತ್ತು ಸುರಕ್ಷಿತ ವಾಸ್ತವ್ಯ ದೊಂದಿಗೆ ಗರಿಷ್ಠ ಮೂರು ದಿನಗಳವರೆಗೆ ತಂಗಲು ಅವಕಾಶವಿದೆ. ನಗರಕ್ಕೆ ಒಂಟಿಯಾಗಿ ತೆರಳುವ ಎಲ್ಲ ಮಹಿಳೆಯರಿಗೂ ಇಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ.

ಪ್ರವೇಶ ಹೇಗೆ?
ವಸತಿಗೃಹಕ್ಕೆ ತೆರಳಿ ನೋಂದಣಿ ಮಾಡಿಕೊಳ್ಳ ಬೇಕು. ಪರೀಕ್ಷೆಯ ಪ್ರವೇಶ ಪತ್ರದ ನಕಲು ಪ್ರತಿ, ವಿಳಾಸ ಒಳಗೊಂಡ ಗುರುತಿನ ಚೀಟಿ, ಪೋಷಕರ ಫೋನ್‌ ನಂಬರ್‌, ವಿಳಾಸ ನೀಡಬೇಕು. ನೋಂದಣಿ ಮಾಡಿದ ಬಳಿಕ ಕೊಠಡಿ ದೊರೆಯುತ್ತದೆ. ಒಟ್ಟು 10 ಬೆಡ್‌ ಸೌಲಭ್ಯ ಇದ್ದು, ಓರ್ವ ಮೇಲ್ವಿಚಾರಕ, ಓರ್ವ ಭದ್ರತಾ ಸಿಬಂದಿ ಪ್ರತಿ ಟ್ರಾನ್ಸಿಟ್‌ ಹಾಸ್ಟೆಲ್‌ಗ‌ಳಲ್ಲಿದ್ದಾರೆ. ಪ್ರತಿ ಹಾಸ್ಟೆಲ್‌ನಲ್ಲಿ ಗರಿಷ್ಠ 10 ಮಂದಿಗೆ ತಂಗಲು ಅವಕಾಶವಿದೆ.

ಟ್ರಾನ್ಸಿಟ್‌ ಹಾಸ್ಟೆಲ್‌ಗ‌ಳು ಎಲ್ಲೆಲ್ಲಿವೆ?
 ಕರ್ನಾಟಕ ಸ್ಟೇಟ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್ಫೆàರ್‌, ಲೋಕಸುಂದರಿ ರಾಮನ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ನಂ. 135, 3ನೇ ಕ್ರಾಸ್‌, ನಂದಿದುರ್ಗ ರಸ್ತೆ, ಜಯಮಹಲ್‌ ಬಡಾವಣೆ

Advertisement

 ಶ್ರೀ ಶಾರದಾ ಸವಿತ ಮಂಡಳಿ, ಶ್ರೀ ಶಾರದಾ ಕುಟೀರ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ನಂ. 46, ರಂಗರಾವ್‌ ರಸ್ತೆ, ಶಂಕರಪುರ

 ಯಂಗ್‌ ವುಮನ್‌ ಕ್ರಿಶ್ಚಿಯನ್‌ ಅಸೋಸಿಯೇಶನ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ನಂ.32, ಸಿಆರ್‌ಐ ಕಂಪೌಂಡ್‌, ಮಿಷನ್‌ ರೋಡ್‌

 ಯೂನಿವರ್ಸಿಟಿ ವುಮನ್‌ ಅಸೋಸಿಯೇಶನ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ,
ನಂ. 43, 4ನೇ ಮೈನ್‌, ಸಂಪಂಗಿರಾಮನಗರ

 ಮಹಾತ್ಮಾ ಗಾಂಧಿ ವಿದ್ಯಾಪೀಠ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಕುಮಾರಸ್ವಾಮಿ ಲೇಔಟ್‌
 ಸ್ತ್ರೀಶಕ್ತಿ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ನಂ. 141, 5ನೇ ಕ್ರಾಸ್‌, 1ನೇ ಬ್ಲಾಕ್‌ ಜಯನಗರ
 ಆಲ್‌ ಇಂಡಿಯಾ ವುಮನ್‌ ಕಾನ್ಫರೆನ್ಸ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ನಂ. 67, 7ನೇ “ಸಿ’ ಮೈನ್‌ರೋಡ್‌, ಕಾರ್ಪೊರೇಶನ್‌ ಲೇಔಟ್‌, ಜಯನಗರ 4ನೇ ಬ್ಲಾಕ್‌

 ಬಸವ ಸಮಿತಿ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಬಸವಾ‌ಶ್ರಮ, ಮೈಸೂರು ರಸ್ತೆ
 ವಿಶಾಲ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಕದೂರು ನಗರ, ಜರಗನಹಳ್ಳಿ, ಜಿಕೆಎಂ ಪದವಿ ಕಾಲೇಜು ಬಳಿ, ಕನಕಪುರ ರಸ್ತೆ

 ಕರ್ನಾಟಕ ರೂರಲ್‌ ಪೂವರ್‌ ಆ್ಯಂಡ್‌ ಹ್ಯಾಂಡಿಕ್ಯಾಪ್ಸ್‌ ಡೆವಲಪ್‌ಮೆಂಟ್‌ ಸೊಸೈಟಿ, ಉದ್ಯೋಗಸ್ಥ ಮಹಿಳೆಯರ ವಸತಿಗೃಹ, 4ನೇ ಕ್ರಾಸ್‌, ಪೀಣ್ಯ 1ನೇ ಘಟ್ಟ

 ನ್ಯಾಶನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯನ್‌ ಯೂನಿವರ್ಸಿಟಿ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ನಾಗರಬಾವಿ ಕ್ಯಾಂಪಸ್‌

 ಯಂಗ್‌ ವುಮನ್‌ ಕ್ರಿಶ್ಚಿಯನ್‌ ಅಸೋಸಿಯೇಶನ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಪ್ಲಾಟ್‌ ನಂ. 7, 20ನೇ ಮುಖ್ಯರಸ್ತೆ, 6ನೇ ಬ್ಲಾಕ್‌, ಕೋರಮಂಗಲ

 ರೀಜನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ,
ಜ್ಞಾನಭಾರತಿ ಕ್ಯಾಂಪಸ್‌

ವಿವಿಧ ಉದ್ದೇಶಗಳಿಂದ ರಾಜ್ಯದ ನಾನಾ ಕಡೆಗಳಿಂದ ಮಹಿಳೆಯರು ರಾಜಧಾನಿಗೆ ಬರುತ್ತಾರೆ. ಅಂಥವರು ಸಾವಿರಾರು ರೂ. ವ್ಯಯಿಸಿ ಖಾಸಗಿ ಪಿಜಿಗಳಲ್ಲಿ ತಂಗುವ ಬದಲು ಉಚಿತ ಊಟ, ವಸತಿ ನೀಡಿ ಟ್ರಾನ್ಸಿಟ್‌ ಹಾಸ್ಟೆಲ್‌ಗ‌ಳಲ್ಲಿ ತಂಗಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಮಹಿಳೆಯರು ಇದರ ಸದುಪಯೋಗಪಡೆದುಕೊಳ್ಳಬೇಕು.
– ಕೆ. ದಯಾನಂದ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next