ಅರಸೀಕೆರೆ: ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಮೂಲಭೂತ ಸೌಲಭ್ಯಗಳ ಕೊರತೆ, ಪರಿಸರ ಹಾಗೂ ಶೌಚಾಲಯನಿರ್ವಹಣೆ ಸರಿಯಲ್ಲದೇ ವಿದ್ಯಾರ್ಥಿನಿಯರ ಪಾಡು ಹೇಳ ತೀರದಾಗಿದೆ.
ಎಸ್‌ಡಿಎಂಸಿ ನಿರ್ಲಕ್ಷ್ಯ: ವಿದ್ಯಾರ್ಥಿನಿಯರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯಿಲ್ಲದೇ ಶಾಲಾ ಆವರಣದಲ್ಲಿ ಗಿಡಗಂಟೆಗಳು ಬೆಳೆದು ನಿಂತಿರುವ ದೃಶ್ಯ ಒಂದೆಡೆಯಾದರೆ, ಮತ್ತೂಂದೆಡೆ ಸೂಕ್ತ ನಿರ್ವಹಣೆ ಇಲ್ಲದೇ ಶೌಚಾಲಗಳಿಂದ ಹೊರಬರುತ್ತಿದ್ದ ಕಲುಷಿತ ನೀರಿನ ದುರ್ವಾಸನೆ ಶಾಲಾ ಆಡಳಿತ ಮಂಡಳಿ ಕಾರ್ಯ ವೈಖರಿಗೆ ಸಾಕ್ಷಿಯಾಗಿತ್ತು.
ಕೊಠಡಿಯಲ್ಲಿ ಕಸದ ರಾಶಿ: ಶಾಲಾ ಆವರಣದಲ್ಲಿ ಮತ್ತು ಕೆಲವು ಕೊಠಡಿಗಳಲ್ಲಿ ಕಸ ಕಡ್ಡಿಗಳು ರಾಶಿ ರಾಶಿ ಹಾಕಿರುವ ದೃಶ್ಯಗಳು ಕಾಣುತ್ತಿದ್ದವು. ಪಾರ್ಥೇನಿಯಂ ಗಿಡಗಳಂತೂ ಎಲ್ಲೆಂದರಲ್ಲಿ ಬೆಳೆದು ನಿಂತಿದ್ದು, ನೂರಾರು ವರ್ಷಗ ಳಿಂದ ಪಾಳು ಬಿದ್ದಿರುವ ಕಟ್ಟಡದಂತೆ ಗೋಚರಿಸುವ ವಾತಾವರಣವನ್ನು ಈ ಶಾಲಾಯ ಆವರಣ ಪ್ರತಿ ಬಿಂಬಿಸುತ್ತಿತ್ತು.ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶಪಾಲರು ಸೇರಿದಂತೆ 16 ಮಂದಿ ಅಧ್ಯಾಪಕರು ಮತ್ತುಡಿ ಗ್ರೂಪ್‌ನೌಕರರು ಇದ್ದರೂ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಅವಶ್ಯಕವಾದ ಮೂಲಭೂತ ಸೌಲಭ್ಯಗಳನ್ನು ದೊರಕಿಸಲು ಏಕೆ ಗಮನ ನೀಡುತ್ತಿಲ್ಲ ಎಂಬ ಯಕ್ಷ ಪ್ರಶ್ನೆಯೂ ಎಲ್ಲರನ್ನೂ ಕಾಡುವಂತೆ ಮಾಡಿತ್ತು.
ಶಿಕ್ಷಕರಲ್ಲಿ ಸಮನ್ವಯವಿಲ್ಲ: ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಕೆಲವು ಶಿಕ್ಷಕರಲ್ಲಿ ಸಹಮತ ಹಾಗೂ ಸಾಮರಸ್ಯತೆ ಕೊರತೆ ಪರಿಣಾಮ ಶಾಲೆಯ ಪರಿಸರ ದುಸ್ಥಿತಿಗೆ ಕಾರಣವಾಗಿದೆ ನಡೆಯುತ್ತಿದ್ದು, ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿದಲ್ಲಿ ಶಾಲೆಗೆ ಅವಶ್ಯಕ ಮೂಲಸೌಲಭ್ಯ ಸಲ್ಪಿಸಲು ಸಾದ್ಯ ವಾಗುತ್ತದೆ ಎಂಬ ಅಭಿಪ್ರಾಯ ಹೆಸರು ಹೇಳಲು ಇಚ್ಛಿಸದ ಪೋಷಕರಿಂದ ಕೇಳಿಬಂತು,