Advertisement
ಗುಡಿಬಂಡೆ ತಾಲೂಕು ತನ್ನದೇ ಆದ ಗತೈಹಾಸಿಕಾ ಇತಿಹಾಸವನ್ನು ಹೊಂದಿ, ಭೌಗೋಳಿಕವಾಗಿ ಚಿಕ್ಕದಾಗಿ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದ್ದರು ಎಲ್ಲಾ ರಂಗಗಳಲ್ಲೂ ತನ್ನದೇ ಆದ ಹೆಸರನ್ನು ಗಳಿಸಿರುವ ಪ್ರದೇಶವಾಗಿದೆ, ಆದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಗುಡಿಬಂಡೆ ತಾಲೂಕನ್ನು ಆಳುತ್ತಿರುವ ಎಲ್ಲಾ ರಾಜಕಾರಣಿಗಳು ಮಾತ್ರ, ಕಾಟಾಚಾರಕ್ಕೆ ಎಂಬಂತೆ ಊಟ ಉಪ್ಪಿನ ಕಾಯಿ ಯಾವ ರೀತಿ ಬೇಕೋ ಅದೇ ರೀತಿಯಲ್ಲಿ ಹೆಸರಿಗೆ ಮಾತ್ರ ಈ ತಾಲೂಕನ್ನು ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಮಲತಾಯಿ ಧೋರಣೆಯನ್ನು ತೋರಿ, ಬಾಗೇಪಲ್ಲಿ ತಾಲೂಕಿಗೆ ಮೊದಲ ಪ್ರಾಶಸ್ಥ್ಯ ನೀಡಿ, ಗುಡಿಬಂಡೆ ತಾಲೂಕನ್ನು ಕಡೆ ಗಣಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Related Articles
Advertisement
ಬಸ್ ಡಿಪೋಗಿಲ್ಲ ಅನುದಾನ: ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಸ್ಥಾಪನೆ ಮಾಡಲು 10 ಎಕರೆ ಜಮೀನನ್ನು ಕಂದಾಯ ಇಲಾಖೆ ಹಸ್ತಾಂತರಿಸಿ ಹತ್ತು ವರ್ಷಗಳೇ ಕಳೆದರೂ, ಸಹ ರಾಜ್ಯ ಸರ್ಕಾರದ ಧೋರಣೆಯಿಂದಾಗಿ ಅನುದಾನ ಬಿಡುಗಡೆಯಾಗದೆ ತಾಲೂಕಿನ ಜನತೆಗೆ ಗಗನ ಕುಸುಮವಾಗಿ ಪರಿಣಮಿಸಿದ್ದು, ಬಸ್ ಡಿಪೋ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಬೇಕಾಗಿದೆ.
ಪ್ರವಾಸೋದ್ಯಮಕ್ಕೆ ಇಲ್ಲ ಒತ್ತು: ತಾಲೂಕಿನಲ್ಲಿ ಸುರಸದ್ಮಗಿರಿ ಬೆಟ್ಟ, ಏಕ ಶಿಲಾ ಬೃಹಾದಾಕಾರದ ವರಹಾಗಿರಿ, ಭಾರತ ನಕ್ಷೆಯನ್ನೇ ಹೋಲುವ ಅಮಾನಿಬೈರಸಾಗರ ಸೇರಿದಂತೆ ಇನ್ನಿತರೇ ಹತ್ತು ಹಲವಾರು ಇತಿಹಾಸ ಪ್ರಸಿದ್ದ ಯಾತ್ರಾಸ್ಥಳಗಳು ಇದ್ದರು ಸಹ ರಾಜಕಾರಣೀಗಳ ನಿರ್ಲಕ್ಷ್ಯದಿಂದಾಗಿ ಇಂದು ಅವರು ಪ್ರವಾಸಿತಾಣವಾಗಿ ಅಭಿವೃದ್ಧಿ ಹೊಂದದೇ ಹಿಂದುಳಿದಿದ್ದು, ಇವುಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಬೇಕಾಗಿದೆ.
ಈಗಲಾದರೂ ಘನ ಬಸವರಾಜ ಬೊಮ್ಮಾಯಿ ಬಿ.ಜೆ.ಪಿ. ರಾಜ್ಯ ಸರ್ಕಾರ ಗುಡಿಬಂಡೆ ತಾಲೂಕಿನತ್ತ ನೋಡಿ ತಾಲೂಕಿನ ಜನತೆಗೆ ಬಜೆಟ್ ನಲ್ಲಿ ಅನುಧಾನ ಬಿಡುಗಡೆ ಮಾಡುತ್ತಾರೆಯೇ ನೋಡಬೇಕಾಗಿದೆ.
ಎನ್.ವಿ.ಗಂಗಾಧರಪ್ಪ, ಗ್ರಾ.ಪಂ. ಸದಸ್ಯರು, ಉಲ್ಲೊಡು ಗ್ರಾ.ಪಂ ಹೇಳಿಕೆ: ಗುಡಿಬಂಡೆ ತಾಲೂಕು ರಾಜ್ಯದಲ್ಲೇ ಅತಿ ಹಿಂದೂಳಿದ ತಾಲೂಕಾಗಿದ್ದು, ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಸಹ ರಾಜ್ಯ ಸರ್ಕಾರ ಈಗಿನ ಬಡ್ಜೆಟ್‌ನಲ್ಲಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಗಿದೆ.
ಮಧು.ವಿ, ಮುಖಂಡರು, ಪ್ರಜಾ ಸಂಘರ್ಷ ಸಮಿತಿ, ಗುಡಿಬಂಡೆ ಹೇಳಿಕೆ: ಗುಡಿಬಂಡೆ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಬಸ್ ಡಿಪೋ, ಕ್ರಿಡಾಂಗಣ, ಕೃಷಿ ಮಾರುಕಟ್ಟೆ, ಶಾಶ್ವತ ನೀರಾವರಿ, ಕೈಗಾರಿಕೆಗಳ ಸ್ಥಾಪನೆ ಇನ್ನಿತರೆ ಕ್ಷೇತ್ರಗಳಲ್ಲಿ ಅನುದಾನ ಬಿಡುಗಡೆ ಮಾಡಬೇಕಾಗಿದೆ.