Advertisement
ಕಾಳಗಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿಯರ ಸಮಸ್ಯೆ ತಿಳಿದುಕೊಳ್ಳಲು ಗುರುವಾರ ರಾತ್ರಿ ಆಸ್ಪತ್ರೆ ವಾಸ್ತವ್ಯ ನಡೆಸಿ, ಶುಕ್ರವಾರ ಬೆಳಗ್ಗೆ ಗ್ರಾಪಂ ಮಾಜಿ ಅಧ್ಯಕ್ಷ ಜಾವೀದ್ ಇನಾಮದಾರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ತಿಂಗಳು ಕುರಿಗಾರರ ದೊಡ್ಡಿಯಲ್ಲಿ ವಾಸ್ತವ್ಯ ನಡೆಸಿದ್ದಾಗ ಪಡೆದ ಅನುಭವದಿಂದ ಆಸ್ಪತ್ರೆ ವಾಸ್ತವ್ಯ ನಡೆಸಲಾಗಿದೆ. ಇದರಿಂದ ಅಲ್ಲಿನ ಕಷ್ಟಗಳು, ಸಮಸ್ಯೆಗಳು, ಕುಂದು ಕೊರತೆಗಳು ಪ್ರಾಯೋಗಿಕವಾಗಿ ಗೊತ್ತಾಗಿ ಮುಂದೇನು ಮಾಡಬೇಕು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಅವಕಾಶವಾಗುತ್ತದೆ. ಸಣ್ಣಪುಟ್ಟ ತೊಂದರೆ ಕಂಡು ಬಂದಲ್ಲಿ ಸ್ಥಳದಲ್ಲೇ ಬಗೆಹರಿಸಲು ಅವಕಾಶವಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಸಮಸ್ಯೆ ಪರಿಹಾರಕ್ಕೆ, ಅಭಿವೃದ್ಧಿಗೆ ಸ್ವಲ್ಪ ಹಿನ್ನೆಡೆ ಆಗಿದ್ದರೂ ಆದಷ್ಟು ಬೇಗ ಸರಿಪಡಿಸಲಾಗುತ್ತದೆ ಎಂದರು.
Related Articles
Advertisement
ಶೌಚಾಲಯ ಸ್ವಚ್ಛಗೊಳಿಸಿದ ಅಧ್ಯಕ್ಷೆ :
ಮುದ್ದೇಬಿಹಾಳ: ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಶೌಚಾಲಯಗಳನ್ನು ಶುಕ್ರವಾರ ಖುದ್ದು ತಾವೇ ಸ್ವತ್ಛಗೊಳಿಸಿ ಜನತೆಯಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಕಾಳಗಿ ಆಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ಅವರು ಬೆಳಗ್ಗೆ ಜಿಪಂ, ತಾಪಂ, ಕಾಳಗಿ ಗ್ರಾಪಂ ಸಂಯುಕ್ತವಾಗಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಸ್ವತ್ಛ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಕಸಬರಿಗೆ, ಬ್ರಶ್, ಶೌಚಾಲಯ ತೊಳೆಯುವಸಾಧನಗಳನ್ನು ಹಿಡಿದು ಶೌಚಾಲಯ ಸ್ವತ್ಛತೆಗೆ ಮುಂದಾದಾಗ ಅಲ್ಲಿದ್ದ ಇತರೆ ಜನ ಪ್ರತಿನಿ ಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಅವರನ್ನು ಅನುಕರಿಸಿದರು. ಇದಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಯೂ ಸೇರಿ ಗ್ರಾಮದ ವಿವಿಧೆಡೆ ಯುವಕರ ತಂಡ ಸ್ವಚ್ಛತಾ ಕಾರ್ಯ ನಡೆಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಜಾತಾ, ನಾವು ನಮ್ಮ ಮನೆ ಸುತ್ತಲಿನ ವಾತಾವರಣ ಸ್ವಚ್ಛಗೊಳಿಸಬೇಕು. ಅಂದಾಗ ಮಾತ್ರ ಗಾಂ ಧೀಜಿ ಕನಸು ನನಸಾಗಲು ಸಾಧ್ಯ ಎಂದರು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೋವಿಡ್ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆ ಪಾಲಿಸಲು ಪಿಡಿಒಗಳಿಗೂ ಸೂಚನೆ ಕೊಡಲಾಗುತ್ತಿದೆ. ನಿರ್ಲಕ್ಷ್ಯ ತೋರುವ ಹಾಗೂ ಆರೋಪಗಳು ಕೇಳಿ ಬಂದ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.